ಹೊಸ ವರ್ಷದಲ್ಲಿ ಹೊಸ ಲುಕ್ ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ Yezdi

ಈ ವರ್ಷದ ಆರಂಭದಲ್ಲಿ, ಕ್ಲಾಸಿಕ್ ಲೆಜೆಂಡ್ಸ್ ಯೆಝ್ಡಿ ರೋಡ್ಕಿಂಗ್ ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ. ಇದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಬಗ್ಗೆ ಬಹಳಷ್ಟು ದಿನಗಳಿಂದ ಮಾತು ಕೇಳಿ ಬಂದಿತ್ತು.

Written by - Ranjitha R K | Last Updated : Dec 23, 2021, 02:18 PM IST
  • ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಇಷ್ಟಪಡುವ ಕ್ಲಾಸಿಕ್ ಬೈಕ್‌ Yezzdy
  • ಮತ್ತೆ ಲಾಂಚ್ ಮಾಡಲು ಎಲ್ಲಾ ಸಿದ್ದತೆ ನಡೆಸಿದೆ ಕ್ಲಾಸಿಕ್ ಲೆಜೆಂಡ್ಸ್
  • ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಬಿಡುಗಡೆ ಮಾಡಿದ ಕಂಪನಿ
ಹೊಸ ವರ್ಷದಲ್ಲಿ ಹೊಸ ಲುಕ್ ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ Yezdi title=
ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಬಿಡುಗಡೆ ಮಾಡಿದ ಕಂಪನಿ (photo zee news)

ನವದೆಹಲಿ : ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಇಷ್ಟಪಡುವ ಕ್ಲಾಸಿಕ್ ಬೈಕ್‌ಗಳಲ್ಲಿ Yezzdy ಕೂಡಾ  ಒಂದಾಗಿತ್ತು. ಇದೀಗ ಕ್ಲಾಸಿಕ್ ಲೆಜೆಂಡ್ಸ್ ಅದನ್ನು ಮತ್ತೆ ಲಾಂಚ್ ಮಾಡಲು ಎಲ್ಲಾ ಸಿದ್ದತೆ ನಡೆಸಿದೆ. ಆದರೆ ಈ ಬಾರಿ ಇದು ಜಾವಾ ಮೋಟಾರ್‌ಸೈಕಲ್‌ನ ಭಾಗವಾಗಿರುವುದಿಲ್ಲ. ಕಂಪನಿಯು ಸ್ವತಂತ್ರವಾಗಿ ಇದನ್ನು ಮಾರಾಟ ಮಾಡಲಿದೆ. ಇತ್ತೀಚೆಗೆ, Yezzi Motorcycles ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೊಸ Matercycle ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೊಸ ಮೋಟಾರ್‌ಸೈಕಲ್‌ನ ಆಕಾರವನ್ನು ಹಾಲಿವುಡ್ ಚಲನಚಿತ್ರ ಮ್ಯಾಟ್ರಿಕ್ಸ್‌ನ ಮಾದರಿಯಲ್ಲಿ ಹೇಳಲಾಗಿದೆ. ಮಹೀಂದ್ರಾ & ಮಹೀಂದ್ರಾ ಕ್ಲಾಸಿಕ್ ಲೆಜೆಂಡ್ಸ್‌ನಲ್ಲಿ ಹೂಡಿಕೆ ಮಾಡಿದ ನಂತರ ಜಾವಾ ಮೋಟಾರ್‌ಸೈಕಲ್‌ಗಳು, BSA ಮತ್ತು YZD ಮತ್ತೆ ಮಾರುಕಟ್ಟೆಗೆ ಬರಲಿವೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. 

ಅಡ್ವೆಂಚರರ್ ಟೂರಿಂಗ್ ಮತ್ತು ಅರ್ಬನ್ ಸ್ಕ್ರ್ಯಾಂಬಲ್ ಎರಡು ಮಾದರಿಗಳಾಗಿವೆ :
ಈ ವರ್ಷದ ಆರಂಭದಲ್ಲಿ, ಕ್ಲಾಸಿಕ್ ಲೆಜೆಂಡ್ಸ್ ಯೆಝ್ಡಿ ರೋಡ್ಕಿಂಗ್ (Yezdi Roadking) ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ. ಇದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಬಗ್ಗೆ ಬಹಳಷ್ಟು ದಿನಗಳಿಂದ ಮಾತು ಕೇಳಿ ಬಂದಿತ್ತು. ಈಗ ಕಂಪನಿಯು ಇದರ ಟೀಸರ್ ಬಿಡುಗಡೆ (Teaser release) ಮಾಡುವ ಮೂಲಕ  ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಜಾವಾ ಈಗಾಗಲೇ ತನ್ನ ರೆಟ್ರೊ ಥೀಮ್ ಮೋಟಾರ್‌ಸೈಕಲ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.  ಇದೀಗ Yezdi ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹೊಸ ಮೋಟಾರ್‌ಸೈಕಲ್ (Motor cycle)ಅನ್ನು ರೆಟ್ರೊ ಥೀಮ್‌ನಲ್ಲಿಯೂ ನೀಡಲಾಗುವುದು. 2022 ರಲ್ಲಿ ಇದು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಈ ಮೋಟಾರ್‌ಸೈಕಲ್ ಅನ್ನು ಅಡ್ವೆಂಚರ್ ಟೂರಿಂಗ್ ಮತ್ತು ಅರ್ಬನ್ ಸ್ಕ್ರ್ಯಾಂಬಲ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡಬಹುದು.

ಇದನ್ನೂ ಓದಿ :  LIC Nominee: LIC ಪಾಲಿಸಿಯಲ್ಲಿ ನಾಮಿನಿಯನ್ನು ಬದಲಾಯಿಸಲು ಬಯಸುವಿರಾ?
 
2022 ರ ಜನವರಿ ಮಧ್ಯದಲ್ಲಿ ಲಾಂಚ್!
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahendra) ಅವರು ಟ್ವಿಟ್ಟರ್ ಮೂಲಕ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಒಂದೆಡೆ, ಯೆಜ್ಡಿ (Yezdi) ಸ್ವತಂತ್ರವಾಗಿದೆ ಎಂದು ಜಾವಾ ಮೋಟಾರ್‌ಸೈಕಲ್ಸ್ ಘೋಷಿಸಿದೆ. ಮತ್ತೊಂದೆಡೆ, ಯೆಜ್ಡಿ ತನ್ನ ಖಾತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ತೆರೆದಿದೆ. ಟ್ರೇಡ್ ಮಾರ್ಕ್ ಮಾಡಿರುವ ಹೆಸರಿನಿಂದ ದೇಶದಲ್ಲಿ ಕಂಪನಿಯ ಮೊದಲ ಮೋಟಾರ್‌ಸೈಕಲ್ ಯೆಝಿ ರೋಡ್‌ಕಿಂಗ್ ಆಗಿರುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಹಿಂದೆ ಕೂಡಾ ಮಾರುಕಟ್ಟೆಯಲ್ಲಿ ಅದೇ ಹೆಸರಿನಲ್ಲಿ ಈ ಮೋಟಾರ್ ಸೈಕಲ್ ಅನ್ನು ಮಾರಾಟ ಮಾಡಲಾಗಿತ್ತು. ಕಂಪನಿಯು ಈ ಬ್ರಾಂಡ್‌ನ ಮೋಟಾರ್‌ಸೈಕಲ್‌ಗಳನ್ನು ಭಾರತದಲ್ಲಿ ವಿಭಿನ್ನ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡುತ್ತದೆ. ಕಂಪನಿಯ ಮೊದಲ ಮೋಟಾರ್‌ಸೈಕಲ್ ಯೆಝ್ಡಿ ರೋಡ್‌ಕಿಂಗ್ ಆಗಿರಬಹುದು. ಇದನ್ನು ಜನವರಿ 2022 ರ ಮಧ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ :  ಅರ್ಧ ಕೆ.ಜಿ ಟೊಮೆಟೋಗೆ ಕೇವಲ ಒಂದು ರೂಪಾಯಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News