Saving Account Interest: ಈ ಬ್ಯಾಂಕ್ ಗಳು ಉಳಿತಾಯ ಖಾತೆಯ ಮೇಲೆ ಗ್ರಾಹಕರಿಗೆ ಶೇ.7.5 ರಷ್ಟು ಬಡ್ಡಿ ಪಾವತಿಸುತ್ತಿವೆ

Saving Account ROI: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ, ಇದು ಬ್ಯಾಂಕಿನ ಉಳಿತಾಯ ಖಾತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

Written by - Nitin Tabib | Last Updated : Dec 10, 2022, 07:25 PM IST
  • ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸೇವಿಂಗ್ಸ್ ತನ್ನ ಗ್ರಾಹಕರಿಗೆ
  • ಉಳಿತಾಯ ಖಾತೆಯಲ್ಲಿ 7.5% ವರೆಗೆ ಬಡ್ಡಿ ಲಾಭವನ್ನು ನೀಡುತ್ತಿದೆ.
  • ಪ್ರಸ್ತುತ ಈ ಬ್ಯಾಂಕ್ ಉಳಿತಾಯ ಖಾತೆಗೆ ಗರಿಷ್ಠ ಬಡ್ಡಿ ನೀಡುತ್ತಿದೆ.
Saving Account Interest: ಈ ಬ್ಯಾಂಕ್ ಗಳು ಉಳಿತಾಯ ಖಾತೆಯ ಮೇಲೆ ಗ್ರಾಹಕರಿಗೆ ಶೇ.7.5 ರಷ್ಟು ಬಡ್ಡಿ ಪಾವತಿಸುತ್ತಿವೆ title=
SB Account Interest Rate

Saving Account ROI: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ, ಇದು ಬ್ಯಾಂಕಿನ ಉಳಿತಾಯ ಖಾತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೀಗಾಗಿ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ ಶೇ.7.5 ರಷ್ಟು ಲಾಭವನ್ನು ನೀಡುತ್ತಿರುವ ಅಂತಹ ಕೆಲ ಬ್ಯಾಂಕ್ ಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಬನ್ನಿ ಹಾಗಾದರೆ ಆ ಬ್ಯಾಂಕುಗಳು ಯಾವುವು ತಿಳಿದುಕೊಳ್ಳೋಣ.

1. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸೇವಿಂಗ್ಸ್ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 7.5% ವರೆಗೆ ಬಡ್ಡಿ ಲಾಭವನ್ನು ನೀಡುತ್ತಿದೆ. ಪ್ರಸ್ತುತ ಈ ಬ್ಯಾಂಕ್ ಉಳಿತಾಯ ಖಾತೆಗೆ ಗರಿಷ್ಠ ಬಡ್ಡಿ ನೀಡುತ್ತಿದೆ.

2. ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯ ಮೇಲೆ 7% ಬಡ್ಡಿಯನ್ನು ಪಾವತಿಸುತ್ತಿದೆ. ಈ ಬ್ಯಾಂಕಿನ ಗ್ರಾಹಕರು ಕನಿಷ್ಠ 2,000 ರೂ.ನಿಂದ 5,000 ರೂ. ಬ್ಯಾಲೆನ್ಸ್ ಕಾಯಬೇಕು.

3. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಗಳ ಮೇಲೆ ಶೇಕಡಾ 7 ರವರೆಗಿನ ಬಡ್ಡಿದರವನ್ನು ನೀಡುತ್ತಿದೆ. ಇದೇ ವೇಳೆ, ಈ ಬ್ಯಾಂಕಿನ ಗ್ರಾಹಕರು ಕೂಡ 2,500 ರೂ.ನಿಂದ 10,000 ರೂ.ವರೆಗಿನ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಅವಶ್ಯಕವಾಗಿದೆ.

ಇದನ್ನೂ ಓದಿ-Free ಮನೆಗೆ ತನ್ನಿ ಈ ಎಲೆಕ್ಟ್ರಿಕ್ ಸ್ಕೂಟರ್! ಜೊತೆಗೆ 10000 ಡಿಸ್ಕೌಂಟ್ ಪಡೆಯಿರಿ.. ಏನಿದು ಸ್ಕ್ಕೀಮ್?

4. ಡಿಸಿಬಿ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 7% ಬಡ್ಡಿದರ ನೀಡುತ್ತಿದೆ. ಈ ಬ್ಯಾಂಕ್‌ನಲ್ಲಿ ಗ್ರಾಹಕರು ಕನಿಷ್ಠ 2,500 ರಿಂದ 5,000 ರೂ. ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ-Best Mileage Scooters: ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ... ವರದಿ ಓದಿ

5. ಬಂಧನ್ ಬ್ಯಾಂಕ್ ಮತ್ತು RBL ಬ್ಯಾಂಕ್ ತಮ್ಮ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 6.5% ಲಾಭವನ್ನು ನೀಡುತ್ತಿವೆ. ಎರಡೂ ಬ್ಯಾಂಕ್‌ಗಳಲ್ಲಿಯೂ ಕೂಡ 2,500 ರಿಂದ 5,000 ರೂ.ವರೆಗೆ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

Trending News