ಮನೆ ಬಾಡಿಗೆ ಕೇಳೋ ನೆಪ : ಓನರ್‌ ತಲೆ ಹೊಡೆದು ಚಿನ್ನದ ಸರ ಕದ್ದ ಖತರ್ನಾಕ್‌ ಲೇಡಿಸ್‌

2 ಮನೆ ಖಾಲಿ ಇದ್ದವು. ಮನೆ ಬಾಡಿಗೆಗೆ ಬೇಕು ಎಂದು 15 ದಿನಗಳಿಂದ ಪದೇಪದೇ ಬಂದು ವಿಚಾರಿಸಿ ಶಾಂತಮ್ಮರನ್ನು ಪರಿಚಯ ಮಾಡಿಕೊಂಡಿದ್ದರು. ಮನೆಯಲ್ಲಿ ಯಾರು ಯಾವ ಸಮಯಕ್ಕೆ ಇರುತ್ತಾರೆ ಎಂದು ಸಂಪೂರ್ಣವಾಗಿ ತಿಳಿದುಕೊಂಡು ಸಂಚು ರೂಪಿಸಿದ್ದರು.

Written by - VISHWANATH HARIHARA | Edited by - Krishna N K | Last Updated : May 26, 2023, 05:52 PM IST
  • ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಚಿನ್ನದ ಸರ ಕದ್ದು ಪರಾರಿ.
  • ಸಿಲಿಕಾನ್‌ ಸಿಟಿಯ ಲಗ್ಗೆರೆಯ ಪಾರ್ವತಿ ನಗರದಲ್ಲಿ ಘಟನೆ.
  • ನಂದಿನಿ ಲೇಔಟ್ ಪೊಲೀಸರಿಂದ ಪರಿಶೀಲನೆ, ಪ್ರಕರಣ ದಾಖಲು.
ಮನೆ ಬಾಡಿಗೆ ಕೇಳೋ ನೆಪ : ಓನರ್‌ ತಲೆ ಹೊಡೆದು ಚಿನ್ನದ ಸರ ಕದ್ದ ಖತರ್ನಾಕ್‌ ಲೇಡಿಸ್‌ title=

ಬೆಂಗಳೂರು : ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದ ಇಬ್ಬರು ಖತರ್ನಾಕ್‌ ಮಹಿಳೆಯರು ಮನೆಯೊಡತಿಯ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಸಿಲಿಕಾನ್‌ ಸಿಟಿಯ ಲಗ್ಗೆರೆಯ ಪಾರ್ವತಿ ನಗರದ ನಿವಾಸಿ ಶಾಂತಮ್ಮ ಹಲ್ಲೆಗೊಳಗಾದವರು. ಶಾಂತಮ್ಮ ಪತಿ ಕೊರೊನಾದಿಂದ ಮೃತಪಟ್ಟ ಮೇಳೆ ಶಾಂತಮ್ಮ ಒಂಟಿಯಾಗಿ ವಾಸವಾಗಿದ್ದರು. 

ಶಾಂತಮ್ಮ 4 ಮನೆ ಓನರ್‌ ಸಹ ಹೌದು. ಇದರಲ್ಲಿ 2 ಮನೆ ಬಾಡಿಗೆಗೆ ಕೊಟ್ಟಿದ್ದರು. ಇನ್ನೂ 2 ಮನೆ ಖಾಲಿ ಇದ್ದವು. ಇದೇ ನೆಪ ಮಾಡಿಕೊಂಡ ಆರೋಪಿ ಮಹಿಳೆಯರು ಖಾಲಿ ಇರುವ ಮನೆಗಳನ್ನು ಬಾಡಿಗೆಗೆ ಕೇಳಿದ್ದರು. 15 ದಿನಗಳಿಂದ ಪದೇಪದೇ ಬಂದು ವಿಚಾರಿಸಿ ಶಾಂತಮ್ಮರನ್ನು ಪರಿಚಯ ಮಾಡಿಕೊಂಡಿದ್ದರು. ಪರಿಚಯದ ನೆಪದಲ್ಲಿ ಶಾಂತಮ್ಮ ವಾಸವಿರುವ ಏರಿಯಾ, ಮನೆಯಲ್ಲಿ ಯಾರು ಯಾವ ಸಮಯಕ್ಕೆ ಇರುತ್ತಾರೆ ಎಂದು ಸಂಪೂರ್ಣವಾಗಿ ತಿಳಿದುಕೊಂಡು ಸಂಚು ರೂಪಿಸಿದ್ದರು. ಅಲ್ಲದೆ ಶಾಂತಮ್ಮರ ಕುಟುಂಬದ ಬಗ್ಗೆ ಎಲ್ಲಾ ಮಾಹಿತಿ‌ ಪಡೆದುಕೊಂಡಿದ್ದರು. 

ಇದನ್ನೂ ಓದಿ: ತಪ್ಪಾಗಿ ಪಿಂಚಣಿ ನಿಗದಿಪಡಿಸಿದ ಪಿ.ಎಫ್ ಇಲಾಖೆಗೆ ರೂ.5 ಲಕ್ಷ 63 ಸಾವಿರ ಪರಿಹಾರ ನೀಡಲು ಆದೇಶ

ಮನೆ ಬಾಡಿಗೆಗೆ ಬರುವುದಾಗಿ ನಂಬಿಸಿದ್ದ ಇಬ್ಬರು ಮಹಿಳೆಯರು ಸಂಪ್ರದಾಯದಂತೆ ಮನೆಗೆ ಬಂದು ಹಾಲು ಉಕ್ಕಿಸುವುದಾಗಿ ಹೇಳಿದ್ದರು. ಅದರಂತೆ ಇಂದು ಶಾಂತಮ್ಮ ಮನೆಗೆ ಬಂದ ಆರೋಪಿಗಳು ಹಾಲು ಉಕ್ಕಿಸಲು ಬಾಡಿಗೆ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು ಕಟ್ಟಿಗೆಯಿಂದ ಶಾಂತಮ್ಮರ ತಲೆಗೆ ಬಲವಾಗಿ  ಹೊಡೆದು ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನೂ ಶಾಂತಮ್ಮ ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಎಸ್ಕೇಪ್‌ ಆಗಿದ್ದಾರೆ. ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ನಂದಿನಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News