ZEEL-Invesco Case: Zee ಜೊತೆಗೆ ವಿಲೀನಕ್ಕೆ ಸಿದ್ಧತೆ ಇತ್ತು, ಪುನೀತ್ ಗೋಯೆಂಕಾ ಅವರನ್ನು MD ಹಾಗೂ CEO ಮಾಡುವ ಪ್ರಸ್ತಾಪವಿತ್ತು

ZEEL-Invesco Case: ಝೀ ಎಂಟರ್ಟೈನ್ಮೆಂಟ್ ಹಾಗೂ ಇನ್ವೆಸ್ಕೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

Written by - Nitin Tabib | Last Updated : Oct 13, 2021, 09:46 PM IST
  • ಹೊಸ ತಿರುವು ಪಡೆದುಕೊಂಡ ಝೀ-ಇನ್ವೆಸ್ಕೋ ಪ್ರಕರಣ.
  • ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿದ ರಿಲಯನ್ಸ್.
  • 'ಝೀ ಮತ್ತು ಇನ್ವೆಸ್ಕೋ ನಡುವಿನ ವಿವಾದದಲ್ಲಿ ಹೆಸರು ಕೇಳಿ ಬಂದಿರುವುದಕ್ಕೆ ನಾವು ವಿಷಾದಿಸುತ್ತೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸರಿಯಲ್ಲ'.
ZEEL-Invesco Case: Zee ಜೊತೆಗೆ ವಿಲೀನಕ್ಕೆ ಸಿದ್ಧತೆ ಇತ್ತು, ಪುನೀತ್ ಗೋಯೆಂಕಾ ಅವರನ್ನು MD ಹಾಗೂ CEO ಮಾಡುವ ಪ್ರಸ್ತಾಪವಿತ್ತು title=
Also, people in the know of the matter say that 6 names for Board of Directors suggested by Invesco are related to Reliance in some way or the other and this is a matter which now needs to be investigated by SEBI and other agencies.

ZEEL-Invesco Case: ಝೀ  ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಮತ್ತು ಇನ್ವೆಸ್ಕೋ (Invesco) ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಇನ್ವೆಸ್ಕೋ ತಾನೇ ಹೆಣೆದ ಜಾಲದಲ್ಲಿ ಸಿಲುಕಿಕೊಂಡಿರುವಂತೆ ತೋರುತ್ತಿದೆ. ಇನ್ವೆಸ್ಕೋ ತನ್ನ ಹೇಳಿಕೆಯಲ್ಲಿ ZEE  ಅನ್ನು ರಿಲಯನ್ಸ್ (Reliance) ಜೊತೆ ವಿಲೀನಗೊಳಿಸಲು ಪ್ರಯತ್ನಿಸಿದೆ ಎಂದು ಹೇಳಿತ್ತು. ಇದೀಗ ರಿಲಯನ್ಸ್ ಕೂಡ ಈ ಪ್ರಕರಣದಲ್ಲಿ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಿಲಯನ್ಸ್ ತನ್ನ ಮಾಧ್ಯಮ ಪ್ರಾಪರ್ಟಿಗಳನ್ನು ಝೀ  ಜೊತೆ ವಿಲೀನಗೊಳಿಸಲು ಪ್ರಯತ್ನಿಸಿರುವುದಾಗಿ ಹೇಳಿದೆ. ಆದರೆ  ಪಾಲುದಾರಿಕೆಯ ವಿಷಯದಲ್ಲಿ ಒಮ್ಮತ ಮೋಡಿ ಬರಲಿಲ್ಲ  ಆದರೆ ವಿಲೀನದ ನಂತರ ಪುನೀತ್ ಗೋಯೆಂಕಾ (Punit Goenka) ಅವರನ್ನು MD ಮತ್ತು CEO ಆಗಿ ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು ಎಂದು ರಿಲಯನ್ಸ್ ದೃಢಪಡಿಸಿದೆ. ಇನ್ವೆಸ್ಕೋ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ರಿಲಯನ್ಸ್ 'ಝೀ  ಮತ್ತು ಇನ್ವೆಸ್ಕೋ ನಡುವಿನ ವಿವಾದದಲ್ಲಿ ಹೆಸರು ಕೇಳಿ ಬಂದಿರುವುದಕ್ಕೆ  ನಾವು ವಿಷಾದಿಸುತ್ತೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸರಿಯಲ್ಲ'. ಎಂದು ಹೇಳಿದೆ.

ವಿಲೀನ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದಾಗಿ ಹೇಳಿತ್ತು ಇನ್ವೆಸ್ಕೋ 
ಈ ಪ್ರಕರಣದಲ್ಲಿ ಇನ್ವೆಸ್ಕೋ ಪಾತ್ರವನ್ನು ಅರ್ಥವಾಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ. SEBI ಮತ್ತು ಇತರ ಏಜೆನ್ಸಿಗಳು ಈಗ ಈ ವಿಷಯವನ್ನು ತನಿಖೆ ಮಾಡಬೇಕು. ಏತನ್ಮಧ್ಯೆ, ರಿಲಯನ್ಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಫೆಬ್ರವರಿ-ಮಾರ್ಚ್ 2021 ರಲ್ಲಿ, ನಮ್ಮ ಪ್ರತಿನಿಧಿಗಳು ಮತ್ತುZEE ಸಂಸ್ಥಾಪಕ ಕುಟುಂಬದ ಸದಸ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿರುವ ಪುನೀತ್ ಗೋಯೆಂಕಾ (Punit Goenka) ನಡುವಿನ ನೇರ ಮಾತುಕತೆಯಲ್ಲಿ ರಿಲಯನ್ಸ್‌ಗೆ ಇನ್ವೆಸ್ಕೋ ಸಹಾಯ ಮಾಡಿದೆ ಎಂದು ಕೂಡ ಹೇಳಲಾಗಿದೆ.

ವಿಲೀನ ಪ್ರಕ್ರಿಯೆಗೆ ದೊಡ್ಡ ಪ್ರಸ್ತಾವನೆ ಸಲ್ಲಿಸಲಾಗಿತ್ತು
ನಮ್ಮ ಮಾಧ್ಯಮ ವ್ಯವಹಾರವನ್ನು ZEE ಯೊಂದಿಗೆ ವಿಲೀನಗೊಳಿಸಲು ನಾವು ಒಂದು ದೊಡ್ಡ ಪ್ರಸ್ತಾಪವನ್ನು ಸಲ್ಲಿಸಿದ್ದೇವು. ZEE ಮತ್ತು ನಮ್ಮ ಎಲ್ಲಾ ಆಸ್ತಿಗಳ ನ್ಯಾಯಯುತ ಮೌಲ್ಯಮಾಪನವನ್ನು ನಡೆಸಲಾಗಿತ್ತು. ZEE ಮತ್ತು ನಮ್ಮಎಲ್ಲಾ ಮಾಧ್ಯಮ ಆಸ್ತಿಗಳ  ಮೌಲ್ಯಮಾಪನಗಳನ್ನು ಸಮಾನ ನಿಯತಾಂಕಗಳಲ್ಲಿ ನಿಗದಿಪಡಿಸಲಾಗಿದೆ. ಈ ಪ್ರಸ್ತಾಪವು ಎಲ್ಲಾ ವಿಲೀನಗೊಳಿಸುವ ಘಟಕಗಳ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ZEE ಷೇರುದಾರರನ್ನು ಒಳಗೊಂಡಂತೆ ಎಲ್ಲರ ಹಿತಾಸಕ್ತಿಗಳನ್ನು ನೋಡಿಕೊಳ್ಳಲು ಪ್ರಯತ್ನಿಸಿತ್ತು ಎನ್ನಲಾಗಿದೆ.

ವಿಲೀನ ಪ್ರಕ್ರಿಯೆಯ ಬಳಿಕವೂ ಪುನೀತ್ ಗೋಯೆಂಕಾ MD ಆಗಿ ಮುಂದುವರೆಯುತ್ತಿದ್ದರು
ರಿಲಯನ್ಸ್ ಯಾವಾಗಲು ಹೂಡಿಕೆ ಮಾಡುವ ಕಂಪನಿಗಳಲ್ಲಿ ಅಸ್ತಿತ್ವದಲ್ಲಿರುವ ಮ್ಯಾನೇಜ್ಮೆಂಟ್ ಅನ್ನು ಮುಂದುವರೆಸುವಲ್ಲಿ ನಂಬಿಕೆಯನ್ನು ಇಟ್ಟಿದೆ. ಅಷ್ಟೇ ಅಲ್ಲ ಉತ್ತಮ ಕಾರ್ಯಕ್ಷಮತೆಗಾಗಿ ರಿವಾರ್ಡ್ ಕೂಡ ನೀಡುತ್ತದೆ. ಹೀಗಾಗಿ ವಿಲೀನ ಪ್ರಸ್ತಾವನೆಯಲ್ಲಿ ಪುನೀತ್ ಗೋಯೆಂಕಾ  (Punit Goenka) ಅವರನ್ನು MD ಆಗಿ ಮುಂದುವರೆಸುವ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿದೆ.

ವಿವಾದ ಹುಟ್ಟುಹಾಕಿದ್ದ ಇನ್ವೆಸ್ಕೋ
ಆದರೆ, ಗೋಯೆಂಕಾ ಹಾಗೂ ಇನ್ವೆಸ್ಕೋ ಮಧ್ಯೆ ಪ್ರೇಫರೆನ್ಸಿಯಲ್ ವಾರೆಂಟ್ಸ್ (Preferential Warrants)  ಮೂಲಕ ಸಂಸ್ಥಾಪಕ ಕುಟುಂಬದ (Founding Family) ಪಾಲುದಾರಿಕೆಯನ್ನು ಹೆಚ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮತಭೇದ ಆರಂಭಗೊಂಡಿತ್ತು. ಸಂಸ್ಥಾಪಕರು ಯಾವಾಗಲೂ ಮಾರುಕಟ್ಟೆಯಲ್ಲಿ ಖರೀದಿಸುವ ಮೂಲಕ ತಮ್ಮ ಪಾಲನ್ನು ಹೆಚ್ಚಿಸಬಹುದು ಎಂದು ಹೂಡಿಕೆದಾರರು ನಂಬಿದ್ದರು. ರಿಲಯನ್ಸ್ ನಲ್ಲಿ ನಾವು ಎಲ್ಲಾ ಸಂಸ್ಥಾಪಕರನ್ನು ಗೌರವಿಸುತ್ತೇವೆ ಮತ್ತು ಯಾವುದೇ ಪ್ರತಿಕೂಲ ವಹಿವಾಟುಗಳನ್ನು ಎಂದಿಗೂ ಆಶ್ರಯಿಸುವುದಿಲ್ಲ. ಹೀಗಾಗಿ ನಾವು ಈ ಒಪ್ಪಂದದೊಂದಿಗೆ ಮುಂದುವರಿಯಲಿಲ್ಲ ಎಂದು ಹೇಳಲಾಗಿದೆ.

ರಿಲಯನ್ಸ್ ಜೊತೆಗೆ ಸಂಬಂಧ ಹೊಂದಿವೆ ಇನ್ವೆಸ್ಕೋ ಪ್ರಸ್ತಾವಿತ ಹೆಸರುಗಳು
ಆದರೆ, ಈ ಪ್ರಕರಣವನ್ನು ನಿಕಟವಾಗಿ ಅರಿತಿರುವವರು, ಇನ್ವೆಸ್ಕೋ ಹೆಸರಿಸಿದ 6 ನಿರ್ದೇಶಕರ ಮಂಡಳಿಯು ರಿಲಯನ್ಸ್‌ಗೆ ಸಂಬಂಧಿಸಿದೆ ಮತ್ತು ಈ ವಿಷಯವನ್ನು SEBI ಅಥವಾ ಇತರ ಏಜೆನ್ಸಿಗಳು ತನಿಖೆ ಮಾಡಬೇಕು ಎಂದು ಹೇಳುತ್ತಾರೆ.

ಅಕ್ಟೋಬರ್ 22ರಂದು ಕಂಪನಿಯ EGM ನಡೆಯುವ ಸಾಧ್ಯತೆ
ಇನ್ವೆಸ್ಕೋ ಕಾನೂನುಬಾಹಿರವಾಗಿ ಝೀ  ಎಂಟರ್‌ಟೈನ್‌ಮೆಂಟ್ ಬೋರ್ಡ್ ಬದಲಿಸಲು ಪ್ರಯತ್ನಿಸುತ್ತಿದೆ. 6 ಸ್ವತಂತ್ರ ನಿರ್ದೇಶಕರ ನೇಮಕಕ್ಕಾಗಿ ಇವೆಸ್ಕೋ ನಿರಂತರವಾಗಿ EGM ಅನ್ನು ಕರೆಯಲು ಪ್ರಯತ್ನಿಸುತ್ತಿದೆ. ಆದರೆ, ಈ ಅಧಿಕಾರ ಮಂಡಳಿಯ ಬಳಿ ಇದೆ  ಮತ್ತು ಈ ವಿಷಯದಲ್ಲಿ ಪ್ರತಿಕ್ರಿಯಿಸಲು NCLAT ಅಕ್ಟೋಬರ್ 22 ರವರೆಗೆ ಝೀ ಎಂಟರ್‌ಟೈನ್‌ಮೆಂಟ್ ಗೆ ಸಮಯಾವಕಾಶ ನೀಡಿದೆ.

Trending News