Varthur Case: ಬೆಂಗಳೂರಿನ ವರ್ತೂರು-ಗುಂಜೂರು ರಸ್ತೆಯಲ್ಲಿ ಇರುವ ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ 10 ವರ್ಷದ ಬಾಲಕಿ ನಿರ್ಜೀವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುರುವಾರ ಸಂಜೆ ನಡೆದಿದೆ. ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನಿರ್ಲಕ್ಷ್ಯವೇ ಇದಕ್ಕೆ ಮೂಲ ಕಾರಣ ಎಂದು ನಿವಾಸಿಗಳು ಅಪಾರ್ಟ್‌ಮೆಂಟ್‌ನ ಮುಂದೆ ಗಲಾಟೆ ಮಾಡಿದರು. ವರ್ತೂರು ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಮೃತರನ್ನು ಮಾನ್ಯ ಎಂದು ಗುರುತಿಸಲಾಗಿದ್ದು, ಇವರು ಪ್ರೆಸ್ಟೀಜ್ ಲೆಕ್ರೆಡ್ ಅಪಾರ್ಟ್‌ಮೆಂಟ್ ನಿವಾಸಿ. ಈ ಬಾಲಕಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 4ನೇ ತರಗತಿ ಓದುತ್ತಿದ್ದರು. ಆಕೆಯ ತಂದೆ, ರಾಜೇಶ್ ಕುಮಾರ್ "ಲೈಫ್ ಸಿಂಪ್ಲಿಫೈಡ್" ನ ಸಂಸ್ಥಾಪಕ ಮತ್ತು CEO ಆಗಿದ್ದಾರೆ.
ಇದನ್ನೂ ಓದಿ: Student suicide: ಕಾಲೇಜು ಡೀನ್ ಕಿರುಕುಳ ಆರೋಪ; ಮಾತ್ರೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ!
ಕುಟುಂಬ ಅಪಾರ್ಟ್‌ಮೆಂಟ್‌ನ ಟವರ್ 17 ರಲ್ಲಿ ವಾಸಿಸುತ್ತಿದ್ದು. ಪೊಲೀಸ್ ವರದಿಯು ಹುಡುಗಿ ಸುಮಾರು 7:30 PM ಆಸುಪಾಸಿನಲ್ಲಿ ಕೊಳದ ಸುತ್ತಲೂ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದಿದೆ ಎಂದು ಊಹಿಸಲಾಗಿದೆ. ಘಟನೆಯ ಬಗ್ಗೆ ಮೃತಳ ತಂದೆಗೆ 8:00 PM ರ ಸುಮಾರಿಗೆ ತಿಳಿದಿದು ಬಂದಿದ್ದು ತಕ್ಷಣವೆ ಆಸ್ಪತ್ರೆಗೆ ಸಾಗಿಸಲಾಯಿತು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಬಾಲಕಿ ಸಾವನ್ನಪ್ಪಿದ್ದಾಳೆ
ಕೊಳದ ಸುತ್ತಲು ತಂತಿಗಳು ಇರುವುದನ್ನ ಗಮನಿಸಿದ ಪೋಲಿಸರು ಇದು ವಿದ್ಯುತ್‌ನಿಂದ ಉಂಟಾಗಿರುವ ಅವಘಡ ಎಂದು ಶಂಕಿಸಿದ್ದಾರೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು. ಮರಣೋತ್ತರ ಪರೀಕ್ಷೆ ಬಂದ ನಂತರವಷ್ಟೆ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿಯಲಿದೆ ಎಂದು ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
ಇದನ್ನೂ ಓದಿ: Chitradurga: ಪಾಳುಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರಗಳು ಪತ್ತೆ..!
ಗಮನಾರ್ಹವಾಗಿ, ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಿದ್ಯುತ್ ಅಪಘಾತಗಳ ನಡೆದಂತೆ ವರದಿಯಾಗಿದೆ ಅದರೂ ಕೂಡ ಅಪಾರ್ಟ್ಮೆಂಟ್ ಸಿಬ್ಬಂದಿ ಯಾವುದೇ ಕ್ರೀಯೆ ಕೈಗೊಂಡಿಲ್ಲ, ಇದೇ ನಿರ್ಲಕ್ಷ್ಯದಿಂದ ಬಾಲಕಿ ಈಗ ಸಾವನ್ನಪ್ಪಿದ್ದಾಳೆ ಎಂದು ನಿವಾಸಿಗಳು ದೂರಿದ್ದಾರೆ.
ಸರಿಯಾದ ಸುರಕ್ಷತಾ ಕ್ರಮಗಳ ಕೊರತೆಯೇ ಕಾರಣ ಎಂದು ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ದುಃಖಿತ ಪೋಷಕರು ಆರೋಪಿಸಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳು ಪುಟ್ಟ ಜೀವದ ನಷ್ಟಕ್ಕೆ ದುಃಖಿಸುತ್ತಾ. ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಮತ್ತೆ ಈ ರಿತಿಯ ಘಟನೆಗಳು ನಡೆಯದಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಯಾರದೇ ನಿರ್ಲಕ್ಷ್ಯ ಆಗಿರ್ಲಿ, ತನ್ನದಲ್ಲದ ತಪ್ಪಿಗೆ ಒಂದು ಪುಟ್ಟ ಜೀವ ಪ್ರಾಣ ಕಳೆದುಕೊಂಡಿರುವುದು ಮನಕಲುಕುವಂತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.