Dharwad Crime: ಕುಡಿದು ಬಂದು ಎಗರಾಡಿದ್ದ ಗಂಡನ ಹತ್ಯೆ..!

ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣ ಚಿಕಿತ್ಸೆ ಫಲಿತಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Written by - Zee Kannada News Desk | Last Updated : Mar 12, 2022, 12:14 PM IST
  • ಕಂಠಪೂರ್ತಿ ಕುಡಿದು ಬಂದು ಎಗರಾಡಿದ್ದ ಗಂಡನ ಹತ್ಯೆ ಮಾಡಿದ ಪತ್ನಿ
  • ಕುಡುಕ ಪತಿಯನ್ನು ಹತ್ಯೆ ಮಾಡಿದ ಧಾರವಾಡ ಮಹಿಳಾ ಮೋರ್ಚಾ ಅಧ‍್ಯಕ್ಷೆ
  • ಗಂಭೀರವಾಗಿ ಗಾಯಗೊಂಡಿದ್ದ ಪತಿ ಈರಣ್ಣ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು
Dharwad Crime: ಕುಡಿದು ಬಂದು ಎಗರಾಡಿದ್ದ ಗಂಡನ ಹತ್ಯೆ..! title=
ಕುಡುಕ ಪತಿ ಹತ್ಯೆ ಮಾಡಿದ ಪತ್ನಿ

ಧಾರವಾಡ: ಕುಡಿದು ಬಂದು ಎಗರಾಡಿದ್ದ ಗಂಡನನ್ನು ಪತ್ನಿಯೇ ಹತ್ಯೆ ಮಡಿರುವ ಘಟನೆ ಧಾರವಾಡ ಜಿಲ್ಲೆ(Dharwad District)ಯ ಮರೆವಾಡ ಗ್ರಾಮದಲ್ಲಿ ನಡೆದಿದೆ. ಧಾರವಾಡದ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ ಅವರು ಮಗಳೊಂದಿಗೆ ಸೇರಿಕೊಂಡು ಪತಿ ಈರಣ್ಣರನ್ನು ಹತ್ಯೆ ಮಾಡಿದ್ದಾರೆ.

ಪತಿ ಈರಣ್ಣ(Drunken Husband) ಅವರು ಕಂಠಪೂರ್ತಿ ಕುಡಿದು ಮನೆಗೆ ಬಂದು ಪತ್ನಿ ಮತ್ತು ಮಗಳೊಂದಿಗೆ ಜಗಳವಾಡುತ್ತಿದ್ದರು. ಪ್ರತಿನಿತ್ಯ ಗಂಡನ ಕಿರುಕುಳದಿಂದ ಪತ್ನಿ ಶೋಭಾ ಅವರು ರೋಸಿ ಹೋಗಿದ್ದರು. ಕುಡಿಯುವುದನ್ನು ನಿಲ್ಲಿಸು ಎಂದು ಪತಿಗೆ ಪತ್ನಿ ಮತ್ತುಪುತ್ರಿ ಬುದ್ಧಿವಾದ ಹೇಳಿದ್ದರು. ಆದರೂ ಈರಣ್ಣ ಕುಡಿಯುವುದನ್ನು ನಿಲ್ಲಿಸಿರಲಿಲ್ಲ.

ಇದನ್ನೂ ಓದಿ: Peacocks Found Dead ವಿಷ ಉಣಿಸಿ ರಾಷ್ಟ್ರ ಪಕ್ಷಿ ನವಿಲುಗಳ ಮಾರಣಹೋಮ..!?

ಕಂಠಪೂರ್ತಿ ಕುಡಿದು ಬಂದು ಮನೆಗೆ ಬಂದ ಈರಣ್ಣ ಪತ್ನಿ ಮತ್ತು ಮಗಳೊಂದಿಗೆ ಜಗಳಕ್ಕೆ ಮುಂದಾಗಿದ್ದಾನೆ. ಈ ವೇಳೆ ಕುಪಿತಗೊಂಡ ಪತ್ನಿ ಶೋಭಾ ಅವರು ಮಗಳೊಂದಿಗೆ ಸೇರಿ ಪತಿಯ ಮೇಲೆ ಹಲ್ಲೆ(Husband Killed) ನಡೆಸಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‍ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣ ಚಿಕಿತ್ಸೆ ಫಲಿತಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ(Dharwad Rural Police Station)ಯಲ್ಲಿ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ: Bike Thief : ಬೈಕ್ ಕಳ್ಳ ಪತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಪತ್ನಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News