ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಬಾವ ನಾಪತ್ತೆ ಪ್ರಕರಣ: ಕಾರು ಪತ್ತೆ, ಕಾರಿನ ಗ್ಲಾಸ್ ಚೂರು

ಮಹಾದೇವಯ್ಯ ಅವರ ಕಾರ್ ಪತ್ತೆಯಾಗಿರುವ ಜಾಗದಲ್ಲಿ ಕಾರಿನ ಗಾಜು ಒಡೆದಿದ್ದು ರಕ್ತದ ಕಲೆಗಳು ಕೂಡ ಕಂಡು ಬಂದಿದೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು ಬೆರಳಚ್ಚು ತಜ್ಞರು ಕಾರನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Written by - Yashaswini V | Last Updated : Dec 4, 2023, 11:13 AM IST
  • ಸಿ.ಪಿ. ಯೋಗೇಶ್ವರ್ ಬಾವ ಮಹದೇವಯ್ಯ ಕಿಡ್ನಾಪ್ ಪ್ರಕರಣ.
  • ಚಾಮರಾಜನಗರ ಜಿಲ್ಲೆಯಲ್ಲಿ ಮಹದೇವಯ್ಯ ಕಾರು ಪತ್ತೆ.
  • ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದಲ್ಲಿ ಕಾರು ಪತ್ತೆ.
ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಬಾವ ನಾಪತ್ತೆ ಪ್ರಕರಣ: ಕಾರು ಪತ್ತೆ, ಕಾರಿನ ಗ್ಲಾಸ್ ಚೂರು title=

ಚಾಮರಾಜನಗರ: ತೋಟದ ಮನೆಯಿಂದ ಕಾಣೆಯಾಗಿರಯವ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಅವರ ಬಾವ ಮಹಾದೇವಯ್ಯರ ಕಾರು ಪತ್ತೆಯಾಗಿದ್ದು ಕಾರಿನ ಗ್ಲಾಸ್ ಚೂರು ಚೂರಾಗಿದ್ದು, ರಕ್ತದ ಕಲೆಗಳು ಕಂಡು ಬಂದಿರುವುದಾಗಿ ತಿಳಿದು ಬಂದಿದೆ. 

ಮಹಾದೇವಯ್ಯ ಅವರ ಕಾರ್ ಪತ್ತೆಯಾಗಿರುವ ಜಾಗದಲ್ಲಿ ಕಾರಿನ ಗಾಜು ಒಡೆದಿದ್ದು ರಕ್ತದ ಕಲೆಗಳು ಕೂಡ ಕಂಡು ಬಂದಿದೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು ಬೆರಳಚ್ಚು ತಜ್ಞರು ಕಾರನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

ಇನ್ನೂ ಬಾವ ಮಹಾದೇವಯ್ಯ ಅವರ ಕಾರು ಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹನೂರು ತಾಲೂಕಿನ ರಾಮಾಪುರಕ್ಕೆ ಭೇಟಿ ಕೊಟ್ಟಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಇದನ್ನೂ ಓದಿ- ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ‘ಜೀ ನ್ಯೂಸ್ ಕನ್ನಡ’ ತನಿಖೆಯಿಂದ ಇ-ಮೇಲ್ ಮೂಲ ಪತ್ತೆ!

ಏನಿದು ಘಟನೆ? 
ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಅವರು, ಮೂರು ದಿನಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತಮ್ಮ ತೋಟದ ಮನೆಯಿಂದ ಕಾಣೆಯಾಗಿದ್ದರು. ಯಾರೋ ಅವರನ್ನು ಕಿಡ್ಯಾಪ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. 

ಇದನ್ನೂ ಓದಿ- ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ವಂಚಿಸ್ತಿದ್ದ ಆರೋಪಿಗಳ ಬಂಧನ

ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನಿನ್ನೆ (ಡಿ. 3) ರಾತ್ರಿ ಮಹಾದೇವಯ್ಯ ಅವರು ಬಳಸುತ್ತಿದ್ದ ಕಾರ್ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದು ಕಾರಿನ ಗಾಜು ಪುಡಿಪುಡಿಯಾಗಿದೆ. ಗಮನಾರ್ಹ ವಿಷಯವೆಂದರೆ, ಅವರ ಕಾರು ಮಾತ್ರ ಪತ್ತೆಯಾಗಿದ್ದು, ಮಹಾದೇವಯ್ಯ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News