Drug Case: ಸಿದ್ಧಾಂತ್‌ ಕಪೂರ್‌ ಸೇರಿ ಐವರಿಗೆ ಜಾಮೀನು ಮಂಜೂರು

ಇದೇ ಪಾರ್ಟಿಯಲ್ಲಿ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸಹ  ಭಾಗಿಯಾಗಿರುವುದು ಖಚಿತವಾಗಿತ್ತು. ಬಳಿಕ ಸಿದ್ಧಾಂತ್‌ರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಬೇಲ್‌ ಮೇಲೆ ಅವರನ್ನು ರಿಲೀಸ್‌ ಮಾಡಲಾಗಿದೆ. ಆದರೆ ವೈದ್ಯಕೀಯ ಪರೀಕ್ಷೆ ನಡೆಸುವಾಗ ಸಿದ್ಧಾಂತ್‌ ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. 

Written by - Bhavishya Shetty | Last Updated : Jun 14, 2022, 09:31 AM IST
  • ನಟ ಸಿದ್ಧಾಂತ್‌ ಕಪೂರ್‌ಗೆ ಜಾಮೀನು ಮಂಜೂರು
  • ಡ್ರಗ್‌ ಸೇವಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ನಟ
  • ಕಳೆದ ದಿನ ಹಲಸೂರು ಪೊಲೀಸರು ದಾಳಿ ನಡೆಸಿದ್ದರು.
Drug Case: ಸಿದ್ಧಾಂತ್‌ ಕಪೂರ್‌ ಸೇರಿ ಐವರಿಗೆ ಜಾಮೀನು ಮಂಜೂರು  title=
siddhanth kapoor

ಬೆಂಗಳೂರು: ಡ್ರಗ್‌ ಸೇವಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ನಟ ಸಿದ್ಧಾಂತ್‌ ಕಪೂರ್‌ ಸೇರಿ ಐವರಿಗೆ ಇಂದು ಜಾಮೀನು ಮಂಜೂರಾಗಿದೆ. ಅಷ್ಟೇ ಅಲ್ಲದೆ, ಇಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಕಳೆದ ದಿನ ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿ ತೊಡಗಿದ್ದ ಒಟ್ಟು 50 ಜನರನ್ನ ವಶಕ್ಕೆ ಪಡೆಯಲಾಗಿತ್ತು. 

ಇದನ್ನು ಓದಿ: ಸೋಪೋರ್ ಎನ್‌ಕೌಂಟರ್‌ನಲ್ಲಿ ಪರಾರಿಯಾಗಿದ್ದ ಉಗ್ರರನ್ನು ಶ್ರೀನಗರದಲ್ಲಿ ಹತ್ಯೆಗೈದ ಭದ್ರತಾ ಪಡೆ

ಸ್ಟೇಷನ್‌ ಬೇಲ್‌ ಮೇಲೆ ಐವರನ್ನು ರಿಲೀಸ್‌ ಮಾಡಲಾಗಿದ್ದು, ಪೊಲೀಸರು ವಿಚಾರಣೆಗೆ ಕರೆದಾಗ ಸಹಕರಿಸುವಂತೆ ಸೂಚನೆ ನೀಡಲಾಗಿದೆ. ಸದ್ಯ ಪೊಲೀಸರು ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಿದ್ದು ಯಾರು ಎಂಬ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. 

ಘಟನೆ ವಿವರ: 
ಕಳೆದ ದಿನ ತಡರಾತ್ರಿಯಾದರೂ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆಗ ಪಾರ್ಟಿಯಲ್ಲಿ ರಾಜಕೀಯ ನಾಯಕರ ಮಕ್ಕಳು, ಸೆಲೆಬ್ರಿಟಿಗಳು ಸಹ ಭಾಗಿಯಾಗಿದ್ದು ಗಮನಕ್ಕೆ ಬಂದಿದೆ. ಜತೆಗೆ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿಯೂ ನಡೆಸುತ್ತಿದ್ದ ಅನುಮಾನ ವ್ಯಕ್ತವಾಗಿತ್ತು. ದಾಳಿ ಸಂದರ್ಭದಲ್ಲಿ ಸುಮಾರು 50 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಸದ್ಯ ವಶಕ್ಕೆ ಪಡೆದಿದ್ದ 50 ಜನರ ಪೈಕಿ 35 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗಿತ್ತು. ಅದರಲ್ಲಿ ಐವರು ಡ್ರಗ್‌  ಸೇವನೆ ಮಾಡಿರೋದು ದೃಢವಾಗಿತ್ತು. 

ಹಿರಿಯ ನಟ ಶಕ್ತಿ ಕಪೂರ್ ಪುತ್ರ ವಶಕ್ಕೆ: 
ಇದೇ ಪಾರ್ಟಿಯಲ್ಲಿ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸಹ  ಭಾಗಿಯಾಗಿರುವುದು ಖಚಿತವಾಗಿತ್ತು. ಬಳಿಕ ಸಿದ್ಧಾಂತ್‌ರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಬೇಲ್‌ ಮೇಲೆ ಅವರನ್ನು ರಿಲೀಸ್‌ ಮಾಡಲಾಗಿದೆ. ಆದರೆ ವೈದ್ಯಕೀಯ ಪರೀಕ್ಷೆ ನಡೆಸುವಾಗ ಸಿದ್ಧಾಂತ್‌ ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ.

ಇದನ್ನು ಓದಿ: Men Health Tips: ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಪುರುಷರು ಈ ಡ್ರೈ ಫ್ರೂಟ್ಸ್ ಸೇವಿಸಿ!

ಈ ಹಿಂದೆ ಡ್ರಗ್ಸ್ ಜಾಲದಲ್ಲಿ ಸಿದ್ದಾಂತ್ ಕಪೂರ್ ಸಹೋದರಿ, ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಹೆಸರು ಸಹ ಕೇಳಿ ಬಂದಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ತನಿಖೆ ವೇಳೆ ಶ್ರದ್ಧಾ ಕಪೂರ್‌ಗೆ ಎನ್‌ಸಿಬಿ ನೋಟಿಸ್ ನೀಡಿತ್ತು. ಈ ವೇಳೆ ಶ್ರದ್ಧಾ ಕಪೂರ್ ವಿಚಾರಣೆಗೆ ಹಾಜರಾಗಿದ್ದರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News