Student suicide: ಕಾಲೇಜು ಡೀನ್ ಕಿರುಕುಳ ಆರೋಪ; ಮಾತ್ರೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ!

AMC college Student suicide: ತಾಯಿಯ ಎದುರೇ ಡೀನ್ ಅವಾಚ್ಯ ಶಬ್ಧಗಳಿಂದ ಬೈದು ಅವಮಾನ ಮಾಡಿದ್ದದಂತೆ. ಇದರಿಂದ ಮನನೊಂದ ನಿಖಿಲ್ ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Written by - Puttaraj K Alur | Last Updated : Dec 29, 2023, 02:12 PM IST
  • ಮಾತ್ರೆ ಸೇವಿಸಿ ಬೆಂಗಳೂರಿನ ಎಎಂಸಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
  • ಕಾಲೇಜು ಆಡಳಿತ ಮಂಡಳಿ‌ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಆರೋಪ
  • ಕಳೆದ ಒಂದು ತಿಂಗಳಿಂದ ಕಾಲೇಜು‌ ಡೀನ್ ಕಿರುಕುಳ ನೀಡ್ತಿದ್ದ ಬಗ್ಗೆ ಆರೋಪ
Student suicide: ಕಾಲೇಜು ಡೀನ್ ಕಿರುಕುಳ ಆರೋಪ; ಮಾತ್ರೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ! title=
ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!

ಬೆಂಗಳೂರು: ಕಾಲೇಜಿನಲ್ಲಿ ಡೀನ್‌ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಯೊಬ್ಬ ಸಿಕ್ಕ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎಎಂಸಿ ಕಾಲೇಜು ವಿದ್ಯಾರ್ಥಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ನಿಖಿಲ್‌ ಎಎಂಸಿ ಕಾಲೇಜಿನಲ್ಲಿ ಪ್ರಥಮ‌ ವರ್ಷದ ಹೊಟೇಲ್‌ ಮ್ಯಾನೇಜ್ಮೆಂಟ್‌ ವಿಭಾಗದಲ್ಲಿ ಓದುತ್ತಿದ್ದ. ಕಳೆದೊಂದು ತಿಂಗಳಿಂದ ಕಾಲೇಜು ಆಡಳಿತ ಮಂಡಳಿ ಹಾಗೂ ಕಾಲೇಜು‌ ಡೀನ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: 40,000 crore scam: ಯತ್ನಾಳ್ ಹೇಳಿದ ಆ ‘ರಾತ್ರಿ ರಹಸ್ಯ’ ಯಾವುದು ವಿಜಯೇಂದ್ರ?- ಕಾಂಗ್ರೆಸ್

ಇತ್ತೀಚೆಗಷ್ಟೇ ಕಾಲೇಜಿಗೆ ನಿಖಿಲ್‌ ತಾಯಿಯನ್ನು ಕರೆಸಿಕೊಂಡು ಅವರ ಎದುರೇ ಅವಾಚ್ಯ ಶಬ್ಧಗಳಿಂದ ಡೀನ್ ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ನಿಖಿಲ್‌ ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಕೂಡಲೇ ನಾಗರಬಾವಿಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಆತ ಮೃತಪಟ್ಟಿದ್ದಾನೆ.

ಸದ್ಯ ನಿಖಿಲ್ ಪೋಷಕರು ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News