BBMP Public School Admissions: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆಯ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ಫ್ರೀ ನರ್ಸರಿ ತರಗತಿ(ಸಿಬಿಎಸ್’ಸಿ ಪಠ್ಯಕ್ರಮ)ಗೆ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶ್ರೀರಾಮಪುರದಲ್ಲಿರುವ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್ ವಿದ್ಯಾಸಂಸ್ಥೆಯಲ್ಲಿ ಫ್ರೀ ನರ್ಸರಿ ತರಗತಿಗೆ ಮಾರ್ಚ್ 11 ರಿಂದ 25ರವರೆಗೆ ಅರ್ಜಿ ವಿತರಣೆ ಮಾಡಲಾಗುತ್ತಿದೆ.
ಅರ್ಜಿ ನಮೂನೆ ಸಲ್ಲಿಸುವ ಪ್ರಕ್ರಿಯೆ ಈ ಕೆಳಗಿನಂತಿದೆ
- ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 26 ರಿಂದ ಏಪ್ರಿಲ್ 10 ರವರೆಗೆ
- ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ(ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡ,
- ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು.
- 20-05-2024 ರಂದು ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯಲಿದೆ.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:
1 . ಮಗುವಿನ ಪಾಸ್ ಪೋರ್ಟ್ ಸೈಜ್ ಫೋಟೋ - 5 ಸಂಖ್ಯೆ
2. ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವಚಿತ್ರ)2B Size
3. ಮಗುವಿನ ಜನನ ಪ್ರಮಾಣ ಪತ್ರ
4. ಆದಾಯ ಪ್ರಮಾಣ ಪತ್ರ
5. ಜಾತಿ ಪ್ರಮಾಣ ಪತ್ರ
6. ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್
7. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್
8. ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ(ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಲೋ. ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು)
9. ಮಗುವಿನ ವೈಧ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು(ಎತ್ತರ, ತೂಕ, ರಕ್ತದ ಗುಂಪು)
ಸೂಚನೆ:
ಅರ್ಜಿ ಪರಿಶೀಲನೆಯ ದಿನ(ದಿ: 20-05-2024) ಪೋಷಕರು ಮಗುವಿನ ಜೊತೆಗೆ ದಾಖಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ತರುವುದು ಕಡ್ಡಾಯ.
ಹೆಚ್ಚಿನ ಸಂಪರ್ಕಕ್ಕಾಗಿ:
ಎಂ.ಮುನಿಶಾಮಪ್ಪ, ಹಿರಿಯ ಸಹಾಯಕ ನಿರ್ದೇಶಕರು(ಶಿಕ್ಷಣ), ಬಿಬಿಎಂಪಿ
ಮೊ.ಸಂ: 9480685297
ಇದನ್ನೂ ಓದಿ: Balakrishna wig : ಬಾಲಯ್ಯ ಹಾಕುವ ʼವಿಗ್ʼ ಮುಟ್ಟಿದ್ರೆ..! ಖ್ಯಾತ ನಿರ್ದೇಶಕನ ಶಾಕಿಂಗ್ ಹೇಳಿಕೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ