Whatsapp Helpline : ಪಿಎಫ್ ಸಮಸ್ಯೆಗೆ ಕುಳಿತಲ್ಲೇ ಫಟಾಫಟ್ ಪರಿಹಾರ, ಇಲ್ಲಿದೆ ಹೊಸ ವ್ಯವಸ್ಥೆ

ಇಪಿಎಫ್ ಒ ತನ್ನ ಎಲ್ಲಾ 138 ಪ್ರಾಂತೀಯ ಕಚೇರಿಗಳಲ್ಲಿ  ವಾಟ್ಸಾಪ್ ಹೆಲ್ಪ್ ಲೈನ್   (Whatsapp Helpline) ಸೇವೆ ಆರಂಭಿಸಿದೆ. ಯಾವುದೇ ನಂಬರ್ ನಿಂದ  ವಾಟ್ಸಾಪ್ ಮಾಡುವ ಮೂಲಕ ತಮ್ಮ ದೂರು ದಾಖಲಿಸಿ, ಅದನ್ನು ಪರಿಹರಿಸಿಕೊಳ್ಳಬಹುದು.  

Written by - Ranjitha R K | Last Updated : Mar 4, 2021, 09:50 AM IST
  • ಕಾರ್ಮಿಕ ಭವಿಷ್ಯ ನಿಧಿ ಮಂಡಳಿ ತನ್ನ ಸದಸ್ಯರಿಗಾಗಿ ಹೊಸ ಸೇವೆಯೊಂದನ್ನು ಆರಂಭಿಸಿದೆ.
  • ಇಪಿಎಫ್ ಒ ಒಂದು ವಾಟ್ಸ್ ಆಪ್ ಸಹಾಯವಾಣಿ ಆರಂಭಿಸಿದೆ.
  • ಅದರ ಮೂಲಕ ಚಂದಾದಾರರು ಕುಳಿತಲ್ಲೇ ಇಪಿಎಫ್ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ.
Whatsapp Helpline : ಪಿಎಫ್ ಸಮಸ್ಯೆಗೆ ಕುಳಿತಲ್ಲೇ ಫಟಾಫಟ್ ಪರಿಹಾರ, ಇಲ್ಲಿದೆ ಹೊಸ ವ್ಯವಸ್ಥೆ title=
ಇಪಿಎಫ್ ಒ ಒಂದು ವಾಟ್ಸ್ ಆಪ್ ಸಹಾಯವಾಣಿ ಆರಂಭಿಸಿದೆ. (file photo)

ನವದೆಹಲಿ: ಕಾರ್ಮಿಕ ಭವಿಷ್ಯ ನಿಧಿ ಮಂಡಳಿ (Employees Provident Fund) ತನ್ನ ಸದಸ್ಯರಿಗಾಗಿ ಹೊಸ ಸೇವೆಯೊಂದನ್ನು ಆರಂಭಿಸಿದೆ. ಇಪಿಎಫ್ ಒ ಒಂದು WhatsApp ಸಹಾಯವಾಣಿ ಆರಂಭಿಸಿದ್ದು, ಅದರ ಮೂಲಕ ಚಂದಾದಾರರು ಮನೆಯಲ್ಲಿ ಕುಳಿತುಕೊಂಡೇ ಇಪಿಎಫ್ ನಲ್ಲಿರುವ (EPFO) ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ನಿಮಗೆ ಈ ಸರ್ವಿಸ್ (EPFO whatsapp helpline service)  ಬಗ್ಗೆ ಮಾಹಿತಿ ಇಲ್ಲದಿದ್ದರೆ, ಇವತ್ತೇ ತಿಳಿದುಕೊಳ್ಳಿ.

ಆ ಸಹಾಯವಾಣಿ ಯಾವುದು.?
ಇಪಿಎಫ್ ಒ (EPFO) ತನ್ನ ಎಲ್ಲಾ 138 ಪ್ರಾಂತೀಯ ಕಚೇರಿಗಳಲ್ಲಿ  ವಾಟ್ಸಾಪ್ ಹೆಲ್ಪ್ ಲೈನ್   (Whatsapp Helpline) ಸೇವೆ ಆರಂಭಿಸಿದೆ. ಯಾವುದೇ ನಂಬರ್ ನಿಂದ  ವಾಟ್ಸಾಪ್ (WhatsApp) ಮಾಡುವ ಮೂಲಕ ತಮ್ಮ ದೂರು ದಾಖಲಿಸಿ, ಅದನ್ನು ಪರಿಹರಿಸಿಕೊಳ್ಳಬಹುದು. ಇಪಿಎಫ್ ಒ ಅಧಿಕೃತ ವೆಬ್ ಸೈಟ್ (Website) https://www.epfindia.gov.inಗೆ ವಿಸಿಟ್ ಮಾಡಿ ನಿಮ್ಮ ಪ್ರಾಂತೀಯ ಕಚೇರಿಯ ವಾಟ್ಸಾಪ್ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಹುದು. 

ಇದನ್ನೂ ಓದಿ : EPF Interest: ಕಡಿತವಾಗುತ್ತಾ ಇಪಿಎಫ್ ಬಡ್ಡಿ..! ಇಂದು ನಿರ್ಧಾರ

ಇಪಿಎಫ್ ಒ ಕಾಲ್ ಸೆಂಟರ್ ನೆರವನ್ನೂ ಪಡೆಯಬಹುದು :
ವಾಟ್ಸಾಪ್ ಅಲ್ಲದೆ, EPFIGMS ಪೋರ್ಟಲ್,  CPGRAMS, facebook, ಟ್ವಿಟರ್ ಹಾಗೂ 24 ಗಂಟೆ ಕಾರ್ಯ ನಿರ್ವಹಿಸುವ ಕಾಲ್ ಸೆಂಟರ್ ಮೂಲಕವೂ ಗ್ರಾಹಕರು ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. https://www.epfindia.gov.in/site_docs/PDFs/Downloads_PDFs/WhatsApp_Helpl...  ಈ ಲಿಂಕ್ ಕ್ಲಿಕ್ ಮಾಡಿ, ಎಲ್ಲಾ ಮಾಹಿತಿ ಇದರಲ್ಲಿ ಸಿಗಲಿದೆ. 

ಭವಿಷ್ಯನಿಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗ್ರಾಹಕರು (Customers) ಸುಲಭದಲ್ಲಿ ಬಗೆಹರಿಸಿಕೊಳ್ಳಲಿ ಎಂಬ ದೃಷ್ಟಿಯಿಂದ ಸರ್ಕಾರ ಹಲವಾರು ಸೌಲಭ್ಯಗಳನ್ನು ಸೃಷ್ಟಿಸಿದೆ. ಎಲ್ಲಾ ಸಮಸ್ಯೆಗಳು ಕುಳಿತಲ್ಲೇ ಬಗೆಹರಿದುಬಿಡಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದೆ. ಹಾಗಾಗಿಯೇ WhatsApp helpline , ಸೋಶಿಯಲ್ ಮೀಡಿಯಾ ಮೂಲಕ ಗ್ರಾಹಕರಿಗೆ ನೆರವಾಗುತ್ತಿದೆ. 

ಇದನ್ನೂ ಓದಿ : Gold Price: ಹಳದಿ ಲೋಹದ ದರ ಇಳಿಕೆ: ಇಂದು ಚಿನ್ನ-ಬೆಳ್ಳಿ ದರ ಎಷ್ಟಿದೆ ನೋಡಿ!

ವೇತನದಲ್ಲಿ ಕಟ್ ಆಗುತ್ತದೆ ಪಿಎಫ್ :
ಯಾವುದೇ ಕಾರ್ಮಿಕರ ಮೂಲ ವೇತನದ ಶೇ. 12 ಭಾಗ ಪಿಎಫ್ (PF) ಖಾತೆಗೆ ಜಮೆ ಆಗುತ್ತದೆ. ಅಷ್ಟೇ ಪ್ರಮಾಣದ ಭಾಗವನ್ನು ಉದ್ಯೋಗದಾತ ಕೂಡಾ ತನ್ನ ಕಾರ್ಮಿಕರ ಪಿಎಫ್ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಇದಕ್ಕೆ ಸರ್ಕಾರ ವಾರ್ಷಿಕ ಬಡ್ಡಿ (Interest) ನೀಡುತ್ತದೆ. ಸಾಮಾನ್ಯವಾಗಿ ಬೇರೆ ಖಾತೆಗಳಿಗೆ ಹೋಲಿಸಿದರೆ ಪಿಎಫ್ ಬಡ್ಡಿ ಅಧಿಕವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News