5 ರಾಶಿಗಳ ಮೇಲೆ ಶನಿಯ ವಕ್ರದೃಷ್ಟಿ, ಯಾರಿಗೆ ಲಾಭ, ಯಾರಿಗೆ ಹಾನಿ?

ಸೂರ್ಯನ ಪುತ್ರ ಶನಿ ಇಂದು ಮಕರ ರಾಶಿಗೆ ಹಿಂದಿರುಗುತ್ತಿದ್ದಾನೆ. ಶನಿಯು ಹಿಂದಿರುಗುವಿಕೆಯಿಂದ ಆತನ ವಕ್ರ ನಡೆ ಮಕರ ರಾಶಿಯ ಮೂಲಕ ಆರಂಭವಾಗಲಿದೆ. ಶನಿಯ ವಕ್ರ ನಡೆ ಅನೇಕ ರಾಶಿಗಳ ಮೇಲೆ ಆರ್ಥಿಕವಾಗಿ ಪರಿಣಾಮ ಬೀರಲಿದೆ. 

Updated: May 11, 2020 , 03:25 PM IST
5 ರಾಶಿಗಳ ಮೇಲೆ ಶನಿಯ ವಕ್ರದೃಷ್ಟಿ, ಯಾರಿಗೆ ಲಾಭ, ಯಾರಿಗೆ ಹಾನಿ?

ಸೂರ್ಯನ ಪುತ್ರ ಶನಿ ಇಂದು ಮಕರ ರಾಶಿಗೆ ಹಿಂದಿರುಗುತ್ತಿದ್ದಾನೆ. ಶನಿಯು ಹಿಂದಿರುಗುವಿಕೆಯಿಂದ ಆತನ ವಕ್ರ ನಡೆ ಮಕರ ರಾಶಿಯ ಮೂಲಕ ಆರಂಭವಾಗಲಿದೆ. ಶನಿಯ ವಕ್ರ ನಡೆ ಅನೇಕ ರಾಶಿಗಳ ಮೇಲೆ ಆರ್ಥಿಕವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ಮೇಷ, ವೃಷಭ, ಮಿಥುನ, ವೃಶ್ಚಿಕ ಹಾಗೂ ಕುಂಭ ರಾಶಿಯ ಜಾತಕದವರ ಮೇಲೆ ಇದು ವಿಶೇಷ ಪ್ರಭಾವ ಬೀರಲಿದೆ. ಶನಿಯ ಈ ವಕ್ರ ನಡೆ ಯಾವ ರಾಶಿಗಳಿಗೆ ಲಾಭ/ಹಾನಿ ತರಲಿದೆ ಎಂಬುದನ್ನು ತಿಳಿಯಲು ಈ ಲೇಖನ ಓದಿ.

ಮೇಷ ರಾಶಿ: ಶನಿ ಗ್ರಹದ ವಕ್ರ ನಡೆ ಮೇಷ ರಾಶಿಯ ಜಾತಕ ಇರುವವರಿಗೆ ಲಾಭ ತರಲಿದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಮೇ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಹಣ ಖರ್ಚು ಮಾಡಿ, ಕುಟುಂಬಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ ರಾಶಿ: ಶನಿಯ ವಕ್ರ ನಡೆ ನಿಮಗೆ ಭಾಗ್ಯ ತರಲಿದೆ. ಹಿರಿಯರ ಸೇವೆ ಮಾಡಿ. ಧನ, ವ್ಯಾಪಾರ ಹಾಗೂ ನೌಕರಿಯಲ್ಲಿ ಲಾಭ. ಆದರೆ, ಮನೆಯಲ್ಲಿ ಸ್ವಲ್ಪ ಖರ್ಚು ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ.

ಮಿಥುನ ರಾಶಿ: ಶನಿ ಮಹಾರಾಜನ ಉಲ್ಟಾ ನಡೆ ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಬಹುದು. ಹಳೆ ಸಾಲ ಹಾಗೂ ಕಾಯಿಲೆ ನಿಮ್ಮ ಸಂಕಷ್ಟದ ಕಾರಣವಾಗುವ ಸಾಧ್ಯತೆ ಇದೆ. ಧನಲಾಭದ ದೃಷ್ಟಿಯಿಂದ ಸಮಯ ಸರಿಯಾಗಿಲ್ಲ. ಆಸ್ತಿಯಲ್ಲಿ ಹೂಡಿಕೆ ಮಾಡುವುದರಿಂದ ದೂರ ಇರಿ.

ಕರ್ಕ ರಾಶಿ: ನೌಕರಿ ಬದಲಾವಣೆಯ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಕ್ರೋಧ ಹಾಗೂ ಆವೇಶದಲ್ಲಿ ನೌಕರಿಗೆ ರಾಜೀನಾಮೆ ನೀಡಬೇಡಿ. ಧನಲಾಭದ ದೃಷ್ಟಿಯಿಂದ ಶನಿಯ ವಕ್ರನಡೆ ನಿಮಗೆ ಲಾಭ ತರಲಿದೆ. ಈ ಅವಧಿಯಲ್ಲಿ ಮಾಡಲಾಗುವ ಹೂಡಿಕೆ ದೀರ್ಘಾವಧಿಯಲ್ಲಿ ನಿಮಗೆ ಲಾಭ ನೀಡಲಿದೆ.

ಸಿಂಹ ರಾಶಿ: ಆರ್ಥಿಕವಾಗಿ ಸ್ಥಿತಿ ಸಾಮಾನ್ಯವಾಗಿರಲಿದೆ. ಅತಿ ಹೆಚ್ಚು ಲಾಭದ ಯೋಗ ನಿರ್ಮಾಣಗೊಳ್ಳುತ್ತಿಲ್ಲ. ಹಳೆ ಸಾಲ ನಿಮಗೆ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಖರ್ಚು ಕೂಡ ಮೊದಲಿನಂತೆಯೇ ಇರಲಿದೆ

ಕನ್ಯಾ ರಾಶಿ: ಧನಲಾಭದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಯಾವುದೇ ಆಕಸ್ಮಿಕ ನಿರ್ಣಯಗಳು ಬೇಡ. ಹಲವರಿಗೆ ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ. ನಿಮ್ಮ ಶುಭ ಚಿಂತಕರಿಂದ ಸಲಹೆ ಪಡೆಯುವುದು ಉಚಿತ.

ತುಲಾ ರಾಶಿ: ಗೃಹ ನಿರ್ಮಾಣದ ಕಾರ್ಯ ಸ್ಥಗಿತಗೊಂಡಿದ್ದರೆ, ಅದು ನಿಧಾನವಾಗಿ ಆರಂಭಗೊಳ್ಳಲಿದೆ. ನೌಕರಿ ಬದಲಾವಣೆ ಅಥವಾ ನೌಕರಿಯಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ನೌಕರಿಗೆ ಸಂಬಂಧಿಸಿದ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ಮಾತುಗಳು ಹಾಗೂ ಕೋಪದ ಮೇಲೆ ನಿಯಂತ್ರಣ ಅಗತ್ಯ.

ವೃಶ್ಚಿಕ ರಾಶಿ: ಆದಾಯದಲ್ಲಿ ಲಾಭ. ಗಳಿಕೆಯ ಹೊಸ ಆಯಾಮಗಳು ಮುಂದೆ ಬರುವ ಸಾಧ್ಯತೆ ಇದೆ. ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿರುವ ಕಷ್ಟಗಳ ಅಂತ್ಯ. ಆದರೆ, ಮುಂದಿನ ಕೆಲವು ದಿನಗಳು ಖರ್ಚು ಹಾಗೂ ಒತ್ತಡ ನಿಮ್ಮನ್ನು ಕಾಡಲಿದೆ.

ಧನು ರಾಶಿ: ನಿಮ್ಮ ರಾಶಿಯ ಧನ ಸ್ಥಾನದಲ್ಲಿ ವಿರಾಜಮಾನನಾಗಿರುವ ಶನಿ ನಿಮಗೆ ಆದಾಯದ ಹೊಸ ಆಯಾಮಗಳನ್ನು ತೆರೆಯಲಿದ್ದಾನೆ. ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸಣ್ಣ ಪ್ರಮಾಣದ ಕಾಂಟ್ರಾಕ್ಟ್ ಗಳು ನಿಮಗೆ ಲಾಭ ತರಲಿವೆ. ಹಣ ಹೂಡಿಕೆ ದೀರ್ಘಾವಧಿಯಲ್ಲಿ ನಿಮಗೆ ಲಾಭ ನೀಡಲಿದೆ.

ಮಕರ ರಾಶಿ: ಶನಿಯ ವಕ್ರ ನಡೆ ನಿಮಗೆ ಲಾಭದಾಯಕವಾಗಿ ಸಾಬೀತಾಗಲಿದೆ. ಆತ್ಮವಿಶ್ವಾಸದಲ್ಲಿ ವೃದ್ಧಿಯಾಗಲಿದೆ.ಮಹತ್ವಾಕಾಂಕ್ಷೆಯಲ್ಲಿ ಹೆಚ್ಚಳ, ಹೊಸ ನೌಕರಿ, ಹೊಸ ವ್ಯಾಪಾರದಲ್ಲಿ ಬಡ್ತಿಯ ಸಂಕೇತಗಳು ಗೊಚರಿಸುತ್ತಿವೆ.ಮನೆಗೆ ಸಂಬಂಧಿಸಿದ ಸಂಗತಿಯೊಂದು ನಿಮ್ಮ ಚಿಂತೆ ಹೆಚ್ಚಿಸುವ ಸಾಧ್ಯತೆ ಇದೆ.

ಕುಂಭ ರಾಶಿ: ಸಾಡೆಸಾತಿ ಆರಂಭ. ಶನಿಯ ವಕ್ರ ನಡೆ ನಿಮ್ಮ ಕಷ್ಟಗಳನ್ನು ಹೆಚ್ಚಿಸಲಿದೆ. ಮೊದಲಿಗಿಂತ ಅಧಿಕ ಖರ್ಚು ತಂದೊಡ್ಡಲಿದೆ. ಆದರೆ, ಹಳೆ ಸಾಲ ಸಮಸ್ಯೆ ನಿವಾರಣೆಯಾಗಲಿದೆ.

ಮೀನ ರಾಶಿ: ನಿಮಗೆ ಈ ಕಾಲ ಲಾಭ ತರಲಿದೆ. ದೀರ್ಘಾವಧಿಯಿಂದ ಸಿಲುಕಿಕೊಂಡ ನಿಮ್ಮ ಹಣ ನಿಮ್ಮ ಬಳಿಗೆ ವಾಪಾಸ್ ಬರಲಿದೆ. ನಿಮ್ಮ ಮೂಲಕ ನಿಮ್ಮ ಸಹೋದರ-ಸಹೋದರಿಯರಿಗೂ ಕೂಡ ಲಾಭವಾಗಲಿದೆ. ಅವರಿಂದಲೂ ಕೂಡ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ರಾಶಿಯಲ್ಲಿ ಧನಲಾಭದ ಪ್ರಬಲ ಯೋಗವಿದೆ.