actor Chiranjeevi : ಸಾಮಾನ್ಯವಾಗಿ ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳು ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ಅವರು ಏನೇ ಧರಿಸಿದರೂ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ನಟ-ನಟಿಯರು ತಮ್ಮ ಸಂಭಾವನೆಗೆ ತಕ್ಕಂತೆ ಬೆಲೆಬಾಳುವ ಬಟ್ಟೆಗಳನ್ನು, ವಾಚ್, ಶೂಗಳನ್ನು ಧರಿಸುತ್ತಾರೆ. ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಧರಿಸಿರುವ ವಾಚ್ನ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು.. ಇತ್ತೀಚೆಗೆ ಚಿರಂಜೀವಿ ಅವರ ಮನೆಯಲ್ಲಿ ರಕ್ಷಾಬಂಧನ ಆಚರಣೆ ಮಾಡಲಾಯಿತು. ಈ ವೇಳೆ ಮೆಗಾಸ್ಟಾರ್ ಅವರಿಗೆ ಅವರ ತಂಗಿ ರಾಖಿ ಕಟ್ಟಿ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ಫೋಟೋಗಳಲ್ಲಿ ಚಿರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಪ್ರಭಾಸ್ ಆಧಾರ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್! ನಿಜವಾದ ವಯಸ್ಸು ರಿವೀಲ್
ಫೋಟೋದಲ್ಲಿ ಚಿರು ರೋಲೆಕ್ಸ್ ಕಾಸ್ಮೊಗ್ರಫಿ ಡೇಟೋನಾ ವೈಟ್ ಟೈಗರ್ ವಾಚ್ ಧರಿಸಿದ್ದರು. ಇದೀಗ ಅವರ ಅಭಿಮಾನಿಗಳು ಅದರ ಬೆಲೆ ಎಷ್ಟು ಅಂತ ಇಂಟರ್ನೆಟ್ನಲ್ಲಿ ಹುಡುಕಾಟ ಪ್ರಾರಂಭಿಸಿದ್ದಾರೆ. ಇದರ ದರ ರೂ.2.35 ಲಕ್ಷ ಡಾಲರ್, ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸುಮಾರು 2 ಕೋಟಿ ರೂ. ಈ ಬಗ್ಗೆ ನೆಟ್ಟಿಗರು ಭರ್ಜರಿ ಚರ್ಚೆ ಮಾಡುತ್ತಿದ್ದಾರೆ.
ಇನ್ನು ಚಿತ್ರಗಳ ವಿಚಾರಕ್ಕೆ ಬಂದರೆ.. ಚಿರಂಜೀವಿ ಇತ್ತೀಚೆಗೆ ಭೋಲಾಶಂಕರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ಮೆಗಾಸ್ಟಾರ್ ನಿರ್ದೇಶಕ ವಶಿಷ್ಟ ಅವರ ಜೊತೆ ಸಿನಿಮಾ ಮಾಡಲಿದ್ದಾರೆ. ಜೊತೆಗೆ ಕಲ್ಯಾಣ್ ಕೃಷ್ಣ ನಿರ್ದೇಶನದ ಚಿತ್ರಕ್ಕೂ ಹಸಿರು ನಿಶಾನೆ ತೋರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.