Indian Actor: ಒಂದು ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ್ದ ಈ ಖ್ಯಾತ ನಟ ಇಂದು ಟಾಯ್ಲೆಟ್ ಕ್ಲೀನರ್!‌

South Actor Abbas: ಬಾಲಿವುಡ್‌ ನಟಿ ಐಶ್ವರ್ಯ ರೈ ಬಚ್ಚನ್‌ ಜೊತೆಗೆ ಸಿನಿಮಾವೊಂದರಲ್ಲಿ ರೊಮ್ಯಾನ್ಸ್ ಮಾಡಿದ ದಕ್ಷಿಣ ಚಿತ್ರರಂಗದ 90 ರ ದಶಕದ ಬಹುಬೇಡಿಕೆ ನಟ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಟಾಯ್ಲೆಟ್ ಕ್ಲೀನರ್ ಆಗಿದ್ದಾರೆ. ಈ ನಟ ಯಾರು ಗೊತ್ತೇ?  

Written by - Zee Kannada News Desk | Last Updated : Apr 20, 2024, 12:41 PM IST
  • ನಟ ಅಬ್ಬಾಸ್ ಒಂದು ಕಾಲದಲ್ಲಿ ‘ಕಾದಲ್ ದೇಶಂ’ ಚಿತ್ರದ ಮೂಲಕ ಹುಡುಗಿಯರ ಕನಸಿನ ಹುಡುಗನಾಗಿದ್ದರು.
  • ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.
  • ‘ಕಾದಲ್ ದೇಶಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗುತ್ತಿದ್ದಂತೆ, ಅಬ್ಬಾಸ್ ಸೂಪರ್‌ಸ್ಟಾರ್ ಆಗಿಬಿಟ್ಟರು.
Indian Actor: ಒಂದು ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ್ದ ಈ ಖ್ಯಾತ ನಟ ಇಂದು ಟಾಯ್ಲೆಟ್ ಕ್ಲೀನರ್!‌      title=

Actor Abbas Life Story: ಭಾರತದ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ನಟ ಅಬ್ಬಾಸ್‌, 1990 ರ ದಶಕದಲ್ಲಿ ಮಿಂಚಿದ್ದರು. ಈ ಹೀರೋ ಒಂದೇ ಒಂದು ಸಿನಿಮಾದ ಮೂಲಕ ಸ್ಟಾರ್ ಪಟ್ಟಕ್ಕೇರಿದ ನಟ ತಮ್‌ ಕೆರಿಯರ್‌ ಅನ್ನು ಹಾಳು ಮಾಡಿಕೊಂಡರು. ಸದ್ಯ ಈ ನಟ ಯಾರಿಗೂ ಕಾಣದ, ಯಾರಿಗೂ ನೆನಪಾಗದ ಪರಿಸ್ಥಿತಿಯಲ್ಲಿ ಜೀವನವನ್ನು ಮಾಡುತ್ತಿದ್ದಾರೆ. ಈ ನಟ ಒಂದು ಕಾಲದಲ್ಲಿ ‘ಕಾದಲ್ ದೇಶಂ’  ಚಿತ್ರದ ಮೂಲಕ ಹುಡುಗಿಯರ ಕನಸಿನ ಹುಡುಗನಾಗಿದ್ದರು. ಈ ನಟ ಕನ್ನಡದ ಅಪ್ಪು ಪಪ್ಪು ಸಿನಿಮಾದಲ್ಲಿಯೂ ನಟಿಸಿದ್ದರು.

90 ರ ದಶಕದ ಈ ಸೂಪರ್‌ಸ್ಟಾರ್ ಅಬ್ಬಾಸ್‌, 2000ರ ,ಮೇಲೆ ಈ ನಟನ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಾಗ ನಾಲ್ಕು ಬಾರಿ ದಿವಾಳಿಯಾದರು. ಅಂತಹ ಸಮಯದಲ್ಲಿ ಈ ನಟ ಟ್ಯಾಕ್ಸಿ ಡ್ರೈವರ್ ಮತ್ತು ಟಾಯ್ಲೆಟ್ ಕ್ಲೀನರ್ ಆಗಿ ಕೆಲಸ ಮಾಡಿದರು. ಸಂದರ್ಶನವೊಂದರಲ್ಲಿ ಈ ನಟ, "ನನ್ನ ವೃತ್ತಿಜೀವನದ ಆರಂಭದಲ್ಲಿ ಕೆಲವು ಯಶಸ್ಸಿನ ನಂತರ, ನನ್ನ ಕೆಲವು ಚಿತ್ರಗಳು ವಿಫಲವಾದವು. ಇದರಿಂದ ಆರ್ಥಿಕವಾಗಿ ನೊಂದಿದ್ದೆ. ಬಾಡಿಗೆ ಮತ್ತು ಸಿಗರೇಟಿನಂತಹ ಸಣ್ಣ ಅಗತ್ಯಗಳನ್ನು ಸಹ ಪೂರೈಸಲು ಸಾಧ್ಯವಾಗಲಿಲ್ಲ" ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?

ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು. ಆದರೆ 1994ರಲ್ಲಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಸ್ಪರ್ಧೆ ನಡೆಯಲಿದೆ ಎಂದು ಗೊತ್ತಾಗಿ ಅದರಲ್ಲಿ ಭಾಗವಹಿಸಿ, ಆ ಸ್ಪರ್ಧೆಯಲ್ಲಿಯೂ ಗೆದ್ದರು. ಈ ನಟ ಮಾಡೆಲಿಂಗ್ ಬಳಿಕ ಗೆಳೆಯನ ಸಲಹೆ ಮೇರೆಗೆ  1995ರಲ್ಲಿ ತಮಿಳು ಚಿತ್ರವೊಂದಕ್ಕೆ ಆಡಿಷನ್‌ನಲ್ಲಿ ಭಾಗವಹಿಸಿದರು. ಈ ನಟನ ಅಭಿನಯದಿಂದ ಪ್ರಭಾವಿತರಾದ ಡೈರೆಕ್ಟರ್‌ ಕದಿರ್ ‘ಕಾದಲ್ ದೇಶಂ’ ಸಿನಿಮಾದಲ್ಲಿ ಸ್ಕ್ರೀನ್ ಟೆಸ್ಟ್‌ಗೆ ಕರೆದರು. ಈ ಪರೀಕ್ಷೆಯಲ್ಲಿ ಮಿಂಚಿದ ನಂತರ ಅಬ್ಬಾಸ್‌ಗೆ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾದರು. 

‘ಕಾದಲ್ ದೇಶಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗುತ್ತಿದ್ದಂತೆ, ಅಬ್ಬಾಸ್ ಸೂಪರ್‌ಸ್ಟಾರ್ ಆಗಿಬಿಟ್ಟರು. ಈ ಯಶಸ್ಸಿನ ನಂತರ ಈ ನಟನಿಗೆ ಸತತ  ಚಿತ್ರಗಳ ಆಫರ್‌ಗಳು ಬಂದವು ಈ ನಟ 2000 ರಲ್ಲಿ ತೆರೆಕಂಡ ʻಕಂಡುಕೊಂಡೇನ್ ಕಂಡುಕೊಂಡೈನ್ʼ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಜೊತೆ ರೊಮ್ಯಾನ್ಸ್ ಮಾಡಿದರು. ಅಷ್ಟು ಮಾತ್ರವಲ್ಲದೇ ಟಬು, ರಜನಿಕಾಂತ್, ಮಮ್ಮುಟ್ಟಿ ಮುಂತಾದ ಸ್ಟಾರ್ ಗಳ ಜೊತೆ  ಅಭಿನಯಿಸಿರುವ ಈ ಸೌತ್‌ ಸೂಪರ್ ಸ್ಟಾರ್ ಸದ್ಯ ಗ್ಲಾಮರ್ ಇಂಡಸ್ಟ್ರಿಯಿಂದ ದೂರವೇ ಬದುಕುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News