ಚಿರತೆ ಕಂಡು ಕಿರುಚಾಡಿದ ಬಸ್ ನಲ್ಲಿದ್ದ ಪ್ರವಾಸಿಗರು.
ಆತಂಕದ ಜೊತೆ ತೀರ ಹತ್ತಿರದಲ್ಲಿ ಚಿರತೆ ಕಂಡು ಪ್ರವಾಸಿಗರಲ್ಲಿ ಖುಷಿ.
ಇತ್ತೀಚಿಗೆ ಬಸ್ , ಜೀಪ್ ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿರುವ ಚಿರತೆಗಳು.
ಕೇರಳದ ವೈನಾಡಿನಲ್ಲಿ ಅಪಾರ ಪ್ರಮಾಣದ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ಹಾಗೂ ಕೆ ಆರ್ ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದರಿಂದ ಹೊಗೆನಕಲ್ ಫಾಲ್ಸ್ ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿ ಜಲಪಾತವೇ ಮುಚ್ಚಿ ಹೋಗಿತ್ತು.
Malpe Beach: ಮಲ್ಪೆ ಬೀಚ್ನಲ್ಲಿ ಯಾವುದೇ ಅಪಾಯ ಸಂಭವಿಸದಂತೆ ತಡೆಯಲು ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ಸದ್ಯಕ್ಕೆ ತಡೆ ಬೇಲಿಯನ್ನು ನಿರ್ಮಿಸಲಾಗಿದೆ. ಸಮುದ್ರ ಪ್ರಸಿದ್ಧ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಬಲೆಯನ್ನು ದಾಟಿ ಹೋಗದಂತೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನ ಶತಮಾನದಷ್ಟು ಹಳೆಯದಾದ ಹೆಸರಘಟ್ಟ ಕೆರೆಯಲ್ಲಿ ಸದ್ಯ ಸ್ವಚ್ಛತೆ ಗೌಣವಾಗಿದೆ. ಕೆರೆ ನೋಡಲು ಬರುವ ಪ್ರೇಮಿಗಳು ಪ್ರವಾಸಿಗಳು ಅಲ್ಲಲ್ಲೇ ಪ್ಲಾಸ್ಟಿಕ್ ಬಿಸಾಕಿ ನೈರ್ಮಲ್ಯವನ್ನು ಮರೆಮಾಚಿದ್ದಾರೆ.
IRCTC Tour Package: ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಬಯಸುವ ಯಾತ್ರಾರ್ಥಿಗಳಿಗಾಗಿ ಐಆರ್ಸಿಟಿಸಿ ಅದ್ಭುತ ಪ್ರವಾಸಿ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ ಮತ್ತು ವಾರಣಾಸಿಗೆ ಪ್ರವಾಸ ಕೈಗೊಳ್ಳಬಹುದಾಗಿ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
Chittadurga: ಹೊಸ ವರ್ಷ ಅಂದ್ರೆನೇ ಹಾಗೇ, ಎಲ್ಲರಿಗೂ ಸಂಭ್ರಮ. ಬಾಯಲ್ಲಿ ಯುಗಾದಿ ನಮ್ಮ ಹೊಸ ವರ್ಷ ಅಂತಾ ಹೇಳಿದರೂ, ಕೇಕ್ ಜೊತೆ, ಪಾರ್ಟಿಗೆ ಮಾಡಿದವರೇ ಹೆಚ್ಚು. ಸ್ನೇಹಿತರು, ಕುಟುಂಬದವರು, ಪ್ರೀತಿ ಪಾತ್ರರು ಒಟ್ಟಿಗೆ ಸೇರಿ ಸಂತೋಷಪಡಲು ಹೆಚ್ಚು ಪ್ರವಾಸಿ ತಾಣಗಳು ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದುರ್ಗ ಕಲ್ಲಿನ ಕೋಟೆಗೆ ಹೊಸ ವರ್ಷದ ದಿನ ಮತ್ತು ಎರಡನೇ ದಿನವೂ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಹೊಗೆನಕಲ್ ಫಾಲ್ಸ್ ಗೆ ವಾರಂತ್ಯದ ರಜಾ ದಿನಗಳು ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಫಾಲ್ಸ್ ಗೆ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಫಾಲ್ಸ್ ವೀಕ್ಷಣೆ ಮಾಡುತ್ತಿದ್ದಾರೆ.
ಪ್ರವಾಸಿಗರಿಗೆ ಗುಡ್ ನ್ಯೂಸ್, ಮಂಗಳವಾರವೂ ಬನ್ನೇರುಘಟ್ಟ ಓಪನ್
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನಕ್ಕೆ ಬರುವ ನಿರೀಕ್ಷೆ
ಬೆಳಗ್ಗೆ 9:30 ರಿಂದ ಸಂಜೆ 5ರವರೆಗೆ ಪಾರ್ಕ್ ತೆರೆದಿರುತ್ತದೆ
ಮೈಸೂರು ದಸರಾಗೆ ವಿಶೇಷ ಪ್ಯಾಕೇಜ್ ನೀಡಿದ ಕೆಎಸ್ಆರ್ಟಿಸಿ
ಮೈಸೂರಿಗೆ ಬರುವ ಪ್ರವಾಸಿಗರಿಗಾಗಿ ವಿಶೇಷ ಪ್ಯಾಕೇಜ್
ಕರ್ನಾಟಕ ಸಾರಿಗೆ, ರಾಜಹಂಸ ಬಸ್ಗಳಲ್ಲಿ 1 ದಿನ ಟೂರ್
ಅ.20 ರಿಂದ ಅ.26ರವರೆಗೆ ಪ್ಯಾಕೇಜ್ನಡಿ ಬಸ್ ಕಾರ್ಯಾಚರಣೆ
ಕೇರಳ ಮೂಲದ ಅರ್ಜುನ್ ಎಂಬವರಿಗೆ ಬೆಂಗಳೂರು ಮೂಲದ ನಾಲ್ವರು ಯುವಕರು ಅಡ್ಡಹಾಕಿ ಜಟಾಪಟಿ ನಡೆಸಿದ್ದರ ವೀಡಿಯೋವನ್ನು ಥರ್ಡ್ ಐ ಎಂಬ ಖಾತೆದಾರ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದರು.
Selfie with Wild Elephant: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜಾವಬ್ದಾರಿತನ ತೋರಿದ ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿದ ಅರಣ್ಯಾಧಿಕಾರಿಗಳು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಅಪಾಯದ ಸ್ಥಳಗಳಲ್ಲಿ ಪ್ರವಾಸಿಗರು, ಯುವಕ-ಯುವತಿಯರು, ಮಕ್ಕಳು ಜಾರುವ ಬಂಡೆ, ಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೋಜುಮಸ್ತಿ ಮಾಡ್ತಿದ್ದಾರೆ. ಏನಾದ್ರು ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಯಾರೆಂದು ಸ್ಥಳಿಯರು ಪ್ರಶ್ನಿಸಿದ್ದಾರೆ.
ದರಪಟ್ಟಿ ಗಮನಿಸಿ ರೊಚ್ಚಿಗೆದ್ದ ಪ್ರವಾಸಿಗರು ತಾವೇ ಟಿಕೆಟ್ ಖರೀದಿಸಲು ತೆರಳಿದ ವೇಳೆ ಪ್ರವಾಸಿಗರಿಗೆ ಟಿಕೆಟ್ ಕೊಡುವುದಿಲ್ಲ, ತೆಪ್ಪ ನಡೆಸುವವರಿಗಷ್ಟೇ ಟಿಕೆಟ್ ನೀಡಲಾಗುವುದು ಎಂದು ನೇರವಾಗಿಯೇ ಹೇಳಿದ್ದರಿಂದ ಸಾವಿರಾರು ಪ್ರವಾಸಿಗರು ಪ್ರತಿಭಟನೆ ನಡೆಸಿ ಹಗಲು ದರೋಡೆ ವಿರುದ್ಧ ಕಿಡಿಕಾರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.