UIDAI Recruitment 2023:ಯುಐಡಿಎಐ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

UIDAI Recruitment 2023:ಯುಐಡಿಎಐ(ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ) ತನ್ನ ಪ್ರಾದೇಶಿಕ ಕಚೇರಿ, ಬೆಂಗಳೂರು,  ಸೇರಿದಂತೆ  ರಾಜ್ಯ ಕಚೇರಿ, ತಿರುವನಂತಪುರಂ, ಕೇರಳದಲ್ಲಿ ವಿದೇಶಿ ಸೇವಾ ನಿಯಮಗಳ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ  ಆಹ್ವಾನ ಮಾಡಲಾಗಿದೆ. 

Written by - Zee Kannada News Desk | Last Updated : Feb 12, 2023, 05:49 PM IST
  • ಯುಐಡಿಎಐ(ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಅರ್ಜಿ ಆಹ್ವಾನ
  • ಮಾರ್ಚ್ 23, 2023 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • ಬೆಂಗಳೂರು, ಸೇರಿದಂತೆ ರಾಜ್ಯ ಕಚೇರಿ, ತಿರುವನಂತಪುರಂ, ವಿದೇಶಿ ಸೇವಾ ನಿಯಮಗಳ ಹುದ್ದೆಗಳಿಗೆ ಅರ್ಜಿ
UIDAI Recruitment 2023:ಯುಐಡಿಎಐ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ title=

UIDAI Recruitment 2023:ಯುಐಡಿಎಐ(ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ) ತನ್ನ ಪ್ರಾದೇಶಿಕ ಕಚೇರಿ, ಬೆಂಗಳೂರು,  ಸೇರಿದಂತೆ  ರಾಜ್ಯ ಕಚೇರಿ, ತಿರುವನಂತಪುರಂ, ಕೇರಳದಲ್ಲಿ ವಿದೇಶಿ ಸೇವಾ ನಿಯಮಗಳ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ  ಆಹ್ವಾನ ಮಾಡಲಾಗಿದೆ.  ಆಸಕ್ತ ಅಭ್ಯರ್ಥಿಗಳು ಯುಐಡಿಎಐ ನ ಅಧಿಕೃತ ವೆಬ್‌ಸೈಟ್ uidai.gov.in ಮೂಲಕ ಅರ್ಜಿ ಸಲ್ಲಿಸಬಹುದು.  ಮಾರ್ಚ್ 23, 2023 ರಂದು  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಖಾಲಿ ಇರುವ ಸ್ಥಳಗಳು 
 ಬೆಂಗಳೂರು ಮತ್ತು ರಾಜ್ಯ ಕಛೇರಿ, ತಿರುವನಂತಪುರಂ

ಇದನ್ನೂ ಓದಿ: NET Exam 2023: ವಿಷಯ ಹಾಗೂ ದಿನಾಂಕಕ್ಕೆ ಅನುಗುಣವಾಗಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಅರ್ಹತೆ 
ಅಭ್ಯರ್ಥಿಯು ಪೋಷಕ ಕೇಡರ್/ಇಲಾಖೆಯಲ್ಲಿ ನಿಯಮಿತ ಆಧಾರದ ಮೇಲೆ ಸಮಾನವಾದ ಹುದ್ದೆಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಅಧಿಕಾರಿಯಾಗಿರಬೇಕು; 

 ಪೇ ಮ್ಯಾಟ್ರಿಕ್ಸ್ ಲೆವೆಲ್ 7 ರಲ್ಲಿ ಮೂರು ವರ್ಷಗಳ ನಿಯಮಿತ ಸೇವೆ

ಪೇ ಮ್ಯಾಟ್ರಿಕ್ಸ್ ಹಂತ 6 ರಲ್ಲಿ ಐದು ವರ್ಷಗಳ ನಿಯಮಿತ ಸೇವೆ

ಅಗತ್ಯ ಅನುಭವದೊಂದಿಗೆ ಅನುಗುಣವಾದ ಶ್ರೇಣಿಗಳಲ್ಲಿ ನಿಯಮಿತ ಹುದ್ದೆ

ಹುದ್ದೆಗಳು : ರಾಜ್ಯ ಸರ್ಕಾರ/ ಸಾರ್ವಜನಿಕ ವಲಯದ ಸಂಸ್ಥೆ/ ಸ್ವಾಯತ್ತ ಸಂಸ್ಥೆಯ ಅಧಿಕಾರಿಗಳು.

ಅರ್ಜಿ ಸಲ್ಲಿಸು ವಿಧಾನ 
ಅರ್ಜಿದಾರರು ಮಾರ್ಚ್ 23 ರವರೆಗೆ, ನಿರ್ದೇಶಕರು (HR), UIDAI, ಪ್ರಾದೇಶಿಕ ಕಚೇರಿ, 3'd ಮಹಡಿ, ದಕ್ಷಿಣ ಭಾಗ, ಖನಿಜ ಭವನ, ನಂ. 49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು - 560001 ಗೆ ಅರ್ಜಿ ಸಲ್ಲಿಸಬಹುದು

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News