Women's Day 2022: ಮಹಿಳೆಯರ ಪರವಾಗಿ ಎಲ್ಲಾ ಕಂಪನಿಗಳಿಗೆ ಮನವಿ ಮಾಡಿದ EPFO, ಈ ಚಿಕ್ಕ ಕೆಲಸ ಮಾಡಿ, ಸಿಗಲಿದೆ ದೊಡ್ಡ ಲಾಭ

EPFO Latest News: ಮಹಿಳಾ ದಿನದ ಸಂದರ್ಭದಲ್ಲಿ, EPFO ಎಲ್ಲಾ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ.100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಆದೇಶ ನೀಡಿದೆ, ಇದರಿಂದ ಅವರಿಗೆ ಮಹಿಳಾ ದಿನಾಚರಣೆಯ ದಿನ ಮಾನ್ಯತೆ ನೀಡಿ, ಗೌರವಿಸಬಹುದು ಎಂದು ಅದು ಹೇಳಿದೆ.

Written by - Nitin Tabib | Last Updated : Mar 8, 2022, 02:46 PM IST
  • EPFO ಖಾತೆದಾರರಿಗೆ ಇ-ನಾಮನಿರ್ದೇಶನ ಅನಿವಾರ್ಯ
  • ಇ-ನಾಮಿನೆಶನ್ ಇಲ್ಲದೆ PF ಬ್ಯಾಲೆನ್ಸ್ ಪರೀಶೀಲಿಸಲು ಸಾಧ್ಯವಿಲ್ಲ.
  • ನಾಮಿನಿಗೆ 7 ಲಕ್ಷ ರೂ.ಗಳವರೆಗೆ ವಿಮಾ ಕವರೇಜ್ ಸಿಗುತ್ತದೆ
Women's Day 2022: ಮಹಿಳೆಯರ ಪರವಾಗಿ ಎಲ್ಲಾ ಕಂಪನಿಗಳಿಗೆ ಮನವಿ ಮಾಡಿದ EPFO, ಈ ಚಿಕ್ಕ ಕೆಲಸ ಮಾಡಿ, ಸಿಗಲಿದೆ ದೊಡ್ಡ ಲಾಭ  title=
EPFO Latest News (File Photo)

ನವದೆಹಲಿ: EPFO Latest News - ಇಂದು ಅಂತರಾಷ್ಟ್ರೀಯ ಮಹಿಳಾ ದಿನ (International Women's Day). ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಘೋಷಣೆ ಮಾಡಿದೆ. EPFO ಎಲ್ಲಾ ಕಂಪನಿಗಳನ್ನು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ. 100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಕೇಳಿಕೊಂಡಿದೆ, ಇದರಿಂದ ಅವರನ್ನು ಮಹಿಳಾ ದಿನದಂದು ಗುರುತಿಸಬಹುದು ಮತ್ತು ಗೌರವಿಸಬಹುದು ಎಂದು ಅದು ಹೇಳಿದೆ.

EPFO e-Nomination ಅನಿವಾರ್ಯ
EPFO ನಾಮಿನಿಯ ಮಾಹಿತಿಯನ್ನು ಒದಗಿಸಲು ಇ-ನಾಮನಿರ್ದೇಶನದ ಸೌಲಭ್ಯವನ್ನು ಸಹ ಒದಗಿಸುತ್ತಿದೆ. ಇದರಲ್ಲಿ ನಾಮನಿರ್ದೇಶನ ಮಾಡದವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ನಾಮಿನಿಯ ಹೆಸರು, ಜನ್ಮ ದಿನಾಂಕದಂತಹ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬೇಕು. EPF ಖಾತೆದಾರರು ಇ-ನಾಮನಿರ್ದೇಶನ (EPF/EPS nomination) ಮಾಡಬೇಕು ಎಂದು EPFO ​​ತನ್ನ ತಿಳಿಸಿದೆ. ಇದರಿಂದ, ಖಾತೆದಾರರ ಮರಣದ ಸಂದರ್ಭದಲ್ಲಿ PF, ಪಿಂಚಣಿ (EPS) ಮತ್ತು ವಿಮೆ (EDLI) ಗೆ ಸಂಬಂಧಿಸಿದ ಹಣವನ್ನು ಹಿಂಪಡೆಯಲು ನಾಮಿನಿ / ಕುಟುಂಬದ ಸದಸ್ಯರಿಗೆ ಸಹಾಯವಾಗಲಿದೆ. ಇದರೊಂದಿಗೆ, ನಾಮಿನಿ ಆನ್‌ಲೈನ್‌ನಲ್ಲಿಯೂ ಕೂಡ ಕ್ಲೈಮ್ ಮಾಡಬಹುದು.

ಇದನ್ನೂ ಓದಿ-08-03-2022 Today Gold Price:ಆಭರಣ ಪ್ರಿಯರಿಗೆ ಬ್ಯಾಡ್ ನ್ಯೂಸ್.. ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆ

ಈ ಕುರಿತು ಟ್ವೀಟ್ ಮಾಡಿರುವ EPFO, "ಡಿಸೆಂಬರ್ 2021 ಮತ್ತು ಜನವರಿ 2022ಕ್ಕೆ ಇ-ನಾಮನಿರ್ದೇಶನ ಮಾಡಲು ಸಾಧ್ಯವಾಗದ ಕಂಪನಿಗಳು ಈ 'ಘೋಷಣೆ'ಗೆ ಅರ್ಹವಾಗಿವೆ ಎಂದು ಹೇಳಿದೆ. ಅಂತರಾಷ್ಟ್ರೀಯ ಮಹಿಳಾ ದಿನದಂದು, ಇ-ನಾಮನಿರ್ದೇಶನವನ್ನು ಸಲ್ಲಿಸಲು, ಅವರ ಕುಟುಂಬಗಳಿಗೆ ಅಧಿಕಾರ ನೀಡಲು ಮತ್ತು ಸಾಮಾಜಿಕ ಭದ್ರತೆಗೆ ಭರವಸೆ ನೀಡಲು ನಾವು ಮನವಿ ಮಾಡುತ್ತೇವೆ" ಎಂದು ಹೇಳಿದೆ.

ಇದನ್ನೂ ಓದಿ-CNG Price Hike: ಪೆಟ್ರೋಲ್‌ಗಿಂತ ಮೊದಲು ಸಿಎನ್‌ಜಿ ದರ ಏರಿಕೆ, ನಾಳೆಯಿಂದ ಮತ್ತಷ್ಟು ದುಬಾರಿ!

EPFO ಸದಸ್ಯರು, ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಸುರೆನ್ಸ್ (EDLI Insurance Cover) ಅಡಿಯಲ್ಲಿ ವಿಮಾ ರಕ್ಷಣೆಯ ಸೌಲಭ್ಯವನ್ನು ಕೂಡ ಪಡೆಯುತ್ತಾರೆ. ಈ ಯೋಜನೆಯಲ್ಲಿ, ನಾಮಿನಿಗೆ ಗರಿಷ್ಠ ರೂ 7 ಲಕ್ಷ ವಿಮಾ ರಕ್ಷಣಾ ಪಾವತಿಸಲಾಗುತ್ತದೆ. ಯಾವುದೇ ನಾಮನಿರ್ದೇಶನವಿಲ್ಲದೆ ಸದಸ್ಯರು ಮರಣಹೊಂದಿದರೆ, ನಂತರ ಹಕ್ಕು ಪ್ರಕ್ರಿಯೆಯಲ್ಲಿ ತೊಂದರೆಗಳು ಎದುರಾಗುತ್ತವೆ. ಹಾಗಾದರೆ ಆನ್‌ಲೈನ್‌ನಲ್ಲಿ ನಾಮಿನೇಷನ್ ಭರ್ತಿ ಮಾಡಲು ಮರೆಯಬೇಡಿ ಎಂದು EPFO ಹೇಳಿದೆ.

ಇದನ್ನೂ ಓದಿ-Rupees To Dollar: ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಡಾಲರ್ ಎದುರು ನೆಲಕಚ್ಚಿದ ರೂಪಾಯಿ, ಪ್ರಭಾವ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News