ಬೆಂಗಳೂರು: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ನಿಮಾನ್ಸ್ ಸಂಸ್ಥೆ ಸಹಯೋಗದೊಂದಿಗೆ ಯುವ ಸ್ಪಂದನ ಕೆಂದ್ರದಲ್ಲಿ ಆರಂಭಿಸಲಾದ “ಯುವ ಪರಿವರ್ತಕರಾಗಿ” ಕಾರ್ಯನಿರ್ವಹಿಸಲು ಅರ್ಹ ಸ್ಥಳೀಯ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಲಬುರಗಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತ 21 ರಿಂದ 35 ವರ್ಷ ವಯೋಮಿತಿಯ ಪದವಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳೊಂದಿಗೆ ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಗೆ ಇದೇ ಜೂನ್ 7ರ ಸಂಜೆ 5 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : Nature By Lips Shape: ವ್ಯಕ್ತಿಯ ತುಟಿ ನೋಡಿ ಸ್ವಭಾವ ಕಂಡುಹಿಡಿಯಬಹುದು!
ಯುವ ಪರಿವರ್ತಕರಾಗಿ ಆಯ್ಕೆಯಾದವರಿಗೆ ಗೌರವಧನ 5000 ರೂ. ಜೊತೆಗೆ ಪ್ರತಿ ತಿಂಗಳು ಗರಿಷ್ಠ 800 ರೂ. ಪ್ರವಾಸ ಭತ್ಯೆ ಆರು ತಿಂಗಳವರೆಗೆ ನೀಡಲಾಗುತ್ತದೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ತದನಂತರ ಇವರು ಯುವಜನರ ಪ್ರೌಢ ವ್ಯವಸ್ಥೆಯ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕ ಅರಿವು ಮೂಡಿಸಬೇಕು.
ಇದನ್ನೂ ಓದಿ : ಈ ಚಿಕ್ಕ ಮಾಂತ್ರಿಕ ಗಿಡವನ್ನು ಶುಭ ದಿಕ್ಕಿಗೆ ಇಡಿ, ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ
ಹೆಚ್ಚಿನ ಮಾಹಿತಿಗಾಗಿ ಯುವ ಸ್ಪಂದನದ ಕ್ಷೇತ್ರ ಸಂಪರ್ಕಾಧಿಕಾರಿ ಪವಿತ್ರ ಕೌಶಿಕ್ ಮೊ.ಸಂ. 6360664955, 9590070405 ಅಥವಾ ಕಲಬುರಗಿ ಯುವ ಸ್ಪಂದನ ಕೇಂದ್ರ ದೂ.ಸಂ. 08472-236476 ಹಾಗೂ ಕಲಬುರಗಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಮೊ.ಸಂ. 9480886476 ಇವರನ್ನು ಸಂಪರ್ಕಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.