Abhishek Bachchan: ನಿತ್ಯ ಮಲಗುವ ಮುನ್ನ ಐಶ್ವರ್ಯಾ ರೈ ಬಳಿ ಕ್ಷಮೆ ಕೇಳುತ್ತಿದ್ದ ಅಭಿಷೇಕ್ ಬಚ್ಚನ್: ಕಾರಣವೇನು?

Abhishek Bachchan- Aishwarya Rai Fight: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ. ಬಾಲಿವುಡ್‌ನಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿರುವ ಕೆಲವೇ ಜೋಡಿಗಳಲ್ಲಿ ಈ ಜೋಡಿಯೂ ಒಂದು.  

Written by - Yashaswini V | Last Updated : Nov 19, 2021, 11:56 AM IST
  • ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ನಡುವೆ ಇಲ್ಲಿಯವರೆಗೆ ಯಾವುದೇ ಗಂಭೀರ ಜಗಳ ನಡೆದಿಲ್ಲ
  • ಆದರೆ ಕೆಲವು ಬಾರಿ ಜಗಳವಾಡಿದ ವರದಿಗಳು ಬಂದಿವೆ
  • ಸಾಮಾನ್ಯ ದಂಪತಿಗಳಂತೆ ತಮ್ಮ ನಡುವೆ ಸಾಕಷ್ಟು ಜಗಳಗಳು ನಡೆಯುತ್ತಿದ್ದವು ಎಂಬ ಸತ್ಯವನ್ನು ಐಶ್ ಅಭಿಷೇಕ್ ಇಬ್ಬರೂ ಒಪ್ಪಿಕೊಂಡರು
Abhishek Bachchan: ನಿತ್ಯ ಮಲಗುವ ಮುನ್ನ ಐಶ್ವರ್ಯಾ ರೈ ಬಳಿ ಕ್ಷಮೆ ಕೇಳುತ್ತಿದ್ದ ಅಭಿಷೇಕ್ ಬಚ್ಚನ್: ಕಾರಣವೇನು? title=
Aishwarya Rai Abhishek Bachchan

Abhishek Bachchan- Aishwarya Rai Fight: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿರುವ ಕೆಲವೇ ಜೋಡಿಗಳಲ್ಲಿ ಒಬ್ಬರು. ಆದಾಗ್ಯೂ, ಅವರ ಪ್ರೀತಿಯ ಹೊಳಪು ಅನೇಕ ಸಂದರ್ಶನಗಳು ಮತ್ತು ಘಟನೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 

ಐಶ್ವರ್ಯಾ ರೈ ಬಚ್ಚನ್ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ಅವರ ನಡುವೆ ಇಲ್ಲಿಯವರೆಗೆ ಯಾವುದೇ ಗಂಭೀರ ಜಗಳ ನಡೆದಿಲ್ಲ, ಆದರೆ ಕೆಲವು ಬಾರಿ ಜಗಳವಾಡಿದ ವರದಿಗಳು ಬಂದಿವೆ. ಸಂದರ್ಶನವೊಂದರಲ್ಲಿ ಇಬ್ಬರೂ ತಮ್ಮ ವೈವಾಹಿಕ ಜೀವನದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹೇಳಿದ್ದಾರೆ.

ಇದನ್ನೂ ಓದಿ- Puneeth Rajkumar: ಪುನೀತ್ ರಾಜಕುಮಾರ್ ಗೆ ‘ಭಾರತ ರತ್ನ’ ನೀಡಲು ಒತ್ತಾಯ

ಸಾಮಾನ್ಯ ದಂಪತಿಗಳಂತೆ ತಮ್ಮ ನಡುವೆ ಸಾಕಷ್ಟು ಜಗಳಗಳು ನಡೆಯುತ್ತಿದ್ದವು ಎಂಬ ಸತ್ಯವನ್ನು ಐಶ್ ಅಭಿಷೇಕ್ ಇಬ್ಬರೂ ಒಪ್ಪಿಕೊಂಡರು. ಅಭಿಷೇಕ್ ಬಚ್ಚನ್ (Abhishek Bacchan) ಜೊತೆ ಒಂದಲ್ಲ ಒಂದು ವಿಷಯಕ್ಕೆ ಜಗಳವಾಡುತ್ತಿದ್ದೆ. ಇದು ಜಗಳಗಳಲ್ಲ, ಒಂದು ರೀತಿಯ ಭಿನ್ನಾಭಿಪ್ರಾಯ ಎಂದು ಐಶ್ ಹೇಳಿದ್ದಾರೆ. ಈ ಸಣ್ಣ-ಪುಟ್ಟ ಜಗಳಗಳು ಇಲ್ಲದಿದ್ದರೆ ನಮ್ಮ ದಾಂಪತ್ಯ ಜೀವನ ತುಂಬಾ ನೀರಸವಾಗುತ್ತಿತ್ತು ಎಂದು ಅಭಿಷೇಕ್ ಬಚ್ಚನ್ ತಮಾಷೆಯಾಗಿ ನುಡಿದಿದ್ದಾರೆ. ಇದರೊಂದಿಗೆ ತಾವು ನಿತ್ಯ ಐಶ್ ಬಳಿ ಕ್ಷಮೆ ಯಾಚಿಸುತ್ತಿದ್ದಾಗಿ ಅಭಿಷೇಕ್ ತಿಳಿಸಿದ್ದಾರೆ.

ಇದನ್ನೂ ಓದಿ- ಅವಳಿ ಮಕ್ಕಳ ತಾಯಿಯಾದ ನಟಿ Preity Zinta, ಹರಿದು ಬಂತು ಶುಭಾಶಯಗಳ ಮಹಾಪೂರ

ತಾವು ನಿತ್ಯ ಐಶ್ ಬಳಿ ಕ್ಷಮೆ ಯಾಚಿಸುತ್ತಿದ್ದಾಗಿ ತಿಳಿಸಿರುವ ಅಭಿಷೇಕ್ ಬಚ್ಚನ್ ಅದರ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ವಾಸ್ತವವಾಗಿ, ನಾವಿಬ್ಬರೂ ಎಂದೂ ಕೂಡ ಜಗಳವಾಡಿಕೊಂಡು ಮುನಿಸಿಕೊಂಡು ಮಲಗುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಹಾಗಾಗಿಯೇ ನಾನು ನಿತ್ಯ ಮಲಗುವ ಮುನ್ನ ಕ್ಷಮೆ ಕೇಳುತ್ತಿದ್ದೆ. ಸಾಮಾನ್ಯವಾಗಿ ಹೆಂಗಸರು ಸುಲಭವಾಗಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಬಹುತೇಕ ವಿಷಯಗಳಲ್ಲಿ ನಾನೇ ಕ್ಷಮೆ ಕೇಳುತ್ತೇನೆ ಎಂದು ಅಭಿಷೇಕ್ ಬಚ್ಚನ್ ತಮ್ಮ ಸುಖ ದಾಂಪತ್ಯದ ಸರಳ ಸೂತ್ರವನ್ನು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News