ತಮ್ಮನ ಮೇಲಿನ ಸೇಡು; ಹಂತಕರ ಕೈಯಲ್ಲಿ ಬಲಿಯಾಗಿದ್ದು ಮಾತ್ರ ಅಣ್ಣ !

ಸಕ್ಕರೆ ನಾಡಿನಲ್ಲಿ ಸಿಹಿ ಸುದ್ದಿ ಬದಲಾಗಿ ಅಹಿತಕರ ಕಹಿ ಘಟನೆಯೊಂದು ನಡೆದಿದೆ. ಹಂತಕರು ತಮ್ಮನನ್ನು ಟಾರ್ಗೆಟ್‌ ಮಾಡಿ ಅಣ್ಣನನ್ನು ಕೊಂದಿದ್ದರೆ. 

Written by - Zee Kannada News Desk | Last Updated : Jun 6, 2023, 01:34 PM IST
  • ತಮ್ಮನ ಮೇಲಿನ ಸೇಡಿಗೆ ಹಂತಕರ ಕೈಯಲ್ಲಿ ಬಲಿಯಾಗಿದ್ದು ಮಾತ್ರ ಅಣ್ಣ
  • ಹಣಕಾಸು ವಿಚಾರಕ್ಕೆ ಕೊಲೆಮಾಡಿ ಶವ ಕಾಡಿನಲ್ಲಿ ಸುಟ್ಟ ಹಂತಕರು
  • ಹಂತಕರ ಕೈಯಲ್ಲಿ ತಗ್ಲಾಕೊಂಡು ದುರಂತ ಅಂತ್ಯ ಕಂಡಿದ್ದು ಅಣ್ಣ
ತಮ್ಮನ ಮೇಲಿನ ಸೇಡು; ಹಂತಕರ ಕೈಯಲ್ಲಿ ಬಲಿಯಾಗಿದ್ದು ಮಾತ್ರ ಅಣ್ಣ ! title=

ಮಂಡ್ಯ: ಸಕ್ಕರೆ ನಾಡಿನಲ್ಲಿ ಸಿಹಿ ಸುದ್ದಿ ಬದಲಾಗಿ ಅಹಿತಕರ ಕಹಿ ಘಟನೆಯೊಂದು ನಡೆದಿದೆ. ಹಂತಕರು ತಮ್ಮನನ್ನು ಟಾರ್ಗೆಟ್‌ ಮಾಡಿ ಅಣ್ಣನನ್ನು ಕೊಂದಿದ್ದರೆ. ಮನೆಯಲ್ಲಿ ತಮ್ಮ ಇಲ್ಲದೇ ಕಿಡಿಗೇಡಿ ಕೈಯಲ್ಲಿ ಅಣ್ಣ ಸಿಕ್ಕಾಕೊಂಡಿದ್ದಾನೆ. ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಾಥನೂರು ಗ್ರಾಮದಲ್ಲಿ ನಡೆದಿದೆ. 

ಹೌದು,

ಇದನ್ನೂ ಓದಿ: Congress Government: 34 ಸಚಿವರು ಮತ್ತು ಖಾತೆ..! ಸಿದ್ದು ಸಂಪೂರ್ಣ ಸಂಪುಟ ಮಾಹಿತಿ ಇಲ್ಲಿದೆ

ದುಷ್ಕರ್ಮಿಗಳು ತಮ್ಮನ ಮೇಲಿನ ಸೇಡಿಗೆ ಪೊಲೀಸರ ನೆಪದಲ್ಲಿ ಬಂದು ವೆಂಕಟೇಶ್ ಸಹೋದರ ರಮೇಶ್ ನ್ನು ಹುಡುಕಾಡಿದ್ದಾರೆ. ಆದರೆ ಆ ವೇಳೆ ತಮ್ಮ ರಮೇಶ್ ಇಲ್ಲದ ಕಾರಣ ಅಣ್ಣನ್ನು ಅಪಹರಿಸಿಕೊಂಡು ಹೋಗಿ ಕೊಲೆ  ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಭೀಮೇಶ್ ಹಾಗೂ ವಿನಯ್, ರಮೇಶ್ ಜೊತೆ ಹಣಕಾಸು ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ಪೊಲೀಸರೆಂದು ಹೇಳಿಕೊಂಡು ರಮೇಶ್ ನನ್ನು ಹುಡುಕಿಕೊಂಡು ಅವರ ಮನೆ ಬಂದಿದ್ದರು.

ಇದನ್ನೂ ಓದಿ: Karnataka Cabinet List: ʼಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆದುʼ

ಮನೆಯಲ್ಲಿ ತಮ್ಮ ರಮೇಶ್ ಇಲ್ಲದ ಕಾರಣ ಆತನ ಅಣ್ಣ ವೆಂಕಟೇಶ್​ನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ಅಣ್ಣ  ವೆಂಕಟೇಶ್​ನನ್ನು  ಹತ್ಯೆ ಮಾಡಿ ಈರೇಗೌಡನ ಕೊಪ್ಪಲು ಅರಣ್ಯಪ್ರದೇಶದಲ್ಲಿ ಶವವನ್ನು ಕಿಡಿಗೇಡಿಗಳೇ ಸುಟ್ಟು ಹಾಕಿದ್ದಾರೆ. ಸದ್ಯ ಈ ಘಟನೆ ನಡೆದು 13 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News