ದೇಶಾದ್ಯಂತ ಮೆಚ್ಚುಗೆ ಪಡೆದ 'ಜೈ ಭೀಮ್' ಚಿತ್ರಕ್ಕೆ ಸಿಗದ ರಾಷ್ಟ್ರ ಪ್ರಶಸ್ತಿ : ನಟ ನಾನಿ ಬೇಸರ

Nani on National Film Awards 2023 : ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವ ನಟ ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರಕ್ಕೆ ಒಂದೇ ಒಂದು ರಾಷ್ಟ್ರಪ್ರಶಸ್ತಿ ಸಿಗದ ಕಾರಣ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ.

Written by - Krishna N K | Last Updated : Aug 26, 2023, 04:44 PM IST
  • 'ಜೈ ಭೀಮ್' ಚಿತ್ರಕ್ಕೆ ಸಿಗದ ರಾಷ್ಟ್ರಪ್ರಶಸ್ತಿ
  • ನಟ ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರ
  • ಈ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ
ದೇಶಾದ್ಯಂತ ಮೆಚ್ಚುಗೆ ಪಡೆದ 'ಜೈ ಭೀಮ್' ಚಿತ್ರಕ್ಕೆ ಸಿಗದ ರಾಷ್ಟ್ರ ಪ್ರಶಸ್ತಿ : ನಟ ನಾನಿ ಬೇಸರ title=

Nani on Jai Bhim Movie : ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆಗಸ್ಟ್ 24 ರಂದು ಗುರುವಾರ 69ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟವಾಯಿತು. ಈ ಬಾರಿ ತೆಲುಗು ಚಿತ್ರಗಳು ಒಟ್ಟಿಗೆ 10 ಪ್ರಶಸ್ತಿಗಳನ್ನು ಗೆದ್ದಿವೆ. ನಟ ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆದರೆ, ದೇಶಾದ್ಯಂತ ಪ್ರಶಂಸೆ ಗಳಿಸಿದ ಜೈ ಭೀಮ್‌ ಚಿತ್ರಕ್ಕೆ ಒಂದೇ ಒಂದು ರಾಷ್ಟ್ರಪ್ರಶಸ್ತಿ ಸಿಗದಿರುವುದು ಟೀಕೆಗೆ ಗುರಿಯಾಗಿದೆ.

'ಜೈ ಭೀಮ್' ಚಿತ್ರ ಪ್ರಶಸ್ತಿ ಪಡೆಯಲು ಅರ್ಹವಾಗಿದೆ, ಆದರೆ ಒಂದೇ ಒಂದು ಪ್ರಶಸ್ತಿಯನ್ನು ಈ ಸಿನಿಮಾಗೆ ನೀಡಿಲ್ಲ. ತಮಿಳಿನಲ್ಲಿ ಟಿ.ಜೆ.ಜ್ಞಾನವೇಲ್ ನಿರ್ದೇಶಿಸಿರುವ ಈ ಚಿತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ತೀರ್ಪುಗಾರರಿಗೆ ಕಣ್ಣಿಗೆ ಬಿದ್ದಿಲ್ಲವೇ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೋಬಿʼ ಚನ್ನಾಗಿಲ್ಲ ಎಂದ ಮಹಿಳೆಗೆ ಧಮಕಿ, ಅಶ್ಲೀಲ ಪದ ಬಳಕೆ..! ಶೆಟ್ರು ಏನಂದ್ರು ಗೊತ್ತಾ..?

ಇದೀಗ 'ಜೈ ಭೀಮ್' ಚಿತ್ರಕ್ಕೆ ಪ್ರಶಸ್ತಿ ಸಿಗದಿರುವ ಬಗ್ಗೆ ಟಾಲಿವುಡ್ ಸ್ಟಾರ್ ಹೀರೋ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ಜೈ ಭೀಮ್' ಎಂದು ಬರೆದುಕೊಂಡು ಒಡೆದ ಹೃದಯದ ಚಿಹ್ನೆಯನ್ನು ಸ್ಟೋರಿಯಲ್ಲಿ ಹಾಕಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜೈ ಭೀಮ್’ ಸಿನಿಮಾ ಖ್ಯಾತ ವಕೀಲ ಚಂದ್ರು ಅವರ ಜೀವನಾಧಾರಿತವಾಗಿತ್ತು. ತಮಿಳು ಸ್ಟಾರ್ ಹೀರೋ ಸೂರ್ಯ ವಕೀಲ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವನ್ನು ತಮಿಳಿನಲ್ಲಿ ನಿರ್ಮಿಸಲಾಯಿತು ಮತ್ತು ನಂತರ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು. ಚಿತ್ರಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News