ಐಟಿಬಿಟಿ ಕಂಪನಿಗಳ ಸಹಯೋಗದಿಂದ ಸೈಬರ್ ಕ್ರೈಂ ತಡೆಯಲು ಕ್ರಮ

cyber crime : ಸುಮಾರು 50ಕ್ಕೂ ಹೆಚ್ಚು ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಪ್ರಮುಖವಾಗಿ ಸೈಬರ್ ಕ್ರೈಂ ನಿಯಂತ್ರಿಸಲು ತಂತ್ರಜ್ಞಾನದ ಸಹಾಯ ಪಡೆಯುವ ಬಗ್ಗೆ ಚರ್ಚೆ ನಡೆಸಿದರು. 

Written by - VISHWANATH HARIHARA | Last Updated : Sep 27, 2023, 05:13 PM IST
  • ರಾಜ್ಯದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ
  • ಐಟಿಬಿಟಿ ಕಂಪನಿಗಳ‌ ಸಹಾಯ ಪಡೆಯಲು ಚಿಂತನೆ
  • ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ
ಐಟಿಬಿಟಿ ಕಂಪನಿಗಳ ಸಹಯೋಗದಿಂದ ಸೈಬರ್ ಕ್ರೈಂ ತಡೆಯಲು ಕ್ರಮ   title=

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಇದನ್ನು ಸರಿಪಡಿಸಲು  ಪೊಲೀಸರು ತಾಂತ್ರಿಕ ಪರಿಣಿತಿ ಪಡೆಯಬೇಕು. ಈ ಹಿನ್ನೆಲೆ ಐಟಿಬಿಟಿ ಕಂಪನಿಗಳ‌ ಸಹಾಯ ಪಡೆದು ತರಬೇತಿ‌ ನೀಡುವ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. 

ನಗರದ ಖಾಸಗಿ ಹೋಟೆಲ್ ನಲ್ಲಿ ಐಟಿ-ಬಿಟಿ ಕಂಪನಿಗಳೊಂದಿಗೆ ಹಮ್ಮಿಕೊಂಡಿದ್ದ ಟೆಕ್‌ಫ್ಯೂಷನ್ ಸನ್ ರೈಸ್ ಸಮ್ಮಿಟ್ ನಲ್ಲಿ ಮಾತನಾಡಿದ ಪರಮೇಶ್ವರ್, ಸುಮಾರು 50ಕ್ಕೂ ಹೆಚ್ಚು ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಪ್ರಮುಖವಾಗಿ ಸೈಬರ್ ಕ್ರೈಂ ನಿಯಂತ್ರಿಸಲು ತಂತ್ರಜ್ಞಾನದ ಸಹಾಯ ಪಡೆಯುವ  ಬಗ್ಗೆ ಚರ್ಚೆ  ನಡೆಸಿದರು. 

ಇದನ್ನೂ ಓದಿ : KRSನಿಂದ ಒಂದು ಹನಿ ನೀರು ಬಿಡಲ್ಲ, ಮತ್ತೆ ಬಂದ್ ಬೇಡ: ಡಿಸಿಎಂ ಡಿ.ಕೆ.ಶಿವಕುಮಾರ್ 

ನಂತರ ಮಾತನಾಡಿದ ಅವರು ದಿನೇ ದಿನೇ ಸೈಬರ್ ಕ್ರೈಂ ಅಪರಾಧ ಹೆಚ್ಚಾಗುತ್ತಿದ್ದು‌ ಇದನ್ನ ಕಂಟ್ರೋಲ್ ಮಾಡಲು ಮೊದಲು ಎಲ್ಲಾ ಪೊಲೀಸರು ತಂತ್ರಜ್ಞಾನವನ್ನ ಅರಿತುಕೊಳ್ಳಬೇಕಿದೆ.‌ ಈ ನಿಟ್ಟಿನಲ್ಲಿ ಐಟಿ ಕಂಪನಿಗಳ ನೆರವಿನಿಂದ ಹೊಸ ಸಾಫ್ಟ್ ವೇರ್ ಗಳನ್ನ ಪೊಲೀಸರಿಗೆ ತರಬೇತಿ ನೀಡಲಾಗುವುದು.
ಸೈಬರ್ ಸೆಕ್ಯುರಿಟಿ ಬಗ್ಗೆ ಸವಾಲುಗಳ  ಸಹಕರಿಸುವುದಾಗಿ ಐಟಿ ಕಂಪೆನಿಯಗಳು ಹೇಳಿವೆ ಎಂದರು. 

ಅನೇಕ ಕಂಪನಿಗಳು ರೀಸರ್ಚ್ ಅಂಡ್ ಲ್ಯಾಬೊರೇಟರಿಯನ್ನ ಉಪಯೋಗಿಸುವ ಬಗ್ಗೆ ತಿಳಿಸಿದ್ದು, ಮುಂದೆ ಐಟಿ ಕಂಪನಿಗಳ ಜೊತೆ ಪೊಲೀಸ್ ಇಲಾಖೆ ಪಾಲುದಾರಿಕೆ ಹೊಂದಲಿದ್ದು, ಇದರಿಂದ ಸೈಬರ್  ಕ್ರೈಂ  ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಇದನ್ನೂ ಓದಿ : ರಾಜಕಾರಣಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ವಿಜಯಲಕ್ಷ್ಮಿಗೆ ಸಂಕಷ್ಟ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News