'ಪಾಕಿಸ್ತಾನ್‌ ಜಿಂದಾಬಾದ್' ಘೋಷಣೆ ಕೂಗಿದ್ದರಲ್ಲಿ ತಪ್ಪಿಲ್ಲ.. ಇದು ವಾಕ್‌ ಸ್ವಾತಂತ್ರ್ಯ 

'ಪಾಕಿಸ್ತಾನ್ ಜಿಂದಾಬಾದ್' ಎಂದು ವಿನೋದಕ್ಕಾಗಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ಥಳಿಸಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ ಎಂದು ಪಾಕ್‌ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ನಡೆಯನ್ನು ಹೋರಾಟಗಾರ, ನಟ ಚೇತನ ಸಮರ್ಥನೆ ಮಾಡಿಕೊಂಡಿದ್ದಾರೆ.

Written by - Krishna N K | Last Updated : Nov 19, 2022, 05:40 PM IST
  • 'ಪಾಕಿಸ್ತಾನ್‌ ಜಿಂದಾಬಾದ್' ಘೋಷಣೆ ಕೂಗಿದ್ದರಲ್ಲಿ ತಪ್ಪಿಲ್ಲ
  • ವಿದ್ಯಾರ್ಥಿಗಳನ್ನು ಥಳಿಸಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ
  • ಇದು ಅಸಂಬದ್ಧ ಮತ್ತು ಅಪಾಯಕಾರಿ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಹೇಳಿಕೆ
 'ಪಾಕಿಸ್ತಾನ್‌ ಜಿಂದಾಬಾದ್' ಘೋಷಣೆ ಕೂಗಿದ್ದರಲ್ಲಿ ತಪ್ಪಿಲ್ಲ.. ಇದು ವಾಕ್‌ ಸ್ವಾತಂತ್ರ್ಯ  title=

ಬೆಂಗಳೂರು : 'ಪಾಕಿಸ್ತಾನ್ ಜಿಂದಾಬಾದ್' ಎಂದು ವಿನೋದಕ್ಕಾಗಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ಥಳಿಸಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ ಎಂದು ಪಾಕ್‌ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ನಡೆಯನ್ನು ಹೋರಾಟಗಾರ, ನಟ ಚೇತನ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ.. ನಿನ್ನೆ ನಡೆದ ಕಾಲೇಜು ಫೆಸ್ಟ್‌ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ. ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು - ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಆಶಿಕಾ ರಂಪಾಟ : ಚಿತ್ರತಂಡದ ಮೇಲೆ ಬೇಸಗೊಂಡ ಪವನ್‌ ಒಡೆಯರ್‌..!

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ಮಾರತ್ತಳ್ಳಿಯ ನ್ಯೂ ಹೊರಿಝೋನ್(New Horizon) ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ತಮಾಷೆಗಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರಂತೆ.

 

ರಿಯಾ, ಆರ್ಯನ್ ಮತ್ತು ದಿನಕರ್ ಎಂಬ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ತಮಾಷೆಗಾಗಿ ಮಾಡಿದ ಎಡವಟ್ಟಿಗೆ ವಿದ್ಯಾರ್ಥಿಗಳು ದಂಡ ತೆತ್ತಿದ್ದಾರೆ. ಖಾಸಗಿ ಕಾಲೇಜ್‍ನಲ್ಲಿ ಪಾಕಿಸ್ತಾನಕ್ಕೆ ಜೈಕಾರ ಪ್ರಕರಣ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕಿಚನ್‌ನಲ್ಲಿ ಕಿಚ್ಚ : ಬಿಗ್‌ಬಾಸ್ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟ ಸುದೀಪ್

ಇನ್ನು ಚೇತನ್‌ ಅವರ ಪೋಸ್ಟ್‌ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ನಿಮ್ಮ ನಡುವಳಿಕೆ ಥೂ ಅಸಹ್ಯ ಹುಟ್ಟಿಸುತ್ತೆʼ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಗಳ ನಡುವೆ ವ್ಯತ್ಯಾಸ ಗೊತ್ತಿರಬೇಕು ಎಂದು ಕೆಲವರು ಬುದ್ದಿಮಾತು ಹೇಳಿದ್ದಾರೆ. ಒಬ್ಬ ನೆಟ್ಟಿಗರು, ಇದೆ ಮಾತನ್ನು ಮುಂಬಯಿಯ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ತುಕರಾಮ್ ಒಂಬ್ಲೆ, ವಿಜಯ್ ಸಾಲಸ್ಕರ್, ಸಂದೀಪ್ ಉನ್ನಿಕ್ರಷ್ಣನ್, ಹೆಮಂತ್ ಕರ್ಕೆರೆ, ಅಶೋಕ್ ಕಾಮ್ಟೆಯವರ ಮನೆಯವರಿಗೆ ಹೇಳುವ ತಾಕತ್ ಇದೆಯಾ? ದಿನಕ್ಕೊಬ್ಬರಂತೆ ನಮ್ಮ ದೇಶದ ಸೈನಿಕರು ಪ್ರಾಣ ತ್ಯಾಗ ಮಾಡುವ ಸೈನಿಕರ ಮನೆಯವರಿಗೆ ಹೇಳುವ ತಾಕತ್ ನಿನಗೆ ಇದೆಯಾ? ಅಷ್ಟಕ್ಕೂ ನೀನು ಯಾಕೆ ಭಾರತದಲ್ಲಿ ಇದ್ದಿಯಾ ಅಲ್ಲಿಗೆ ಹೋಗಿ ನಿನ್ನ ಸೆಕ್ಯುಲರಿಸಮ್ ಪಾಠ ಮಾಡ ಬಹುದಲ್ಲ ನೀನು ಹೇಗೂ ಅಮೇರಿಕ ಪ್ರಜೆ ನಿನ್ನನ್ನು ಅವರು ಬೇಡ ಅನ್ನಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮಲೈಕಾ ಅರೋರಾ ಜೊತೆ ಅರ್ಜುನ್‌ ಕಪೂರ್‌ ʼಬೇಬಿ ಡೇ ಔಟ್..!

ಅಲ್ಲದೆ, ಆ ವಿದ್ಯಾರ್ಥಿಗಳು ವಿನೋದ ಮಾಡಲಿಕ್ಕೆ ಇನ್ನೊಂದ್ ಮಾಡ್ತಾರೆ ಹಾಗಂತ ಸುಮ್ಮನೆ ಇರೋಕೆ ಆಗುತ್ತಾ.... ಯಾರೇ ಇರಲಿ ಆತನಿಗೆ ಕಾನೂನು, ಶಿಸ್ತು ಪಾಲನೆ ಮಾಡೋದು ಹೇಗೆ ಅಂತಾ ಕಲಿಸೋ ಅಗತ್ಯವಿದೆ ಅದನ್ನು ಪೊಲೀಸ್ ಇಲಾಖೆ ಮಾಡುತ್ತೆ... ಎಂದು ನೆಟ್ಟಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಮಾತನಾಡಲು ಹಕ್ಕು ಅಂತಂದ್ರೆ ಬಾಯಿಗೆ ಬಂದದ್ದೆಲ್ಲಾ ಮಾತನಾಡಬಹುದು ಅಂತ ಅರ್ಥವಾ ? ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಗಳ ನಡುವೆ ವ್ಯತ್ಯಾಸ ಗೊತ್ತಿರಬೇಕು ಎಂದು ಚೇತನ್‌ಗೆ ಪಾಠ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News