Gold Price Today : ಮತ್ತೆ ಏರಿಕೆಯಾಗಲಿದೆ ಚಿನ್ನ - ಬೆಳ್ಳಿ ಬೆಲೆಯಲ್ಲಿ : ಇಲ್ಲಿದೆ ಇಂದಿನ ದರ..!

Gold Price : ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರ ಕುಸಿತದ ನಂತರ ಇಂದು ಏರಿಕೆಯಾಗಿದೆ. ಹಿಂದಿನ ದಿನಗಳಲ್ಲಿ ಚಿನ್ನ 58,500 ರೂ. ಮತ್ತು ಬೆಳ್ಳಿ 71,000 ರೂ. ದಾಖಲೆಯ ಮಟ್ಟ ತಲುಪಿತ್ತು. ಆದರೆ ಇದೀಗ ಚಿನ್ನ ಮತ್ತೆ 55,000 ರೂ. ಆದರೂ ಚಿನ್ನ ಮತ್ತು ಬೆಳ್ಳಿಯಲ್ಲಿ ಕುಸಿತ ಕಾಣುತ್ತಿದೆ.

Written by - Channabasava A Kashinakunti | Last Updated : Mar 10, 2023, 04:01 PM IST
  • 58,500 ರೂ.ಗೆ ತಲುಪಿದ ಚಿನ್ನದ ಬೆಲೆ
  • MCX ನಲ್ಲಿ ಮಿಶ್ರ ದೃಷ್ಟಿಕೋನ
  • ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಏರಿಕೆ, ಬೆಳ್ಳಿಗೆ ಬೆಲೆ
Gold Price Today : ಮತ್ತೆ ಏರಿಕೆಯಾಗಲಿದೆ ಚಿನ್ನ - ಬೆಳ್ಳಿ ಬೆಲೆಯಲ್ಲಿ : ಇಲ್ಲಿದೆ ಇಂದಿನ ದರ..! title=

 Gold Price 10th March : ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರ ಕುಸಿತದ ನಂತರ ಇಂದು ಏರಿಕೆಯಾಗಿದೆ. ಹಿಂದಿನ ದಿನಗಳಲ್ಲಿ ಚಿನ್ನ 58,500 ರೂ. ಮತ್ತು ಬೆಳ್ಳಿ 71,000 ರೂ. ದಾಖಲೆಯ ಮಟ್ಟ ತಲುಪಿತ್ತು. ಆದರೆ ಇದೀಗ ಚಿನ್ನ ಮತ್ತೆ 55,000 ರೂ. ಆದರೂ ಚಿನ್ನ ಮತ್ತು ಬೆಳ್ಳಿಯಲ್ಲಿ ಕುಸಿತ ಕಾಣುತ್ತಿದೆ. ಆದರೆ ಮುಂಬರುವ ಸಮಯದಲ್ಲಿ, ಎರಡೂ ಅಮೂಲ್ಯ ಲೋಹಗಳ ದರವು ಹೆಚ್ಚಾಗುವ ನಿರೀಕ್ಷೆಯಿದೆ.

58,500 ರೂ.ಗೆ ತಲುಪಿದ ಚಿನ್ನದ ಬೆಲೆ

ಚಿನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು 58,500 ರೂ.ಗೆ ತಲುಪಿದ್ದ ಇದೀಗ ಮತ್ತೆ 55,000 ರೂ. ಬೆಳ್ಳಿಯಲ್ಲೂ ಸುಮಾರು 10000 ರೂಪಾಯಿ ಕುಸಿತವಾಗಿದ್ದು, 61,000 ಮಟ್ಟ ತಲುಪಿದೆ. ವಿಶ್ವ ಮಾರುಕಟ್ಟೆಯಲ್ಲಿನ ಆರ್ಥಿಕ ಹಿಂಜರಿತದ ನಡುವೆ, ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಏರಿಳಿತದ ಅವಧಿ ಇದೆ. ಶುಕ್ರವಾರದ ವಹಿವಾಟಿನ ವೇಳೆ ಎಂಸಿಎಕ್ಸ್ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ ಪಕ್ಕಾ! ಈ ದಿನ ಘೋಷಣೆ ಸಾಧ್ಯತೆ

MCX ನಲ್ಲಿ ಮಿಶ್ರ ದೃಷ್ಟಿಕೋನ

ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ, ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಕೊನೆಯ ದಿನಗಳಲ್ಲಿ 58,000 ದಾಟಿದ್ದ ಚಿನ್ನ, ಶುಕ್ರವಾರ 110 ರೂಪಾಯಿ ಏರಿಕೆಯಾಗಿ 10 ಗ್ರಾಂಗೆ 55411 ರೂ. ಕೊನೆಯ ದಿನಗಳಲ್ಲಿ ಬೆಳ್ಳಿ 71,000 ರೂ. ದಾಟಿತ್ತು. ಶುಕ್ರವಾರ ಪ್ರತಿ ಕೆ.ಜಿ.ಗೆ 61838 ರೂ.ಗೆ ವಹಿವಾಟು ಕಂಡು 146 ರೂ.ನಷ್ಟು ಕುಸಿದಿದೆ. ಗುರುವಾರದಂದು ಬಂಗಾರದ ಬೆಲೆ 55301 ರೂ. ಮತ್ತು ಬೆಳ್ಳಿ ಪ್ರತಿ ಕೆಜಿಗೆ 61984 ರೂ. ಇದೆ.

ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಏರಿಕೆ, ಬೆಳ್ಳಿಗೆ ಬೆಲೆ

ಶುಕ್ರವಾರದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಚಿನ್ನದಲ್ಲಿ ಏರಿಕೆ ಹಾಗೂ ಬೆಳ್ಳಿ ದರ ಇಳಿಕೆಯಾಗಿದೆ. ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​(https://ibjarates.com) ಬಿಡುಗಡೆ ಮಾಡಿರುವ ಬೆಲೆಯ ಪ್ರಕಾರ, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 221 ರೂ.ಗಳ ಏರಿಕೆಯಾಗಿ 55607 ರೂ. ಅದೇ ಸಮಯದಲ್ಲಿ ಬೆಳ್ಳಿಯ ದರದಲ್ಲಿ ಸುಮಾರು 250 ರೂ.ಗಳ ಕುಸಿತ ಕಂಡು ಪ್ರತಿ ಕೆಜಿಗೆ 61557 ರೂ.ಗೆ ತಲುಪಿದೆ.

ಇದನ್ನೂ ಓದಿ : ಏಪ್ರಿಲ್ ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ ! ಬ್ಯಾಂಕ್ ಕೆಲಸವಿದ್ದರೆ ತಕ್ಷಣ ಪೂರೈಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News