ಸುಶಾಂತ್‌ ಸಿಂಗ್‌ ಮನೆಗೆ ಶಿಫ್ಟ್‌ ಆದ ನಟಿ ಅದಾ ಶರ್ಮಾ !

Aadha Sharma in sushanth singh house: ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಸಿನಿ ಪ್ರಿಯರ ಮನಗೆದ್ದಿರುವ ನಟಿ ಅದಾ ಶರ್ಮಾ ಸದ್ಯ ಮನೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. 

Written by - Chetana Devarmani | Last Updated : Jun 5, 2024, 09:38 PM IST
  • ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ
  • ಹೊಸ ಮನೆಗೆ ಶಿಫ್ಟ್‌ ಆದ ನಟಿ ಅದಾ
  • ಸುಶಾಂತ್‌ ಸಿಂಗ್‌ ಇದ್ದ ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌
ಸುಶಾಂತ್‌ ಸಿಂಗ್‌ ಮನೆಗೆ ಶಿಫ್ಟ್‌ ಆದ ನಟಿ ಅದಾ ಶರ್ಮಾ !  title=

Aadha Sharma in sushanth singh house: ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಸಿನಿ ಪ್ರಿಯರ ಮನಗೆದ್ದಿರುವ ನಟಿ ಅದಾ ಶರ್ಮಾ ಸದ್ಯ ಮನೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅದಾ ಶರ್ಮಾ ಇತ್ತೀಚೆಗೆ ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಿದ್ದಾರೆ. ಇವರು ಮನೆ ಖರೀದಿಸಿದ ಸುದ್ದಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗಿತ್ತು. ಇದೀಗ ಆ ಹೊಸ ಮನೆಗೆ ಅದಾ ಶಿಫ್ಟ್‌ ಆಗಿದ್ದಾರೆ. 

ಅದಾ ಶರ್ಮಾ ಸುಶಾಂತ್ ಸಿಂಗ್ ರಜಪೂತ್ ಅವರ ಮನೆ ಖರೀದಿಸಿದ್ದು, ಇತ್ತೀಚೆಗೆ ಶಿಫ್ಟ್‌ ಆಗಿದ್ದೇ ಇಷ್ಟೊಂದು ಸುದ್ದಿಯಾಗುತ್ತಿರಲು ಕಾರಣವಾಗಿದೆ. ಇಷ್ಟು ದಿನ ಅದಾ ಶರ್ಮಾ ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿ ವಾಸಿಸುತ್ತಿದ್ದರು. ಇದೀಗ ಸುಶಾಂತ್‌ ಸಿಂಗ್‌ ಇದ್ದ ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆಗಿದ್ದಾರೆ. 

ಇದನ್ನೂ ಓದಿ:  ನಯನತಾರಾ ಮತ್ತು ತ್ರಿಶಾ ನಡುವೆ ಶೀತಲ ಸಮರ! ಸಮಸ್ಯೆ ಆದರೂ ಏನು? 

ಕೇರಳದಲ್ಲಿ ಅತಿ ಸುಂದರವಾದ ಪ್ರಕೃತಿಗೆ ಹತ್ತಿರವಾದ ಮನೆಯಲ್ಲಿ ಅದಾ ಶರ್ಮಾ ಬೆಳೆದಿದ್ದಾರೆ. ಆದರೆ ಮುಂಬೈನಲ್ಲಿ ಯಾವ ಮನೆಯೂ ಅದಾ ಶರ್ಮಾ ಮನಸ್ಸಿಗೆ ಹಿಡಿಸಿರಲಿಲ್ಲ. ಹಲವು ದಿನಗಳ ಬಳಿಕ ಅದಾ ಶರ್ಮಾ ಅವರಿಗೆ ಸುಶಾಂತ್‌ ಸಿಂಗ್‌ ರಜಪೂತ್‌ ಮನೆ ಹಿಡಿಸಿ, ಅದನ್ನೇ ಖರೀದಿಸಿದರು. ಆ ಮನೆಗೆ ತಮಗೆ ಬೇಕಾದ ಹಾಗೆ ಕೆಲವು ಬದಲಾವಣೆ ಮಾಡಿಸಿಕೊಂಡು ಅದಾ ಶರ್ಮಾ ಶಿಫ್ಟ್‌ ಆಗಿದ್ದಾರೆ. 

ಅದಾ ಶರ್ಮಾ ವೆಬ್ ಸಿರೀಸ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೇರಳ ಸ್ಟೋರಿ ಚಿತ್ರದ ಬಳಿಕ ಅದಾ ಶರ್ಮಾಗೆ ಹಲವು ಅವಕಾಶಗಳು ಒಲಿದು ಬರುತ್ತಿವೆ.  

ಇದನ್ನೂ ಓದಿ:  ಸಂಕಷ್ಟದಲ್ಲಿ ನಟ ಯಶ್ ಸಿನಿಮಾ ನಟಿ... ತಂದೆಯ ಪ್ರಾಣ ಉಳಿಸಲು ಬೇಕಿದೆ ಸಹಾಯ ಹಸ್ತ !!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News