18 ತಿಂಗಳ ಮಗು ಸೇರಿ 6 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಾಯಿ!

ಮಹಿಳೆಯೊಬ್ಬರು ತನ್ನ 6 ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. 

Written by - Chetana Devarmani | Last Updated : May 31, 2022, 01:07 PM IST
  • ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಾಯಿ
  • 18 ತಿಂಗಳ ಮಗು ಸೇರಿ 6 ಮಕ್ಕಳು ಸಾವು
  • ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಘಟನೆ
18 ತಿಂಗಳ ಮಗು ಸೇರಿ 6 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಾಯಿ! title=
ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಾಯಿ

ಮುಂಬೈ (ಮಹಾರಾಷ್ಟ್ರ): ಮಹಿಳೆಯೊಬ್ಬರು ತನ್ನ 6 ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. 

ಇದನ್ನೂ ಓದಿ: Covid-19: : ಓಮಿಕ್ರಾನ್‌ನ ಉಪ-ರೂಪಾಂತರಗಳಾದ BA.4, BA.5 ಎಷ್ಟು ಅಪಾಯಕಾರಿ?

ತಾಯಿಯೊಬ್ಬಳು ಸೋಮವಾರ ಬಾವಿಗೆ ಎಸೆದಿದ್ದರಿಂದ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಖರಾವಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

30 ವರ್ಷದ ಮಹಿಳೆ ತನ್ನ ಗಂಡನ ಕುಟುಂಬದ ಸದಸ್ಯರು ಥಳಿಸಿದ ನಂತರ ಈ ರೀತಿ ಮಾಡಿದ್ದಾಳೆ. ನೀರಿನಲ್ಲಿ ಮುಳುಗಿದ ಮಕ್ಕಳು ಸಾವನ್ನಪ್ಪಿದ್ದಾರೆ. 18 ತಿಂಗಳಿಂದ 10 ವರ್ಷದೊಳಗಿನ 6 ಮಕ್ಕಳು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಪ್ರವಾಸಿ ವೀಸಾ ಇಂಟರ್‌ವ್ಯೂ ಪುನಾರಂಭ: ಯುಎಸ್‌ ರಾಯಭಾರ ಕಛೇರಿ ಸ್ಪಷ್ಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News