The Untold Story of the Tata Nano: ರತನ್ ಟಾಟಾ ಯಾವಾಗಲೂ ಭಾರತದ ಸಾಮಾನ್ಯ ಜನರ ಜೀವನವನ್ನು ಹೇಗೆ ಸುಧಾರಿಸುವುದು? ಅನ್ನೋದರ ಬಗ್ಗೆಯೇ ಯೋಚಿಸುತ್ತಿದ್ದರು. ಈ ಹಿನ್ನೆಲೆ ಕಾರು ಕೊಳ್ಳಲಾಗದ ಮಧ್ಯಮ ವರ್ಗದವರ ಕಾರು ಓಡಿಸುವ ಕನಸನ್ನು ಹೇಗೆ ನನಸು ಮಾಡಬಹುದು? ಎಂದು ಅವರು ಸದಾ ಯೋಚಿಸಿದ್ದರು. ಇದರ ಪರಿಣಾಮವೇ ಭಾರತದ ಏಕೈಕ ಐಷಾರಾಮಿ ಕಾರು ಟಾಟಾ ನ್ಯಾನೋ ಕಾರಿನ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಆಗ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 1 ಲಕ್ಷ ರೂ.ಗೂ ಕಾರು ಸಿಗಬಹುದೆಂಬ ಕುತೂಹಲ ಎಲ್ಲರ ಮನದಲ್ಲಿ ಮೂಡಿತ್ತು. ಆದರೆ ರತನ್ ಟಾಟಾ ನಿಜವಾಗಿಯೂ ಅದನ್ನು ಮಾಡಿ ತೋರಿಸಿದರು. ಮಧ್ಯಮ ವರ್ಗದವರು & ಬಡವರ ಕಾರು ಖರೀದಿಸುವ ಆಸೆಯನ್ನು ಟಾಟಾ ನ್ಯಾನೋ ಮೂಲಕ ನನಸು ಮಾಡಿದರು.
2008 ಆಟೋ ಎಕ್ಸ್‌ಪೋದಲ್ಲಿ ಮೊದಲ ಪ್ರದರ್ಶನ
ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಟಾಟಾ ನ್ಯಾನೋ ಮಧ್ಯಮ ವರ್ಗದವರಿಗೆ ಸೌಕರ್ಯವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. 2000ರ ದಶಕದ ಆರಂಭದಲ್ಲಿ ಪ್ರಾರಂಭವಾದ ಈ ಯೋಜನೆಯು ಮಧ್ಯಮ ವರ್ಗದ ಭಾರತೀಯರಿಗೆ ಸುರಕ್ಷಿತ ಮತ್ತು ಕೈಗೆಟುಕುವ ನಾಲ್ಕು-ಚಕ್ರ ವಾಹನವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಈ ಕಾರನ್ನು ಮೊದಲ ಬಾರಿಗೆ 2008ರಲ್ಲಿ ನವದೆಹಲಿಯ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಳಿಸಲಾಯಿತು. ನ್ಯಾನೋವನ್ನು ಮಾರ್ಚ್ 2009ರಲ್ಲಿ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಪ್ರೀತಿ ಸಿಗಲಿಲ್ಲ, ಸೋಲು ಕುಗ್ಗಿಸಲಿಲ್ಲ... ದಂತಕಥೆ ʼರತನ್ ರತ್ನʼದಂತಹ ಈ ಮಾತುಗಳು ನಿಮ್ಮ ಜೀವನವನೇ ಬದಲಾಯಿಸುತ್ತವೆ..!
ನ್ಯಾನೋ ಕಾರನ್ನು ಏಕೆ ಬಿಡುಗಡೆ ಮಾಡಿದರು?
ನ್ಯಾನೋ ಕಾರು ಬಿಡುಗಡೆಯಾದ ಬಳಿಕ ರತನ್ ಟಾಟಾ ಅವರು ಈ ಐಡಿಯಾ ಹೇಗೆ ಬಂತು ಅನ್ನೋದರ ಬಗ್ಗೆ ಸ್ವತಃ ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದರು. ತಮ್ಮ ಪೋಸ್ಟ್‌ನಲ್ಲಿ, ʼಇಂತಹ ಕಾರನ್ನು ನಿರ್ಮಿಸಲು ನನಗೆ ಸ್ಫೂರ್ತಿ ನೀಡಿದ್ದು ಸ್ಕೂಟರ್‌ಗಳಲ್ಲಿ ಓಡಾಡುತ್ತಿದ್ದ ಬಹುತೇಕ ಭಾರತೀಯ ಕುಟುಂಬಗಳು. ಪ್ರತಿದಿನವೂ ನಾನು ಸ್ಕೂಟರ್‌ಗಳಲ್ಲಿ ಓಡಾಡುತ್ತಿದ್ದ ಮಧ್ಯಮ ವರ್ಗದ ಜನರನ್ನು ಗಮನಿಸುತ್ತಿದ್ದೆ. ಗಂಡ-ಹೆಂಡತಿ ತಮ್ಮ ಮಗುವಿನೊಂದಿಗೆ ಸ್ಕೂಟರ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಒಂದು ದಿನ ನಾನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಳೆ ಬಂದಿತ್ತು. ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ದಂಪತಿ ತಮ್ಮ ಮಕ್ಕಳ ಜೊತೆಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನು ಕಂಡು ನನಗೆ ತುಂಬಾ ಬೇಸರವಾಯಿತು. ಹೀಗಾಗಿಯೇ ನಾನು ಮಧ್ಯಮ ವರ್ಗದ ಜನರಿಗಾಗಿ ಏನನ್ನಾದರೂ ಮಾಡಬೇಕು ಅಂತಾ ಆಲೋಚಿಸುತ್ತಿದ್ದೆʼ ಎಂದು ಹೇಳಿದ್ದರು.
ʼಈ ಸಂಬಂಧ ನಾನು ಹಲವರೊಂದಿಗೆ ಚರ್ಚೆ ನಡೆಸಿದ್ದೆ. ಮೊದಲು ನಾವು ಸ್ಕೂಟರ್‌ಗಳನ್ನು ಹೇಗೆ ಸುಧಾರಿಸಬಹುದು ಅಂತಾ ಯೋಚಿಸಿದ್ದೇವು. ಅಂತಿಮವಾಗಿ ಮಧ್ಯಮ ವರ್ಗದವರ ಬಜೆಟ್‌ಗೆ ಹೊಂದುವಂತೆ ಕನಿಷ್ಠ 1 ಲಕ್ಷ ರೂ. ಬೆಲೆಯ ಕಾರನ್ನು ಮಾರಾಟಕ್ಕೆ ತರಲು ಯೋಜನೆ ರೂಪಿಸಲಾಯಿತು. ದೇಶದಾದ್ಯಂತ ರತನ್ ಟಾಟಾ ಅವರು ಕಡಿಮೆ ಬೆಲೆಗೆ ಹೊಸ ಕಾರು ಬಿಡುಗಡೆ ಮಾಡುತ್ತಾರೆಂಬ ಸುದ್ದಿ ವೇಗವಾಗಿ ಹಬ್ಬಿತ್ತು. ಅಂದಿನ ಜನರಿಗೆ ನೂತನ ಕಾರಿಗೆ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಹೀಗಾಗಿ ನಾವು ಎಲ್ಲಾ ರೀತಿ ಪ್ಲ್ಯಾನ್ ಮಾಡಿ ಅಂತಿಮವಾಗಿ 2008ರಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಟಾಟಾ ನ್ಯಾನೋವನ್ನು ಪ್ರದರ್ಶನಕ್ಕೆ ಇಟ್ಟಿದ್ದೇವು. ಮರುವರ್ಷ ಅಂದರೆ 2009ರಲ್ಲಿ ಈ ಕಾರನ್ನು ಅದ್ದೂರಿಯಾಗಿ ಮಾರುಕಟ್ಟೆಯಾಗಿ ಪರಿಚಯಿಸಲಾಯಿತು. ಕಡಿಮೆ ಬೆಲೆಯ ನ್ಯಾನೋ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಸಲು ಮುಂದಾಗಿದ್ದರುʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Watch viral video: ಉದ್ಯಮಿ ರತನ್ ಟಾಟಾ ಬಗ್ಗೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ ಹೇಳಿದ್ದೇನು ಗೊತ್ತಾ?
ಪುಟ್ಟ ಕಾರಾಗಿದ್ದರೂ ಸಹ ಟಾಟಾ ನ್ಯಾನೋ ಹಲವಾರು ವೈಶಿಷ್ಟ್ಯಗಳನ್ನು ಹೊಂದಿತ್ತು. ಈ ಕಾರಿನಲ್ಲಿ 4 ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿತ್ತು. 624 CC ಸಾಮರ್ಥ್ಯದ ಪೆಟ್ರೋಲ್/CNG ಎಂಜಿನ್ ಆಯ್ಕೆಯನ್ನು ಹೊಂದಿದ್ದ ಈ ಕಾರು ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ 21.9 ರಿಂದ 36 KMPLವರೆಗೆ ಮೈಲೇಜ್ ನೀಡುತ್ತಿತ್ತು. ಟಾಟಾ ನ್ಯಾನೋ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹಿರಿಮೆಗೆ ಪಾತ್ರವಾದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ನಾನಾ ಕಾರಣಗಳಿಗೆ ವರ್ಷದಿಂದ ವರ್ಷಕ್ಕೆ ಮಾರಾಟದ ಪ್ರಮಾಣ ಕುಸಿತವಾಗುತ್ತಿತ್ತು. ಈ ಹಿನ್ನೆಲೆ 2018ರಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಬಿಡುಗಡೆಯಾದ ಕೆಲವು ವರ್ಷಗಳ ನಂತರ, ರತನ್ ಟಾಟಾ ಅವರು ಒಮ್ಮೆ ಟಾಟಾ ನ್ಯಾನೋ ವೈಫಲ್ಯಕ್ಕೆ ಕಳಪೆ ಮಾರ್ಕೆಟಿಂಗ್ ಕಾರಣವೆಂದು ದೂಷಿಸಿದ್ದರು.
ಟಾಟಾ ನ್ಯಾನೋ ವಿನ್ಯಾಸಗೊಳಿಸಿದವರ ಸರಾಸರಿ ವಯಸ್ಸು 25-26 ವರ್ಷ ಎಂದು ರತನ್ ಟಾಟಾ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ʼ1 ಲಕ್ಷದೊಳಗೆ ಕೈಗೆಟುಕುವ ಬೆಲೆಯ ಕಾರನ್ನು ಅಭಿವೃದ್ಧಿಪಡಿಸಲು ಇದು ಉತ್ತೇಜಕ ಪ್ರಯತ್ನವಾಗಿದೆ. ನಮ್ಮ ತಪ್ಪು ಎಂದರೆ ಟಾಟಾ ಮೋಟಾರ್ಸ್‌ನ ಸೇಲ್ಸ್ ಜನರದ್ದು. ಈ ಕಾರನ್ನು ಅಗ್ಗದ ಕಾರು ಎಂದು ಮಾರಾಟ ಮಾಡಿದ್ದೇ ನಷ್ಟಕ್ಕೆ ಕಾರಣವಾಯಿತು, ಆದರೆ ಇದನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ಕಾರು ಎಂದು ನಾವು ಮಾರಾಟ ಮಾಡಬೇಕಾಗಿತ್ತುʼ ಎಂದು ಹೇಳಿಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.