ಬೆಂಗಳೂರು : ಇಂದಿನ ಹೈಟೆಕ್ ಯುಗದಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ ಪೊಲೀಸರಿಗೆ ಸವಾಲಾಗಿದೆ. ವರ್ಷದಿಂದ ವರ್ಷಕ್ಕೆ ಬೆಂಗಳೂರು ಮಹಾನಗರದಲ್ಲಿ ವರದಿಯಾಗುತ್ತಿರುವ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ. ಕೆಲ ಆಸೆ-ಅಮಿಷವೊಡ್ಡಿ ಮುಗ್ದ ಜನರನ್ನು ನಂಬಿಸಿ ಸೈಲೆಂಟ್ ಆಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಆನ್‌ಲೈನ್ ಖದೀಮರು ಎಗರಿಸುತ್ತಿದ್ದಾರೆ.ಇಂತಹ ಸ್ಮಾರ್ಟ್ ಕ್ರೈಂಗಳನ್ನು ತಕ್ಕಮಟ್ಟಿಗಾದರೂ ಕಂಟ್ರೋಲ್ ತರಲು ಜಾರಿಗೆ ತಂದಿದ್ದ ಗೋಲ್ಡನ್ ಅವಾರ್ಸ್ ಯೋಜನೆ ಫಲಪ್ರದವಾಗಿದೆ.
ಅಮಾಯಕ ಜನರ ನಂಬಿಕೆಯನ್ನ ಬಂಡವಾಳ ಮಾಡಿಕೊಳ್ಳುವ ವಂಚಕರು ಕೂತ ಜಾಗದಲ್ಲಿಯೇ ತಂತ್ರಜ್ಞಾನ ನೆರವಿನಿಂದ ಕೋಟ್ಯಾಂತರ ರೂಪಾಯಿ ಎಗರಿಸುತ್ತಿದ್ದಾರೆ.ಇದಕ್ಕೆ ಬ್ರೇಕ್ ಹಾಕಲು ಹಿಂದಿನ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ 2020ರಲ್ಲಿ ಗೋಲ್ಡನ್ ಅವಾರ್ಸ್ ಯೋಜನೆ ಜಾರಿಗೆ ತಂದಿದ್ದರು. ಹಣ ಕಳೆದುಕೊಂಡ ಜನರು ಕೂಡಲೇ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ವಿವರ ಸಂಗ್ರಹಿಸಿ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಮಾಹಿತಿ ನೀಡಿ ಅಲ್ಲಿಂದ ವರ್ಗಾವಣೆಯಾದ ಖದೀಮರ ಬ್ಯಾಂಕ್ ಅಕೌಂಟ್ ಜಪ್ತಿ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ : Bengaluru Crime : ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
2020ರ ಡಿಸೆಂಬರ್ ನಲ್ಲಿ ಜಾರಿಯಾಗಿದ್ದ ಈ ಯೋಜನೆಯಲ್ಲಿ ಇದುವರೆಗೂ 12,126 ದೂರುಗಳು ಬಂದಿವೆ. ಈ ಪೈಕಿ 11200 ದೂರುಗಳನ್ನು ಇತ್ಯರ್ಥ ಮಾಡಲಾಗಿದ್ದು, 904 ದೂರುಗಳು ತನಿಖಾ ಹಂತದಲ್ಲಿವೆ.
ದಾಖಲಾದ ದೂರುಗಳ ಆಧಾರದ ಮೇಲೆ ಅಮಾಯಕ ಜನ ಸುಮಾರು 104 ಕೋಟಿ ಹಣ ಕಳೆದುಕೊಂಡಿದ್ದು, ಇದರಲ್ಲಿ 15 ಕೋಟಿ ರೂ.ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತನಿಖೆ ಮುಕ್ತಾಯದ ಬಳಿಕ ವಾರಸುದಾರರು ಕೋರ್ಟ್ ಗೆ ಸೂಕ್ತ ದಾಖಲಾತಿ ನೀಡಿ ಹಣ ಪಡೆದುಕೊಳ್ಳಬಹುದಾಗಿದೆ.
ಯೋಜನೆ ವೇಗಕ್ಕೆ ಸ್ಪಂದಿಸುತ್ತಿಲ್ಲ ಬ್ಯಾಂಕುಗಳು
ಹಣ ಕಳೆದುಕೊಂಡವರು 112 ಮೂಲಕ ಮಾಹಿತಿ ನೀಡಿದರೆ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ಸೈಬರ್ ಕ್ರೈಂ ಇನ್ಸಿಡೆಂಟ್ ರಿಪೋರ್ಟ್ (ಸಿಸಿಇಆರ್) ದಾಖಲಿಸಿಕೊಂಡು ತ್ವರಿತಗತಿಯಲ್ಲಿ ಮಾಹಿತಿ ಸಂಗ್ರಹಿಸಿ ಬಂದ ದೂರನ್ನು ಕೂಡಲೇ ಸಂಬಂಧಪಟ್ಟ ಬ್ಯಾಂಕಿಗೆ ಈಮೇಲ್ ಮುಖಾಂತರ ಮಾಹಿತಿ ನೀಡುತ್ತದೆ. ಬಂದ ದೂರನ್ನ ಬ್ಯಾಂಕ್ ಅಧಿಕಾರಿಗಳು ಖಚಿತಪಡಿಸಿಕೊಂಡ ಬಳಿಕ ಆರೋಪಿಗಳ ಬ್ಯಾಂಕ್ ಖಾತೆಯನ್ನು ಸಿಬ್ಬಂದಿ ವಂಚಿಸಿದ್ದ ಹಣವಷ್ಟೇ ಮಾತ್ರ ಮುಟ್ಟುಗೋಲು ಹಾಕಿಕೊಳ್ಳುತ್ತವೆ. ಈವರೆಗೆ ಬಂದಿದ್ದ ದೂರುಗಳ ಆಧಾರದ ಮೇರೆಗೆ 104 ಕೋಟಿ ಹಣ ಕಳೆದುಕೊಂಡಿದ್ದು ಈ ಪೈಕಿ 15 ಕೋಟಿಯನ್ನು ಫ್ರೀಜ್ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ದೊಡ್ಡ ಮಟ್ಟದಲ್ಲಿ ಸೈಬರ್ ಖದೀಮರ ಪಾಲಾಗುವ ಹಣದ ವರ್ಗಾವಣೆ ತಡೆಯಬಹುದಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ದಿನಕ್ಕೆ 20ರಿಂದ 30 ಕರೆಗಳು. ಸುಮಾರು ದಿನಕ್ಕೆ 25 ಲಕ್ಷ ಟೋಪಿ
ಗಮನಿಸಬೇಕಾದ ಅಂಶ ಎಂದರೆ ಪ್ರತಿ ದಿನ ಸುಮಾರು ವಂಚನೆಗೊಳದಾ 20ರಿಂದ 30 ಕರೆಗಳು ಬರುತ್ತವೆ. ಅಂದಾಜು ದಿನಕ್ಕೆ 25 ಲಕ್ಷ ತನಕ ಹಣ ಕಳೆದುಕೊಂಡಿರುವುದಾಗಿ ಸಾರ್ವಜನಿಕರು ದೂರು ನೀಡುತ್ತಾರೆ. ದೂರಿನ ಮೇರೆಗೆ ಸಂಬಂಧಪಟ್ಟ ಬ್ಯಾಂಕಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕ ವೇಗವಾಗಿ ಪರಿಶೀಲಿಸಿ ಬ್ಯಾಂಕ್ ಖಾತೆ ಸೀಜ್ ಮಾಡಿದರೆ ಖದೀಮರಿಗೆ ಹಣ ಸಿಗದಂತೆ ಮಾಡಬಹುದು. ಇದಕ್ಕೆ ಪ್ರತಿ ಬ್ಯಾಂಕ್ ನಲ್ಲಿ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಆದರೆ ಯಾವ ಬ್ಯಾಂಕ್ ಗಳಲ್ಲಿಯೂ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿಲ್ಲ. ಹೀಗಾಗಿ ಯೋಜನೆ ಯಶಸ್ಚಿ ಅನುಷ್ಠಾನಕ್ಕೆ ಕೊಂಚ ಹಿನ್ನೆಡೆಯಾಗಿದೆ.
ಇದನ್ನೂ ಓದಿ : BBMP election 2022 : ಬಿಬಿಎಂಪಿ ಚುನಾವಣೆ ಹತ್ತಿರುವಾಗ ರೌಡಿ ಶೀಟರ್ ಗಳು ಆ್ಯಕ್ಟೀವ್ : ಬಿಸಿ ಮುಟ್ಟಿಸಿದ ಸಿಸಿಬಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.