Highest Taxpayer: ಶಾರುಖ್‌, ಬಿಗ್‌ ಬಿ, ಸಲ್ಲುಗಿಂತ ಹೆಚ್ಚು Tax ಕಟ್ಟುತ್ತಾರೆ ಈ ಸ್ಟಾರ್‌ ನಟ.!

Highest Taxpayer in Bollywood: ಅನೇಕ ಸ್ಟಾರ್‌ ಹೀರೋಗಳು ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟುತ್ತಾರೆ. ಆದರೆ ಶಾರುಖ್‌, ಬಿಗ್‌ ಬಿ, ಸಲ್ಲುಗಿಂತ ಹೆಚ್ಚು Tax ಕಟ್ಟುವ ನಟರೊಬ್ಬರಿದ್ದಾರೆ.    

Written by - Chetana Devarmani | Last Updated : Jul 8, 2023, 12:51 PM IST
  • ಅನೇಕ ಸ್ಟಾರ್‌ ಹೀರೋಗಳು ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟುತ್ತಾರೆ
  • ಹೆಚ್ಚು ತೆರಿಗೆ ಕಟ್ಟುವ ಸ್ಟಾರ್‌ ನಟ ಎಂಬ ಬಿರುದು ಇವರಿಗಿದೆ
  • ಶಾರುಖ್‌, ಬಿಗ್‌ ಬಿ, ಸಲ್ಲುಗಿಂತ ಹೆಚ್ಚು Tax ಕಟ್ಟುವ ಕಟ್ಟುತ್ತಾರೆ ಈ ನಟ
Highest Taxpayer: ಶಾರುಖ್‌, ಬಿಗ್‌ ಬಿ, ಸಲ್ಲುಗಿಂತ ಹೆಚ್ಚು Tax ಕಟ್ಟುತ್ತಾರೆ ಈ ಸ್ಟಾರ್‌ ನಟ.!  title=

Bollywood News: ಎಲ್ಲರಂತೆ ಬಾಲಿವುಡ್ ಸೆಲಿಬ್ರಿಟಿಗಳು ಸಹ ಪ್ರತಿವರ್ಷ ತೆರಿಗೆ ಕಟ್ಟುತ್ತಾರೆ. ಶಾರುಖ್, ಸಲ್ಮಾನ್ ಮತ್ತು ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಸ್ಟಾರ್‌ ಹೀರೋಗಳು ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟುತ್ತಾರೆ. ಆದರೆ ಹೆಚ್ಚು ತೆರಿಗೆ ಕಟ್ಟುವ ಸ್ಟಾರ್‌ ನಟ ಎಂಬ ಬಿರುದು ಇವರಿಗಿದೆ. 

ವರದಿಗಳ ಪ್ರಕಾರ, 'ಬಿಗ್ ಬಿ' ಅಮಿತಾಬ್ ಬಚ್ಚನ್ 2018-19ನೇ ಹಣಕಾಸು ವರ್ಷದಲ್ಲಿ ಅಮಿತಾಬ್ ಬಚ್ಚನ್ 70 ಕೋಟಿ ರೂಪಾಯಿಗಳ ಬೃಹತ್ ತೆರಿಗೆಯನ್ನು ಪಾವತಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರ ನಿವ್ವಳ ಮೌಲ್ಯ 3,396 ಕೋಟಿ ಎನ್ನಲಾಗಿದೆ. 70 ಕೋಟಿ ಆದಾಯ ಪಾವತಿಸಿದರೂ ಬಿಗ್‌ಬಿ ಗಿಂತ ಹೆಚ್ಚು ಟ್ಯಾಕ್ಸ್‌ ಕಟ್ಟುವ ನಟ ಬೇರೋಬ್ಬರಿದ್ದಾರೆ. 

ಬಾಲಿವುಡ್‌ ನಟ ಸಲ್ಮಾನ್ ಖಾನ್ ಕೂಡ ಪ್ರತಿ ವರ್ಷ ಕೋಟಿಗಟ್ಟಲೆ ಟ್ಯಾಕ್ಸ್‌ ಪೇ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್ ಒಂದು ಹಣಕಾಸು ವರ್ಷದಲ್ಲಿ ಸುಮಾರು 44 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಅತಿ ಹೆಚ್ಚು ಟ್ಯಾಕ್ಸ್‌ ಕಟ್ಟುವ ನಟ ಇವರಲ್ಲ. 

ಇದನ್ನೂ ಓದಿ: Kiccha Sudeep: ನಿರ್ಮಾಪಕ ಕುಮಾರ್‌ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರ

ಹೃತಿಕ್ ರೋಷನ್ ಒಮ್ಮೆ ಮುಂಗಡ ತೆರಿಗೆಯಾಗಿ 80 ಕೋಟಿ ಪಾವತಿಸಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಹೃತಿಕ್ ಪ್ರತಿ ವರ್ಷ ಸುಮಾರು 25.5 ಕೋಟಿ ರೂಪಾಯಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೂ ಅತಿ ಹೆಚ್ಚು ಟ್ಯಾಕ್ಸ್‌ ಕಟ್ಟುವ ನಟ ಮಾತ್ರ ಇವರಲ್ಲ. 

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಅಕ್ಷಯ್ ಕುಮಾರ್. 2022 ರಲ್ಲಿ ಒಟ್ಟು 29.5 ಕೋಟಿ ರೂಪಾಯಿ ತೆರಿಗೆಯನ್ನು ಅಕ್ಷಯ್ ಕುಮಾರ್ ಪಾವತಿಸಿದ್ದಾರೆ. ಅವರನ್ನು ಆದಾಯ ತೆರಿಗೆ ಇಲಾಖೆ ದೇಶದ 'ಅತಿ ಹೆಚ್ಚು ತೆರಿಗೆ ಪಾವತಿದಾರ' ಎಂದು ಗೌರವಿಸಿದೆ. ಅಕ್ಕಿ ವಾರ್ಷಿಕವಾಗಿ 486 ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ. ಇವರ ನಿವ್ವಳ ಮೌಲ್ಯ ಸುಮಾರು 2000 ಕೋಟಿ ಎನ್ನಲಾಗಿದೆ. 

ಇದನ್ನೂ ಓದಿ: Video: ಮಳೆಯಲ್ಲಿ ನಿಂತು ತಲೆ ಮೇಲೆ ಮೊಟ್ಟೆ ಒಡೆದುಕೊಂಡ ರಾಖಿ.. ನಡುಬೀದಿಯಲ್ಲಿ ಹೈಡ್ರಾಮಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News