ಜೂನ್ 5 ರಂದು ಸಂಭವಿಸಲಿದೆ ಚಂದ್ರಗ್ರಹಣ, ನಿಮ್ಮ ರಾಶಿಯ ಮೇಲೆ ಇದರ ಪರಿಣಾಮವೇನು?

ಜೂನ್ 5 ರಂದು ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಇದೊಂದು ಉಪಛಾಯೆಯ ಗ್ರಹಣವಾಗಿರಲಿದ್ದು, ಭಾರತದಲ್ಲಿ ಇದು ಗೋಚರಿಸುವುದಿಲ್ಲ.

Last Updated : May 29, 2020, 08:56 PM IST
ಜೂನ್ 5 ರಂದು ಸಂಭವಿಸಲಿದೆ ಚಂದ್ರಗ್ರಹಣ, ನಿಮ್ಮ ರಾಶಿಯ ಮೇಲೆ ಇದರ ಪರಿಣಾಮವೇನು? title=

ಜೂನ್ 5 ರಂದು ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಇದೊಂದು ಉಪಛಾಯೆಯ ಗ್ರಹಣವಾಗಿರಲಿದ್ದು, ಭಾರತದಲ್ಲಿ ಇದು ಗೋಚರಿಸುವುದಿಲ್ಲ. ಹೀಗಾಗಿ ಇದರ ಸೂತಕವನ್ನು ಕೂಡ ಪಾಲಿಸಲಾಗುವುದಿಲ್ಲ. ಜೂನ್ 5ರಂದು ರಾತ್ರಿ 11.15ಕ್ಕೆ ಈ ಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗ್ಗೆ 2.34ಕ್ಕೆ ಅಂತ್ಯವಾಗಲಿದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ.

ಸದ್ಯ ಒಟ್ಟು ಆರು ಗ್ರಹಗಳು ವಕ್ರವಾಗಿ ಚಲಿಸುತ್ತಿವೆ. ರಾಹು-ಕೇತು ಸೇರಿದಂತೆ ಈ ವೇಳೆ ಶನಿ, ಗುರು, ಶುಕ್ರ ಹಾಗೂ ಪ್ಲುಟೊ ಗ್ರಹಗಳು ವಕ್ರವಾಗಿ ಚಲಿಸುತ್ತಿವೆ. ವೃಶ್ಚಿಕ ರಾಶಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಆದರೆ, ಇದು ಎಲ್ಲ ರಾಶಿಗಳನ್ನು ಪ್ರಭಾವಿತಗೊಳಿಸಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಮೇಷ ರಾಶಿ:ಕುಟುಂಬ ಸದಸ್ಯರ ಆರೋಗ್ಯದ ಕಾಳಜಿ ವಹಿಸಿ. ವಿವಾದಗಳಿಂದ ದೂರ ಇರಿ. ಮನೆ ಹಾಗೂ ಕಟ್ಟಡ ವಿಷಯದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ನಿರ್ಣಯ ಕೈಗೊಳ್ಳುವಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ. ಗ್ರಹಣ ಕಾಲದಲ್ಲಿ ಮಂತ್ರ ಪಠಿಸಿ, ನಿಮ್ಮ ರಾಶಿಯ ಅಧಿಪತಿಯಾಗಿರುವ ಮಂಗಳನನ್ನು ಗಟ್ಟಿಗೊಳಿಸಿ.

ವೃಷಭ ರಾಶಿ: ನಿಮ್ಮ ಸಂಬಂಧಗಳ ಮೇಲೆ ಈ ಗ್ರಹಣ ಪ್ರಭಾವ ಬೀರಲಿದ್ದು, ವ್ಯಾಪಾರದಲ್ಲಿ ಪಾರ್ಟ್ನರ್ ಶಿಪ್ ಅಂತ್ಯವಾಗುವ ಸಾಧ್ಯತೆ ಇದೆ. ಬಾಳಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ. ಗ್ರಹಣ ಕಾಲದಲ್ಲಿ ಶುಕ್ರ ಮಂತ್ರ ಜಪಿಸಿ.

ಮಿಥುನ ರಾಶಿ: ಯಾವುದೇ ಮಹಿಳೆ ಆರೋಪ ಮಾಡದಂತೆ ಎಚ್ಚರಿಕೆ ವಹಿಸಿ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಈ ರಾಶಿಯ ಮಹಿಳೆಯರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕವಾಗಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಕರ್ಕ ರಾಶಿ: ಚಂದ್ರ ಗ್ರಹಣ ಕರ್ಕ ರಾಶಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಚಂದ್ರ ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ಈ ಗ್ರಹಣ ನಿಮಗೆ ಸ್ವಲ್ಪ ತೊಂದರೆದಾಯಕವಾಗಿರಲಿದೆ. ಸಂಬಂಧ, ಶಿಕ್ಷಣ ಹಾಗೂ ಸಂತಾನದ ದೃಷ್ಟಿಯಿಂದ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಸಿಂಹ ರಾಶಿ: ಈ ಗ್ರಹಣದ ಕಾಲದಲ್ಲಿ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಾಯಿಯ ಜೊತೆಗೆ ವಿವಾದ ಮಾಡುವುದರಿಂದ ದೂರ ಇರಿ. ಗ್ರಹಣ ಕಾಲದಲ್ಲಿ ಸೂರ್ಯ ಹಾಗೂ ಚಂದ್ರನ ಮಂತ್ರಗಳನ್ನು ಜಪಿಸಿ.

ಕನ್ಯಾ ರಾಶಿ: ಆತ್ಮವಿಶ್ವಾಸದಲ್ಲಿ ಕೊರತೆ ಎದುರಾಗಲಿದೆ. ಸಹೋದರ-ಸಹೋದರಿಯರ ಜೊತೆಗೆ ವಿವಾದದಲ್ಲಿ ತೊಡಗಬೇಡಿ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿಯೂ ಕೂಡ ಲಾಭದ ಕೊರತೆ ಎದುರಾಗಲಿದೆ. ಮನೆಯಲ್ಲಿ ಹಿರಿಯ ಹಾಗೂ ಕಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಗ್ರಹಣ ಕಾಲದಲ್ಲಿ ಬುಧ ಮಂತ್ರ ಜಪಿಸಿ.

ತುಲಾ ರಾಶಿ: ನಿಮ್ಮ ವಾಣಿಯ ಮೇಲೆ ಹಿಡಿತ ಇರಲಿ. ಮಾತನಾಡುವ ಮೊದಲು ಯೋಚಿಸಿ ಮಾತನಾಡಿ. ಕಣ್ಣು, ಬಾಯಿ ಹಾಗೂ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಒತ್ತಡ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಗ್ರಹಣ ಕಾಲದಲ್ಲಿ ಶುಕ್ರ ಮಂತ್ರ ಜಪಿಸಿ.

ವೃಶ್ಚಿಕ ರಾಶಿ: ಗ್ರಹಣ ನಿಮ್ಮ ರಾಶಿಯಲ್ಲಿಯೇ ಸಂಭವಿಸಲಿದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆಧ್ಯಾತ್ಮದೆಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ ಹಾಗೂ ಇದು ನಿಮಗೆ ಲಾಭ ನೀಡಲಿದೆ. ಮನಸ್ಸು ವಿಚಲಿತಗೊಂಡಾಗ ಇಂದ್ರ-ಗಾಯತ್ರಿ ಮಂತ್ರ ಜಪಿಸಿ.

ಧನು ರಾಶಿ: ನಿರ್ಣಯ ತೆಗೆದುಕೊಳ್ಳುವ ಕ್ಷಮತೆ ಕಡಿಮೆಯಾಗಲಿದೆ. ಯಾವುದೇ ರೀತಿಯ ನಕಾರಾತ್ಮಕ ಯೋಚನೆಗಳನ್ನು ಮಾಡುವುದರಿಂದ ದೂರ ಇರಿ. ಆಧ್ಯಾತ್ಮದೆಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ. ಗುರು ಮಂತ್ರ ಜಪಿಸಿ.

ಮಕರ ರಾಶಿ: ಧನ ಲಾಭದ ಕೊರತೆ ಎದುರಾಗಲಿದೆ. ನಿಮಗೆ ಬರಬೇಕಾಗಿರುವ ಹಣ ನಿಂತು ಹೋಗಬಹುದು. ಮೂರನೆಯ ವ್ಯಕ್ತಿಯ ಕಾರಣ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಬಹುದು. ಒಂದೇ ಸಂಬಂಧದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸದೆ, ಇತರ ಸಂಬಂಧಗಳಿಗೂ ಕೂಡ ಪ್ರಾಧಾನ್ಯತೆ ನೀಡಿ. ಶನಿ ಮಂತ್ರ ಜಪಿಸಿ.

ಕುಂಭ ರಾಶಿ: ತಂದೆಯ ಆರೋಗ್ಯದ ಕಡೆಗ ಗಮನ ಹರಿಸಿ. ನಿಮ್ಮ ಶತ್ರುಗಳು ಬಲಿಷ್ಠರಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ಜೊತೆಗೆ ವಾದ-ವಿವಾದದಿಂದ ದೂರ ಇರಿ. ಶನಿ ಮಂತ್ರವನ್ನು ಜಪಿಸಿ.

ಮೀನ ರಾಶಿ: ಧರ್ಮಕ್ಕೆ ಸಂಬಂಧಿಸಿದ ಯಾವುದೇ ಒಂದು ವಿಷಯದ ಮೇಲೆ ಸಂದೇಹ ವ್ಯಕ್ತಪಡಿಸುವ ಸಾಧ್ಯತೆ ಇದೆ. ವಾಹನ ಹಾಗೂ ಯಾತ್ರೆಗೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಮೂಡದಂತೆ ಎಚ್ಚರಿಕೆ ವಹಿಸಿ, ಗುರು ಮಂತ್ರ ಜಪಿಸಿ.

ವರ್ಷ 2020 ರಲ್ಲಿ ಒಟ್ಟು ನಾಲ್ಕು ಚಂದ್ರಗಹಣಗಳು ಸಂಭವಿಸಲಿವೆ. ಇವು ವಿಶ್ವದ ವಿಭಿನ್ನ ಪ್ರಾಂತ್ಯಗಳಲ್ಲಿ ಗೋಚರಿಸಲಿವೆ. ವರ್ಷದ ಮೊದಲ ಚಂದ್ರ ಗ್ರಹಣ 10-11 ಜನವರಿಗೆ ಸಂಭವಿಸಿತ್ತು. ವರ್ಷದ ಎರಡನೇ ಗ್ರಹಣ ಜೂನ್ 5ರಂದು ಸಂಭವಿಸಲಿದೆ. ಇದು ವೃಶ್ಚಿಕ ರಾಶಿ ಮತ್ತು ಜೆಷ್ಠ ನಕ್ಷತ್ರದಲ್ಲಿ ಸಂಭವಿಸಲಿದೆ. ವರ್ಷದ ಮೂರನೇ ಚಂದ್ರಗ್ರಹಣ ಜುಲೈ 5 ರಂದು ಭಾನುವಾರ ಸಂಭವಿಸಲಿದೆ. ಹಗಲಿನಲ್ಲಿ ಸಂಭವಿಸುವ ಈ ಗ್ರಹಣ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ. ಪೌರ್ಣಿಮೆಯ ದಿನ ಧನು ರಾಶಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ವರ್ಷದ ನಾಲ್ಕನೇ ಮತ್ತು ಕೊನೆಯ ಗ್ರಹಣ ನವೆಂಬರ್ 30 ರಂದು ಸಂಭವಿಸಲಿದೆ. ಈ ಗ್ರಹಣ ಕೂಡ ಮಧ್ಯಾಹ್ನದ ಅವಧಿಯಲ್ಲಿ ಸಂಭವಿಸುವ ಕಾರಣ ಭಾರತಲ್ಲಿ ಇದು ಗೋಚರಿಸುವುದಿಲ್ಲ. ಈ ಗ್ರಹಣ ರೋಹಿಣಿ ನಕ್ಷತ್ರ ಹಾಗೂ ವೃಷಭ ರಾಶಿಯಲ್ಲಿ ಸಂಭವಿಸಲಿದೆ.

Trending News