Kannada New Serial: ಪೈಲ್ವಾನ್‌ʼ ನಿರ್ದೇಶಕಿ ಸ್ವಪ್ನ ಕೃಷ್ಣ ಕಡೆಯಿಂದ ಕಿರುತೆರೆಗೆ ಮತ್ತೊಂದು ಉಡುಗೊರೆ! 

Kannada New Serial: ಪೈಲ್ವಾನ್‌ ಸಿನಿಮಾ ನಿರ್ದೇಶಕಿ ಸ್ವಪ್ನ ಕೃಷ್ಣ ಇದೀಗ ಹೊಸ ಯೋಜನೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.ಸದ್ಯ ಹೊಸ ಸೀರಿಯಲ್ ಬಗ್ಗೆ ನಿರ್ದೇಶಕಿ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Apr 28, 2023, 06:48 PM IST
  • ಪೈಲ್ವಾನ್‌ ಸಿನಿಮಾ ನಿರ್ದೇಶಕಿ ಸ್ವಪ್ನ ಕೃಷ್ಣ ರವರಿಂದ ಉಡುಗೊರೆ
  • ಹೊಸ ಸೀರಿಯಲ್ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕಿ
  • ನೈಜ್ಯ ಕಥೆ ಆಧರಿತವಾದ ಹೊಸ ಧಾರವಾಹಿ
Kannada New Serial: ಪೈಲ್ವಾನ್‌ʼ ನಿರ್ದೇಶಕಿ ಸ್ವಪ್ನ ಕೃಷ್ಣ ಕಡೆಯಿಂದ ಕಿರುತೆರೆಗೆ ಮತ್ತೊಂದು ಉಡುಗೊರೆ!  title=

ಬೆಂಗಳೂರು: ಸ್ಯಾಂಡಲ್ವುಡ್ ದಿನೇ ದಿನೇ ಎತ್ತರ ಮಟ್ಟಕ್ಕೆ ಬೆಳೆಯುತ್ತಿದೆ. ಸಿನಿಮಾ ಮಾತ್ರವಲ್ಲದೇ ಕನ್ನಡ ಧಾರಾವಾಹಿಗಳು ಜನರ ಮನವೋಲಿಸುವ ಪ್ರಯತ್ನ ನಡೆಸುತ್ತಿದೆ. ಸ್ಯಾಂಡಲ್ವುಡ್ ಸ್ಟಾರ್‌ ನಿರ್ದೇಶಕರ ಪಟ್ಟಿಯಲ್ಲಿ ಮಹಿಳೆಯರ ಹೆಸರು ಖ್ಯಾತಿ ಪಡೆಯುತ್ತಿರುವುದು ವಿಶೇಷ.

ಇದನ್ನೂ ಓದಿ: Alia Bhatt: ಗಂಗೂಬಾಯಿ ಆಲಿಯಾ ಭಟ್‌‌ಗೆ ಒಲಿದ  ಫಿಲ್ಮ್‌ಫೇರ್ ಪ್ರಶಸ್ತಿ

ಪೈಲ್ವಾನ್‌ ಸಿನಿಮಾ ನಿರ್ದೇಶಕಿ ಸ್ವಪ್ನ ಕೃಷ್ಣ ಇದೀಗ ಹೊಸ ಯೋಜನೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಅಂತರಪಟ ಎಂಬ ಹೊಸ ಧಾರವಾಹಿಯನ್ನು ಕಿರುತೆರೆಗೆ ನೀಡಿದ್ದಾರೆ. ಸದ್ಯ ಹೊಸ ಸೀರಿಯಲ್ ಬಗ್ಗೆ ನಿರ್ದೇಶಕಿ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅಂತರಪಟ ಧಾರಾವಾಹಿ ಕೌಟುಂಬಿಕ ಕಹಾನಿ, ಹೆಣ್ಣು ಮಕ್ಕಳ ಕುರಿತು ಮಾಡಿರುವ ಯೋಜನೆಯಾಗಿದೆ ಎಂದಿದ್ದಾರೆ. 

ಇದನ್ನೂ ಓದಿ: Samantha Birthday: ಟಾಲಿವುಡ್‌ ಹಾಟ್‌ ಬೆಡಗಿ ಸಮಂತಾಗೆ ಇಂದು ಎಷ್ಟನೇ ವರ್ಷದ ಹುಟ್ಟು ಹಬ್ಬ ಗೊತ್ತಾ?

ನನ್ನ ಜೀವನವನ್ನು ಮರು ನೆನೆಯುವ ಕಥೆಯಾಗಿದೆ. ಒಂದು ಕಾಲದಲ್ಲಿ ಹೀಯಾಳಿಸುವವರ ಎದುರು ನಾನು  ಡೈರೆಕ್ಟರ್‌ ಆಗಿದ್ದೇನೆ ಎಂದರು. ಜೀವನದಲ್ಲಿ ಗುರಿ ತುಂಬಾ ಮುಖ್ಯವಾಗಿದೆ. ಇನ್ನು ಮುಂದುವರಿದಂತೆಯೇ ಅಂತರಪಟದಲ್ಲಿ ಈಗಿನ ಪೀಳಿಗೆಗೆ, ಯುವಕರಿಗೆ ಉತ್ತಮ  ಸಂದೇಶ ನೀಡುವುದು ಇದರ ಮುಖ್ಯಗುರಿಯಾಗಿದೆ ಎಂದರು.

ಸದ್ಯ ಸ್ವಪ್ನ ಕೃಷ್ಣ ಅವರು,  ಕನ್ನಡ ಸಿನಿಮಾಟೋಗ್ರಾಫರ್ ಮತ್ತು ನಿರ್ದೇಶಕ ಎಸ್ ಕೃಷ್ಣ ಪತ್ನಿಯಾಗಿರುವ ಇವರು ತಮ್ಮದೇ ನಿಲುವಿನ ಮೂಲಕ ಖ್ಯಾತಿ ಗಳಿಸಿದ್ದಾರೆ.  ಅಷ್ಟೇ ಅಲ್ಲದೇ ಕನ್ನಡ ಕಿರುತೆರೆಯಲ್ಲಿ ಜಾಹೀರಾತುಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು RRR ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಿವಿಧ ಸೋಪ್ ಒಪೆರಾಗಳ 2000 ಸಂಚಿಕೆಗಳ ಜೊತೆಗೆ ಗೃಹ ಲಕ್ಷ್ಮಿ, ಗಂಗಾ ಮತ್ತು ಸುಬ್ಬಲಕ್ಷ್ಮಿ ಸಂಸಾರ ದಂತಹ ಧಾರವಾಹಿಗಳನ್ನು  ನಿರ್ದೇಶಿಸಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News