ರಿಯಲ್‌ ಸ್ಟಾರ್‌ ಬರ್ತ್‌ಡೇಗೆ ʼUIʼ ಟೀಸರ್‌

Real Star : ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನ ಮತ್ತು ನಟನೆಯ ಬಹುನಿರೀಕ್ಷಿತ ʼಯುಐʼ ಸಿನಿಮಾ ಟೀಸರ್‌ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿದೆ.

Written by - Zee Kannada News Desk | Last Updated : Sep 12, 2023, 02:29 PM IST
  • ʼರಿಯಲ್‌ ಸ್ಟಾರ್‌ʼ ಉಪೇಂದ್ರ ಅವರ ಹೊಸ ಚಿತ್ರ ʼಯುಐʼ.
  • ಬೆಂಗಳೂರಿನ ಉರ್ವಶಿ ಚಿತ್ರಮಂದಿರದಲ್ಲಿ ಟೀಸರ್‌ ರಿಲೀಸ್‌ಗೆ ಕಾರ್ಯಕ್ರಮಮವನ್ನು ಆಯೋಜಿಸಲಾಗಿದೆ.
  • ನಿರ್ದೇಶಕರಾಗಿಯೂ, ನಟರಾಗಿಯೂ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ.
ರಿಯಲ್‌ ಸ್ಟಾರ್‌ ಬರ್ತ್‌ಡೇಗೆ ʼUIʼ ಟೀಸರ್‌ title=

Teaser Release : ಕನ್ನಡಚಿತ್ರರಂಗದ ʼರಿಯಲ್‌ ಸ್ಟಾರ್‌ʼ ಉಪೇಂದ್ರ ಅವರ ಹೊಸ ಚಿತ್ರದ ʼಯುಐʼ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದು ಅವರ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ನಿರ್ದೇಶಕರಾಗಿಯೂ, ನಟರಾಗಿಯೂ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಟೀಸರ್‌ನ್ನು ಉಪೇಂದ್ರ ಅವರ ಹುಟ್ಟುಹಬ್ಬದಂದು (ಸೆಪ್ಟೆಂಬರ್‌ 18) ಮಧ್ಯಾಹ್ನ 3 ಗಂಟೆಗೆ ರಿಲೀಸ್‌ ಆಗಲಿದೆ ಎಂದು ಘೋಷಣೆ ಮಾಡಿದ್ದಾರೆ.

ಟೀಸರ್‌ ಬಿಡುಗಡೆಯ ಕುರಿತು ಚಿತ್ರತಂಡ ವಿಭಿನ್ನವಾದ ಘೋಷಣೆಯನ್ನು ಮಾಡಿದೆ. ಬೆಂಗಳೂರಿನ ಉರ್ವಶಿ ಚಿತ್ರಮಂದಿರದಲ್ಲಿ ಟೀಸರ್‌ ರಿಲೀಸ್‌ಗೆ ಕಾರ್ಯಕ್ರಮಮವನ್ನು ಆಯೋಜಿಸಲಾಗಿದ್ದು, ಅಭಿಮಾನಿಗಳ ಸಮ್ಮುಖದಲ್ಲಿ ಉಪೇಂದ್ರ ಅವರ ಟೀಸರ್‌ ಬಿಡುಗಡೆ ಮತ್ತು ಜನ್ಮದಿನಾಚರಣೆ ಆಚರಿಸುವ ಸಂಭ್ರಮದಲ್ಲಿದ್ದಾರೆ.
ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ತಂಡವು ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಕೊಂಡಿದೆ. 

ಇದನ್ನು ಓದಿ - Gadar 2: ಅತಿಯಾದ ದೇಶಪ್ರೇಮ ಕೂಡ ಹಾನಿಕರ..! ಸನ್ನಿ ಡಿಯೋಲ್‌ ಚಿತ್ರವನ್ನು ನಸೀರುದ್ದೀನ್ ಶಾ ಟೀಕಿಸಿದ್ದೇಕೆ?

ಚಿತ್ರದಲ್ಲಿ ಉಪೇಂದ್ರ (ನಾಯಕ ನಟ), ರೀಷ್ಮಾ ನಾಣಯ್ಯ (ನಾಯಕಿ), ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಮತ್ತು ಪಿ ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಸಂಗೀತವನ್ನು ಅಜನೀಶ್ ಲೋಕನಾಥ್, ಶಿವ ಕುಮಾರ್ ಅವರ ಕಲಾ ನಿರ್ದೇಶನವಿದೆ

ಲಹರಿ ಫಿಲಂಸ್‌ ಹಾಗೂ ವೀನಸ್‌ ಎಂಟರ್‌ಟೈನರ್‌ ಲಾಂಛನದಲ್ಲಿ ಜಿ.ಮನೋಹರ್‌ ಹಾಗೂ ಕೆ.ಪಿ.ಶ್ರೀಕಾಂತ್‌ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಎಂಟು ವರ್ಷಗಳ ನಂತರ ರಿಯಲ್‌ ಸ್ಟಾರ್‌ ಉಪೇಂದ್ರ ʼಯುಐʼ ಚಿತ್ರದ ಮತ್ತೇ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಈ ಚಿತ್ರವು ಐದು ಭಾಷೆಗಳಲ್ಲಿ ರಿಲೀಸ್‌  ಆಗಲಿದ್ದು, ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
  

Trending News