‌Bollywood: ರಣಬೀರ್‌ ಕಪೂರ್‌ಗೆ ಆಲಿಯಾ ಭಟ್ ಎರಡನೇ ಪತ್ನಿ? ಶಾಕಿಂಗ್‌ ಸಿಕ್ರೇಟ್‌ ರಿವೀಲ್!

Ranbir Kapoor First Wife: ಬಾಲಿವುಡ್‌ ಸ್ಟಾರ್‌ ನಟ ರಣಬೀರ್ ಕಪೂರ್ ಇತ್ತೀಚೆಗೆ ಅನಿಮಲ್‌ ಸಿನಿಮಾದಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದರಯ.. ನಟ ಇದೀಗ ವೈಯಕ್ತಿಕ ವಿಚಾರವಾಗಿ ಮುಖ್ಯಾಂಶದಲ್ಲಿದ್ದು.. ಆಲಿಯಾ ಇವರ ಮೊದಲ ಪತ್ನಿ ಅಲ್ಲ ಎಂದು ಹೇಳಲಾಗುತ್ತಿದೆ.. 

Written by - Savita M B | Last Updated : Mar 17, 2024, 12:48 PM IST
  • ರಣಬೀರ್ ಕಪೂರ್ ತಮ್ಮ ನಟನೆಯಿಂದ ಅಭಿಮಾನಿಗಳನ್ನು ಮೆಚ್ಚಿಸಿರುವ ನಟ
  • ಅಲ್ಲದೇ ತಮ್ಮ ಅಧ್ಬುತ ವ್ಯಕ್ತಿತ್ವದಿಂದ ಲಕ್ಷಾಂತರ ಹೃದಯಗಳನ್ನು ಆಳುತ್ತಾರೆ.
  • ಆಲಿಯಾ ಮತ್ತು ರಣಬೀರ್ ಆಗಾಗ್ಗೆ ತಮ್ಮ ಮಗಳು ರಾಹಾ ಜೊತೆ ಕಾಣಿಸಿಕೊಳ್ಳುತ್ತಾರೆ.
‌Bollywood: ರಣಬೀರ್‌ ಕಪೂರ್‌ಗೆ ಆಲಿಯಾ ಭಟ್ ಎರಡನೇ ಪತ್ನಿ? ಶಾಕಿಂಗ್‌ ಸಿಕ್ರೇಟ್‌ ರಿವೀಲ್! title=

‌Bollywood Actor Ranbir Kapoor: ರಣಬೀರ್ ಕಪೂರ್ ತಮ್ಮ ನಟನೆಯಿಂದ ಅಭಿಮಾನಿಗಳನ್ನು ಮೆಚ್ಚಿಸಿರುವ ನಟ.. ಅಲ್ಲದೇ ತಮ್ಮ ಅಧ್ಬುತ ವ್ಯಕ್ತಿತ್ವದಿಂದ ಲಕ್ಷಾಂತರ ಹೃದಯಗಳನ್ನು ಆಳುತ್ತಾರೆ. ಕಪೂರ್ ಕುಟುಂಬದ ರಣಬೀರ್ ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ. ಆಲಿಯಾ ಮತ್ತು ರಣಬೀರ್ ಆಗಾಗ್ಗೆ ತಮ್ಮ ಮಗಳು ರಾಹಾ ಜೊತೆ ಕಾಣಿಸಿಕೊಳ್ಳುತ್ತಾರೆ. ಆದರೆ ಒಂದು ಸಮಯದಲ್ಲಿ ರಣಬೀರ್ ತನ್ನ ಬಗ್ಗೆಯೇ ಶಾಕಿಂಗ್‌ ಸಂಗತಿಯನ್ನು ಹೇಳಿದ್ದರು.

ರಣಬೀರ್ ಕಪೂರ್‌ಗಾಗಿ ಎಷ್ಟು ಹುಡುಗಿಯರು ಹಂಬಲಿಸುತ್ತಿದ್ದಾರೋ ಏನೋ? ಯಾಕಂದ್ರೆ ನಟನ ಮೋಡಿಯೇ ಅಂಥದ್ದು. ನಟ ತನ್ನ ಜೀವನದಲ್ಲಿ ಅನೇಕರೊಂದಿಗೆ ಡೇಟಿಂಗ್ ಮಾಡಿದ್ದಾನೆ. ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರಂತಹ ದೊಡ್ಡ ಹೆಸರುಗಳೂ ಇದರಲ್ಲಿ ಸೇರಿಕೊಂಡಿವೆ. 

ಇದನ್ನೂ ಓದಿ-ರಮ್ಯಾ ಕೃಷ್ಣನ್‌ʼಗೆ ಇಷ್ಟು ದೊಡ್ಡ ಮಗ ಇದ್ದಾನಾ! ತಂದೆ ನಿರ್ದೇಶಕ.. ತಾಯಿ ಸ್ಟಾರ್ ನಟಿ.. ಮಗ ಹೀರೋ ಆಗಿ ಎಂಟ್ರಿ?

ಆಲಿಯಾಗೂ ಮೊದಲು, ರಣಬೀರ್ ಕಪೂರ್ ಈ ಹಿಂದೆ ಒಮ್ಮೆ ಮದುವೆಯಾಗಿದ್ದರು ಎಂದು ನಟ ಸ್ವತಃ ಒಪ್ಪಿಕೊಂಡಿದ್ದಾರೆ.. ವಾಸ್ತವವಾಗಿ, ಸಂದರ್ಶನವೊಂದರಲ್ಲಿ, ರಣಬೀರ್ ಕಪೂರ್ ಸ್ವತಃ ಆಸಕ್ತಿದಾಯಕ ಗೂಗಲ್ ಪ್ರಶ್ನೆಗಳಿಗೆ ಉತ್ತರಿಸಿದ್ದು... ಈ ಪ್ರಶ್ನೆಗಳಲ್ಲಿ ಒಂದು ಅವರ ಮಾಜಿ ಪತ್ನಿಗೆ ಸಂಬಂಧಿಸಿದೆ. ಈ ಬಗ್ಗೆ ನಟ ವಿವರಣೆಯನ್ನು ನೀಡಿದ್ದರು.. 

ಇದನ್ನೂ ಓದಿ-Kalki 2898AD: ಟಾಲಿವುಡ್‌ ಡಾರ್ಲಿಂಗ್‌ ಅಭಿನಯದ 'ಕಲ್ಕಿ 2898AD' ರಿಲೀಸ್‌ ಡೇಟ್‌ ಪೋಸ್ಟ್‌ಪೋನ್!!

"ಇದು ಹುಚ್ಚು ಅಭಿಮಾನಕ್ಕೆ ಸಂಬಂಧಿಸಿದ ಘಟನೆ.. ನನ್ನ ಮೇಲಿನ ಪ್ರೀತಿ ಅಭಿಮಾನದಿಂದ ಹುಡುಗಿಯೊಬ್ಬಳು ನನ್ನನ್ನು ಮದುವೆಯಾದಂತೆ ಭಾವಿಸಿ.. ನನ್ನ ಮನೆಯ ಗೇಟಿನೊಂದಿಗೆ ಮದುವೆಯಾಗಿದ್ದಾಳೆ.. ಆ ದಿನ ಗೇಟಿಗೆ ಹೂವಿನ ಮಾಲೆ ಹಾಕಿ ಕುಂಕುಮ ಹಚ್ಚಲಾಗಿತ್ತು.. ಅದನ್ನು ನೋಡಿ ನಾನೇ ಶಾಕ್‌ ಆಗಿದ್ದೆ.. ಆದರೆ ಆಕೆ ಯಾರು.. ಎಲ್ಲಿದ್ದಾಳೆ ಎಂದು ನನಗೆ ಇಲ್ಲಿಯವರೆಗೂ ತಿಳಿದಿಲ್ಲ.. ಅವಳೇ ನನ್ನ ಮೊದಲ ಪತ್ನಿ.. ನಾನು ಇನ್ನೂ ನನ್ನ ಮಾಜಿ ಪತ್ನಿಯನ್ನು ಭೇಟಿ ಮಾಡಿಲ್ಲ ಆದರೆ ನಾನು ಖಂಡಿತವಾಗಿಯೂ ಅವಳನ್ನು ಭೇಟಿಯಾಗಲು ಬಯಸುತ್ತೇನೆ" ಎಂದು ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದರು.. 

ಈ ಸ್ಟೋರಿ ತಿಳಿದ ತಕ್ಷಣ ಅಭಿಮಾನಿಗಳು ಸಹ ಶಾಕ್‌ ಆಗಿದ್ದಾರೆ... ಇನ್ನು ರಣಬೀರ್ ಕಪೂರ್ ಅವರ ಹೆವಿ ಫ್ಯಾನ್ ಫಾಲೋಯಿಂಗ್‌ನಲ್ಲಿ ಹುಡುಗಿಯರೇ ಹೆಚ್ಚಿದ್ದಾರೆ.. ಆದರೆ ಅಭಿಮಾನಿಯೊಬ್ಬರು ಈ ರೀತಿ ನಟನ ಮನೆಗೆ ಹೋಗುತ್ತಾರೆ ಮತ್ತು ಅಂತಹ ಕೃತ್ಯವನ್ನು ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

Trending News