ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್

Darshan viral video : ಕೊಲೆ ಆರೋಪಿ ದರ್ಶನ್‌ನನ್ನು ಭೇಟಿ ಮಾಡಲು ಬಂದ ವಕೀಲರನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಜೈಲಿನಿಂದ ಹೊರಗೆ ಬರುವಾಗ ಮಾಧ್ಯಮಗಳ ಕ್ಯಾಮರಾಗಳನ್ನು ನೋಡಿ ಅಸಭ್ಯ ವರ್ತನೆಯನ್ನು ದರ್ಶನ್ ತೋರಿಸಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Written by - VISHWANATH HARIHARA | Edited by - Krishna N K | Last Updated : Sep 12, 2024, 09:30 PM IST
    • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್
    • ಹತ್ಯೆ ಆರೋಪಿ ನಟ ದರ್ಶನ್ ದುರಹಂಕಾರ ಇನ್ನೂ ಕಮ್ಮಿಯಾಗಿಲ್ಲ
    • ಮಾಧ್ಯಮಗಳ ಕ್ಯಾಮರಾಗಳನ್ನು ನೋಡಿ ಅಸಭ್ಯ ವರ್ತನೆ ತೋರಿದ ದರ್ಶನ್
ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್ title=

Darshan shows middle finger video : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ದುರಹಂಕಾರ ಇನ್ನೂ ಕಮ್ಮಿಯಾಗಿಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್‌ನನ್ನು ಭೇಟಿ ಮಾಡಲು ಬಂದ ವಕೀಲರನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಜೈಲಿನಿಂದ ಹೊರಗೆ ಬರುವಾಗ ಮಾಧ್ಯಮಗಳ ಕ್ಯಾಮರಾಗಳನ್ನು ನೋಡಿ ಅಸಭ್ಯ ವರ್ತನೆಯನ್ನು ದರ್ಶನ್ ತೋರಿಸಿದ್ದಾನೆ. ಕೈಗಳ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿ ದುರ್ವತೆಯನ್ನು ದರ್ಶನ್ ತೋರಿದ್ದಾನೆ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಏನೆಲ್ಲಾ ವರದಿಗಳು ಪ್ರಸಾರ ಆಗುತ್ತಿವೆ ಎಂಬುದನ್ನು ತಿಳಿದುಕೊಂಡಿದ್ದಾನೆ ಎನ್ನಲಾಗಿದೆ. ತನ್ನ ವಿರುದ್ಧ ಮಾಧ್ಯಮಗಳು ವರದಿ ಮಾಡುತ್ತಿರುವುದನ್ನು ಕಂಡು ಪುನಃ ಕೆರಳಿ ಈ ರೀತಿ ವರ್ತಿಸಿದ್ದಾನೆ ಎನ್ನಲಾಗಿದೆ. ಇನ್ನು ಗುರುವಾರ ಬೆಳಗ್ಗೆ ಆತನ ಪತ್ನಿ ವಿಜಯಲಕ್ಷ್ಮಿ ಬಂದಾಗ ಫುಲ್ ಸಾಫ್ಟ್ ಆಗಿ ನಡೆದುಕೊಂಡಿದ್ದರು. ಆದರೆ, ಮಧ್ಯಾಹ್ನದ ವೇಲೆ ವಕೀಲರು ಭೇಟಿಯಾಗಲು ಹೈ ಸೆಕ್ಯೂರಿಟಿ ಜೈಲಿನಿಂದ ಸಂದರ್ಶಕರ ಕೊಠಡಿಗೆ ಬರುವಾಗ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ಮಿಡಲ್ ಫಿಂಗರ್ ತೋರಿಸಿ  ಅಸಭ್ಯ ವರ್ತನೆ ತೋರಿದ್ದಾನೆ. 

ಇದನ್ನೂ ಓದಿ: ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..

ಇನ್ನು ಮಾಧ್ಯಮಗಳ  ಮುಂದೆ ತನ್ನ ಎರಡೂ ಕೈಗಳ ಮಧ್ಯದ ಬೆರಳನ್ನು ತೋರಿಸುತ್ತಾ ಪೊಲೀಸರ ಜೊತೆಗೆ ನಡೆದುಕೊಂಡು ಬಂದಿದ್ದಾನೆ‌.  ಅಲ್ಲದೇ ಕ್ಯಾಮೆರಾಗಳ ಕಣ್ಣು ಫೋಕಸ್ ಆಗುತ್ತಿದ್ದಂತೆ ಹುಸಿ ನಗೆ ಬೀರಿದ್ದಾನೆ. ಈ ಅಸಭ್ಯ ವರ್ತನೆಯಿಂದ ಆತನಿಗೆ ಜೈಲಿನಲ್ಲಿದ್ದರೂ ಕೊಬ್ಬು ಕರಗಿಲ್ಲವೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News