ನವದೆಹಲಿ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತೀಯ ತಂಡದ ಜರ್ಸಿಗಳ ಮೇಲೆ ಇಂಡಿಯಾ ಬದಲು ಭಾರತ್ ಹೆಸರನ್ನು ಮುದ್ರಿಸಬೇಕು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಗೆ ಸಲಹೆ ನೀಡಿದ್ದಾರೆ.
ಸೆಪ್ಟೆಂಬರ್ 9ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಔತಣಕೂಟದ ಆಹ್ವಾನದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮುರನ್ನು ‘ದಿ ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ದಿ ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ವಿವಾದ ಉಂಟಾಗಿರುವ ಮಧ್ಯೆಯೇ ಸೆಹ್ವಾಗ್ ಟ್ವೀಟ್ ಮೂಲಕ ‘ಭಾರತ್’ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಭಾರತ vs ಪಾಕ್ ಸೂಪರ್ 4 ಪಂದ್ಯಕ್ಕೆ ಸ್ಥಳ, ದಿನಾಂಕ ಫಿಕ್ಸ್: ಈ ಆಟವೂ ಮಳೆಯಿಂದ ರದ್ದಾದರೆ ಮುಂದೇನು ಕಥೆ?
I have always believed a name should be one which instills pride in us.
We are Bhartiyas ,India is a name given by the British & it has been long overdue to get our original name ‘Bharat’ back officially. I urge the @BCCI @JayShah to ensure that this World Cup our players have… https://t.co/R4Tbi9AQgA— Virender Sehwag (@virendersehwag) September 5, 2023
‘ಒಂದು ಹೆಸರು ನಮ್ಮಲ್ಲಿ ಹೆಮ್ಮೆ ಮೂಡಿಸಬೇಕು ಎಂದು ನಾನು ನಂಬಿದ್ದೇನೆ. ನಾವು ಭಾರತೀಯರು, ಇಂಡಿಯಾ ಬ್ರಿಟಿಷರು ನೀಡಿದ ಹೆಸರು ಮತ್ತು ನಮ್ಮ ಮೂಲ ಹೆಸರು 'ಭಾರತ್'. ಈ ಹೆಸರನ್ನು ಅಧಿಕೃತವಾಗಿ ಮರಳಿ ಪಡೆಯಲು ಬಹಳ ಸಮಯದಿಂದ ಕಾಯುತ್ತಿದೆ. ಈ ವಿಶ್ವಕಪ್‍ನಲ್ಲಿ ನಮ್ಮ ಆಟಗಾರರ ಎದೆಯ ಮೇಲೆ ‘ಭಾರತ್’ ಇರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ನಾನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾರನ್ನು ಒತ್ತಾಯಿಸುತ್ತೇನೆ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ತಮ್ಮ ಮೊತ್ತೊಂದು ಟ್ವೀಟ್‍ನಲ್ಲಿ ಸೆಹ್ವಾಗ್, ‘ಟೀಮ್ ಇಂಡಿಯಾ ಅಲ್ಲ #TeamBharat. ಈ ವಿಶ್ವಕಪ್‌ನಲ್ಲಿ ನಾವು ಕೊಹ್ಲಿ, ರೋಹಿತ್, ಬುಮ್ರಾ, ಜಡ್ಡು ಅವರನ್ನು ಹುರಿದುಂಬಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತವಿರಲಿ ಮತ್ತು ಆಟಗಾರರು “ಭಾರತ್” ಇರುವ ಜೆರ್ಸಿಯನ್ನು ಧರಿಸಲಿ’ ಎಂದು ಜಯ್ ಶಾರಿಗೆ ಸಲಹೆ ನೀಡಿದ್ದಾರೆ.
Team India nahin #TeamBharat.
This World Cup as we cheer for Kohli , Rohit , Bumrah, Jaddu , may we have Bharat in our hearts and the players wear jersey which has “Bharat” @JayShah . https://t.co/LWQjjTB98Z— Virender Sehwag (@virendersehwag) September 5, 2023
ಇದನ್ನೂ ಓದಿ: World Cup 2023: ವಿಶ್ವಕಪ್’ಗೆ 15 ಸದಸ್ಯರ ಭಾರತ ತಂಡ ಪ್ರಕಟ: ಉಪನಾಯನಾಗಿ ಆಲ್’ರೌಂಡರ್’ಗೆ ಸ್ಥಾನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.