ಭೀಕರ ಅಪಘಾತ:ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಕಾರು: ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು

Road Accident: ಬೆಂಗಳೂರಿನ ಯಶವಂತಪುರ ಸರ್ಕಲ್ ನಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಕಾರು ಫ್ಲೈ ಓವರ್ ಮೇಲಿನ ಡಿವೈಡರ್ ಗೆ ಬಡಿದು, ಬೈಕ್ ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದೆ. 

Written by - Yashaswini V | Last Updated : Sep 3, 2024, 10:25 AM IST
  • ಯಶವಂತಪುರ ಬಳಿ ಫ್ಲೈ ಓವರ್‌ನಿಂದ ಬಿದ್ದ ಕಾರು
  • ಡಿವೈಡರ್‌ಗೆ ಹೊಡೆದು ಕೆಳಗೆ ಬಿದ್ದ ಕಾರು
  • ಫ್ಲೈ ಓವರ್ ಮೇಲ್ಭಾಗದಲ್ಲಿ ಒಂದು ಬೈಕ್‌ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿರುವ ಕಾರು
ಭೀಕರ ಅಪಘಾತ:ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಕಾರು:  ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು  title=

Bengaluru Road Accident: ನಸುಕಿನ ಜಾವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ಅಪಘಾತ (Horrible accident in Bengaluru) ಸಂಭವಿಸಿದ್ದು, ಕಾರೊಂದು ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಮಹಿಳೆಯೂ ಸೇರಿದಂತೆ ಐವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.  

ಬೆಂಗಳೂರಿನ ಯಶವಂತಪುರ ಸರ್ಕಲ್ (Yashwantpur Circle, Bangalore) ನಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಕಾರು ಫ್ಲೈ ಓವರ್ ಮೇಲಿನ ಡಿವೈಡರ್ ಗೆ ಬಡಿದು, ಬೈಕ್ ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದೆ. ಅಪಘಾತಕ್ಕೀಡಾದ ಕಾರ್ ತಮಿಳುನಾಡು ರಿಜಿಸ್ಟ್ರೇಷನ್ (TN37DH9484) ವೋಲ್ಕ್ ಸ್ವಾಗನ್ ಕಾರು  ಎಂದು ತಿಳಿದುಬಂದಿದೆ. 

ಕಾರಿನಲ್ಲಿದ್ದವರು ಶಬರೀಶ್ (೨೯), ಶಂಕರ್ ರಾಮ್ (೨೯), ಅನುಶ್ರೀ(೨೩),  ಮಿಥುನ್ (೨೮) ಎಂದು ಗುರುತಿಸಲಾಗಿದ್ದು, ಬೈಕ್ ನಲ್ಲಿದ್ದ ವ್ಯಕ್ತಿ ಹೆಸರು ಮಂಜುನಾಥ್ (೩೮) ಎಂದು ತಿಳಿದುಬಂದಿದೆ.  

ಸೇಲಂ ಮೂಲದ ಶಬರೀಶ್ ವೀಸಾಗಾಗಿ ನಿನ್ನೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದರು.  ಶಬರೀಶ್ ಮತ್ತು ಮಿಥುನ್ ಬೆಂಗಳೂರಿನಲ್ಲಿ ವಾಸವಿದ್ದ ಶಂಕರ್ ಮತ್ತು ಆತನ ಸಹೋದರಿ ಅನುಶ್ರೀ ಮನೆಗೆ ಬಂದಿದ್ದರು. ಗೆಳೆಯರು ಬಂದಿದ್ದರಿಂದ ಎಲ್ಲರೂ ಒಟ್ಟಿಗೆ ಸೇರಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. 

ಇದನ್ನೂ ಓದಿ- 8 ತಿಂಗಳ ಬಳಿಕ‌ ಆನೆ ಕಳೇಬರ ಪತ್ತೆ: ಅರಣ್ಯ ಇಲಾಖೆ ಗಸ್ತಿನ ಬಗ್ಗೆ ಆಕ್ರೋಶ​

ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಮತ್ತು ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡಿದ್ದರು. ಈ ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಬರೀಶ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ- Shivamogga: ಆನ್‌ಲೈನ್‌ನಲ್ಲಿ ಹೂಡಿಕೆ, ಸಾಲ ತೀರಿಸಲಾಗದೇ ತೀರ್ಥಹಳ್ಳಿಯಲ್ಲಿ ಯುವಕ ಆತ್ಮಹತ್ಯೆ..!

ಈ ಭೀಕರ ಅಪಘಾತದ (Accident) ಬಳಿಕ ತಕ್ಷಣವೇ ಸ್ಥಳದಲ್ಲಿದ್ದ ಹೊಯ್ಸಳ ಪೊಲೀಸಋ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿ  ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಅಪಘಾತಕ್ಕೊಳಗಾದವರ ರಕ್ಷಣೆ ಮಾಡಿದ ಹೊಯ್ಸಳ ಪೊಲೀಸರ ಕಾರ್ಯಕ್ಕೆ ಸ್ಥಳೀಯರಿಂದ ವ್ಯಕ್ತವಾಗ್ತಿರೋ ಮೆಚ್ಚುಗೆ ವ್ಯಕ್ತವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News