KGF ಸಿನಿಮಾದಿಂದ ಪ್ರೇರಣೆ: ನಾಲ್ವರು ಸೆಕ್ಯುರಿಟಿ ಸಿಬ್ಬಂದಿಯನ್ನು ಹತ್ಯೆಗೈದ ಹದಿಹರೆಯದ ಯುವಕ!

ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮೂವರು ಸೆಕ್ಯುರಿಟಿ ಸಿಬ್ಬಂದಿಗಳ ಹತ್ಯೆ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದರು.

Written by - Bhavishya Shetty | Last Updated : Sep 3, 2022, 01:43 PM IST
    • ಕೆಜಿಎಫ್ ನಿಂದ ಸ್ಪೂರ್ತಿ ಪಡೆದು ದರೋಡೆಕೋರನಾಗಿ ಪ್ರಸಿದ್ಧಿ ಪಡೆಯಬೇಕೆಂದು ಕೊಲೆ
    • ನಾಲ್ವರು ಸೆಕ್ಯುರಿಟಿ ಸಿಬ್ಬಂದಿಯನ್ನು ಕೊಲೆಗೈದ 19ರ ಹದಿಹರೆಯದ ಯುವಕ
    • ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಕೃತ್ಯ
KGF ಸಿನಿಮಾದಿಂದ ಪ್ರೇರಣೆ: ನಾಲ್ವರು ಸೆಕ್ಯುರಿಟಿ ಸಿಬ್ಬಂದಿಯನ್ನು ಹತ್ಯೆಗೈದ ಹದಿಹರೆಯದ ಯುವಕ!  title=
KGF Movie

ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ನಿಂದ ಸ್ಪೂರ್ತಿ ಪಡೆದು ದರೋಡೆಕೋರನಾಗಿ ಪ್ರಸಿದ್ಧಿ ಪಡೆಯಬೇಕು ಎಂಬ ಹುಚ್ಚುತನದಿಂದ ನಾಲ್ವರು ಸೆಕ್ಯುರಿಟಿ ಸಿಬ್ಬಂದಿಗಳನ್ನು ಹದಿಹರೆಯದ ಯುವನೋರ್ವ ಕೊಲೆಗೈದಿದ್ದಾನೆ. ಈ ಘಟನೆ  ಮಧ್ಯಪ್ರದೇಶದಲ್ಲಿ ನಡೆದಿದೆ. 

ಇದನ್ನೂ ಓದಿ: ಜಗಳ ಮಾಡಿದರೆಂದು ಆಕ್ರೋಶ: ಬೈಕ್ ಮೇಲೆ ಕಾರನ್ನು ಹತ್ತಿಸಿದ ಚಾಲಕ...ಮುಂದೇನಾಯ್ತು?

ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮೂವರು ಸೆಕ್ಯುರಿಟಿ ಸಿಬ್ಬಂದಿಗಳ ಹತ್ಯೆ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದರು. ಇನ್ನು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿ ಶಿವಪ್ರಸಾದ್ ಧ್ರುವೆ (19) ಎಂಬಾತನನ್ನು ಭೋಪಾಲ್‌ನಿಂದ ಬಂಧಿಸಿ ಕರೆತರಲಾಗಿದ್ದು, ಈ ಸಂಬಂಧ ಅನೇಕ ತನಿಖೆಗಳು ನಡೆಯುತ್ತಿವೆ ಎಂದು ಸಾಗರ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅನುರಾಗ್ ತಿಳಿಸಿದ್ದಾರೆ.

ಇನ್ನು ಕಳೆದ ಐದು ದಿನಗಳಲ್ಲಿ ನಾಲ್ವರು ಗಾರ್ಡ್‌ಗಳನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕೆಜಿಎಫ್ ಸಿನಿಮಾದ ರಾಕಿಭಾಯ್ ಪಾತ್ರದಿಂದ ಸ್ಪೂರ್ತಿ ಪಡೆದು, ಹಣ ಸಂಗ್ರಹಿಸಲು, ದರೋಡೆ ಮಾಡಲು ಅಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಪೊಲೀಸರನ್ನು ಟಾರ್ಗೆಟ್ ಮಾಡಲು ಪ್ಲ್ಯಾನ್ ರೂಪಿಸಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. 

ಇನ್ನು ಮೇ ತಿಂಗಳಲ್ಲಿ ಶವವಾಗಿ ಪತ್ತೆಯಾದ ಮತ್ತೋರ್ವ ವಾಚ್‌ಮನ್‌ನ ಕೊಲೆ ಪ್ರಕರಣದಲ್ಲೂ ಈತನ ಕೈವಾಡ ಇದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಇಲ್ಲಿನ ಸಾಗರದ ಕೇಸರಿ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. 

ಇದನ್ನೂ ಓದಿ:  ನಿಮಿಷಗಳಲ್ಲಿ ಕೋಣೆ ತಂಪಾಗುವಂತೆ ಮಾಡಲು ಹಳೆಯ ಎಸಿಯನ್ನು ಹೀಗೆ ಮಾಡಿ

ಇಲ್ಲಿಯವರೆಗೆ ಈತ ಕೊಲೆಗಳನ್ನು ರಾತ್ರಿ ಸಂದರ್ಭದಲ್ಲಿಯೇ ಮಾಡಿದ್ದಾನೆ ಎಂದು ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಆದರೆ ಆತ ನಿದ್ರಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಮಾತ್ರ ಏಕೆ ಗುರಿಯಾಗಿಸಿಕೊಂಡಿದ್ದಾನೆ ಎಂಬುದು ಮಾತ್ರ ಪೊಲೀಸರಿಗೆ ಇನ್ನೂ ಖಚಿತವಾಗಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News