ಜೀವಕ್ಕೆ ಅಪಾಯ ತಂದ ʼಇಡ್ಲಿʼ: 15 ಮಂದಿ ಆಸ್ಪತ್ರೆಗೆ ದಾಖಲು

ಇನ್ನೊಂದು ಪ್ರಕರಣ ಕೇರಳ ರಾಜ್ಯದಲ್ಲಿ ನಡೆದಿತ್ತು. ಅಲ್ಲಿನ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಶವರ್ಮಾ ತಿಂದು ತೀವ್ರ ಅಸ್ವಸ್ಥವಾಗಿ ಆಸ್ಪತ್ರೆ ಸೇರಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಘಟನೆ ಕಳೆದು ದಿನಗಳು ಉರುಳುತ್ತಿದೆ ಅಷ್ಟೇ, ಈ ಸಂದರ್ಭದಲ್ಲಿ ಮತ್ತೆ ಇಂತಹ  ಘಟನೆಗಳು ನಡೆದಿರುವುದು ಆಘಾತಕಾರಿ ಎನ್ನಬಹುದು.

Written by - Bhavishya Shetty | Last Updated : May 18, 2022, 10:04 AM IST
  • ಹೋಟೆಲ್‍ನಲ್ಲಿ ಇಡ್ಲಿ ಸೇವಿಸಿ 15 ಮಂದಿ ಅಸ್ವಸ್ಥ
  • ಸಿರಗುಪ್ಪ ತಾಲೂಕು ಸರ್ಕಾರಿ ಅಸ್ಪತ್ರೆಗೆ ದಾಖಲು
  • ಕೇರಳದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು
ಜೀವಕ್ಕೆ ಅಪಾಯ ತಂದ ʼಇಡ್ಲಿʼ: 15 ಮಂದಿ ಆಸ್ಪತ್ರೆಗೆ ದಾಖಲು title=
Bellary

ಇತ್ತೀಚಿನ ದಿನಗಳಲ್ಲಿ ಆಹಾರ ಸೇವಿಸಿ ಅಸ್ವಸ್ಥರಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಕೇರಳದಲ್ಲಿಯೂ ಇಂತಹದ್ದೇ ಘಟನೆಯೊಂದು ಸಂಭವಿಸಿ ಇಬ್ಬರ ಪ್ರಾಣ ಹೋಗಿತ್ತು. ಇದೀಗ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲೂ ಇದೇ ರೀತಿಯ ಘಟನೆ ನಡೆದಿದೆ. 

ಇದನ್ನು ಓದಿ: Office Tips: ಕಛೇರಿಯಲ್ಲಿ ಮರೆತೂ ಈ ತಪ್ಪುಗಳನ್ನು ಮಾಡಬೇಡಿ

ಹೋಟೆಲ್‍ನಲ್ಲಿ ಇಡ್ಲಿ ಸೇವಿಸಿ 15 ಮಂದಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಿರಗುಪ್ಪ ತಾಲೂಕು ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಇನ್ನೊಂದು ಪ್ರಕರಣ ಕೇರಳ ರಾಜ್ಯದಲ್ಲಿ ನಡೆದಿತ್ತು. ಅಲ್ಲಿನ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಶವರ್ಮಾ ತಿಂದು ತೀವ್ರ ಅಸ್ವಸ್ಥವಾಗಿ ಆಸ್ಪತ್ರೆ ಸೇರಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಘಟನೆ ಕಳೆದು ದಿನಗಳು ಉರುಳುತ್ತಿದೆ ಅಷ್ಟೇ, ಈ ಸಂದರ್ಭದಲ್ಲಿ ಮತ್ತೆ ಇಂತಹ  ಘಟನೆಗಳು ನಡೆದಿರುವುದು ಆಘಾತಕಾರಿ ಎನ್ನಬಹುದು. 

ಇದನ್ನು ಓದಿ: ಸ್ಮಾರ್ಟ್‌ಫೋನ್ ಕಳೆದು ಹೋದರೆ ಕೂಡಲೇ ಈ ಕೆಲಸ ಮಾಡಿ, ಇಲ್ಲವೇ ನಿಮ್ಮ ಖಾತೆ ಖಾಲಿಯಾಗಬಹುದು!

ಅಷ್ಟೇ ಅಲ್ಲದೆ, ಗ್ರಾಹಕರು ಖರೀದಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮ ಪತ್ತೆಯಾಗಿತ್ತು. ಈ ಘಟನೆ ನಡೆದಿರುವುದು ತಿರುವಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯಲ್ಲಿರುವ ಚಂತಮುಕ್ಕಿನ ಶಾಲಿಮಾರ್ ಹೊಟೇಲ್‌ನಲ್ಲಿ ಎಂದು ತಿಳಿದುಬಂದಿದೆ. ಪ್ರಿಯಾ ಎಂಬ ಗ್ರಾಹಕರು ಶಾಲಿಮಾರ್‌ ಹೊಟೇಲ್‌ನಿಂದ ಪರೋಟವನ್ನು ಖರೀದಿಸಿದ್ದಾರೆ. ಬಳಿಕ ಆಕೆ ಅದನ್ನು ತೆರೆದು ನೋಡಿದಾಗ ಪ್ಯಾಕಿಂಗ್‌ ಮಾಡಲು ಬಳಸಿದ ಪೇಪರ್‌ನ ತುಣುಕಿನಲ್ಲಿ ಹಾವಿನ ಚರ್ಮ ಇರುವುದು ಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾ ದೂರು ನೀಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News