'ಓಲ್ಡ್ ಮಾಂಕ್' ಶ್ರೀನಿಗೆ ಆರ್‌ಜೆ ಪಟ್ಟ..! ಯಾವಾಗ 'ಆನ್‌ ಏರ್‌' ಆಗ್ತಾರೆ..?

ಈಗ ಆರ್‌ಜೆ ಆಗುವ ಮೂಲಕ ಆನ್‌ ಏರ್ ಆಗ್ತಿದ್ದಾರೆ. ಅಂದ್ರೆ ಡೈರೆಕ್ಷನ್‌ ಜೊತೆಗೆ ನಟನೆಯಲ್ಲೂ ಬ್ಯುಸಿ ಇರುವ ಶ್ರೀನಿ, ಸದ್ದಿಲ್ಲದೇ ಮತ್ತೊಂದು ಚಿತ್ರಕ್ಕೆ  ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದು ಶ್ರೀನಿ ಅಭಿಮಾನಿ ಬಳಗಕ್ಕೆ ದೊಡ್ಡ ಸರ್‌ಪ್ರೈಸ್‌ ನೀಡಿದೆ.

Written by - Malathesha M | Last Updated : May 6, 2022, 05:39 PM IST
  • ಶ್ರೀನಿ ನಾಯಕನಾಗಿ ನಟಿಸ್ತಿರುವ ಸಿನಿಮಾ 'ಆನ್‌ ಏರ್ʼ
  • ಚಿತ್ರದ ಫಸ್ಟ್ ಲುಕ್ ಈಗ ರಿಲೀಸ್
  • ಶ್ರೀನಿ ಅಭಿಮಾನಿ ಬಳಗಕ್ಕೆ ದೊಡ್ಡ ಸರ್‌ಪ್ರೈಸ್‌
'ಓಲ್ಡ್ ಮಾಂಕ್' ಶ್ರೀನಿಗೆ ಆರ್‌ಜೆ ಪಟ್ಟ..! ಯಾವಾಗ 'ಆನ್‌ ಏರ್‌' ಆಗ್ತಾರೆ..? title=
On Air Cinema

ಶ್ರೀನಿ ಅಂದ್ರೆ ಕನ್ನಡದಲ್ಲಿ ಡಿಫರೆಂಟ್‌ ಸಿನಿಮಾಗಳನ್ನ ಕೊಡೋ ಎಕ್ಸ್‌ಪರ್ಟ್‌ ಡೈರೆಕ್ಟರ್‌ ಕಂ ಹೀರೋ. ಇದೀಗ ಇಂತಹದ್ದೇ ಒಂದು ಹೊಸ ಸಬ್ಜೆಕ್ಟ್‌ ಜೊತೆಗೆ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲಲು ಮತ್ತೊಮ್ಮೆ ಬೆಳ್ಳಿ ತೆರೆಗೆ ಎಂಟ್ರಿ ಕೊಡುವ ಉತ್ಸಾಹದಲ್ಲಿದ್ದಾರೆ 'ಓಲ್ಡ್ ಮಾಂಕ್' ಶ್ರೀನಿ.

ಇದನ್ನು ಓದಿ: "ಅರಣ್ಯದೊಳ್‌ ಮಾಯಾಲೋಕ" : ಮಿಂಚುಹುಳು ಸೃಷ್ಟಿಸಿದ ಪ್ರಪಂಚವಿದು...

ಅಂದ ಹಾಗೆ ಕನ್ನಡ ಚಿತ್ರ ಪ್ರೇಮಿಗಳಿಗೆ 'ಓಲ್ಡ್ ಮಾಂಕ್' ಕಿಕ್ ಕೊಟ್ಟಿದ್ದ ಶ್ರೀನಿ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸರ್‌ಪ್ರೈಸ್ ಕೊಟ್ಟಿದ್ದು ಗೊತ್ತೇ ಇದೆ. ಈಗ ಆರ್‌ಜೆ ಆಗುವ ಮೂಲಕ ಆನ್‌ ಏರ್ ಆಗ್ತಿದ್ದಾರೆ. ಅಂದ್ರೆ ಡೈರೆಕ್ಷನ್‌ ಜೊತೆಗೆ ನಟನೆಯಲ್ಲೂ ಬ್ಯುಸಿ ಇರುವ ಶ್ರೀನಿ, ಸದ್ದಿಲ್ಲದೇ ಮತ್ತೊಂದು ಚಿತ್ರಕ್ಕೆ  ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದು ಶ್ರೀನಿ ಅಭಿಮಾನಿ ಬಳಗಕ್ಕೆ ದೊಡ್ಡ ಸರ್‌ಪ್ರೈಸ್‌ ನೀಡಿದೆ.

ಒಟಿಟಿಗೆ ಡೈರೆಕ್ಟ್ ಎಂಟ್ರಿ: 
ಶ್ರೀನಿ ನಾಯಕನಾಗಿ ನಟಿಸ್ತಿರುವ ಹೊಸ ಸಿನಿಮಾ ಹೆಸರು 'ಆನ್‌ ಏರ್'. ಚಿತ್ರದ ಫಸ್ಟ್ ಲುಕ್ ಈಗ ರಿಲೀಸ್ ಆಗಿದ್ದು, ಇಂಪ್ರೆಸ್ಸಿಂಗ್ ಆಗಿದೆ. ಡಿಫರೆಂಟ್ ಟೈಟಲ್ ಮೂಲಕ ತೆರೆಗೆ ಬರಲು ಸಿದ್ಧವಾಗಿರುವ 'ಆನ್‌ ಏರ್' ಸಿನಿಮಾದಲ್ಲಿ ಶ್ರೀನಿ ಆರ್‌ಜೆ ಪಾತ್ರದಲ್ಲಿ ನಟಿಸ್ತಿದ್ದು, ಇದೊಂದು ಥ್ರಿಲ್ಲರ್ ಸಿನಿಮಾವಾಗಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಜುಲೈನಲ್ಲಿ ನೇರವಾಗಿ OTTಯಲ್ಲಿ ಈ ಸಿನಿಮಾ ಬಿಡುಗಡೆ ಮಾಡುತ್ತಿದೆ. 

ಇದನ್ನು ಓದಿ: Delhi-Meerut RRTS: ರೆಡಿಯಾಯ್ತಯು ದೇಶದ ಅತಿ ವೇಗದ ರೈಲು! ಫಸ್ಟ್ ಲುಕ್ ಇಲ್ಲಿದೆ ನೋಡಿ

ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ರಾಜಮೌಳಿ ತಂದೆ, ಬಾಹುಬಲಿ ಸಿನಿಮಾ ಲೇಖಕ ವಿಜಯೇಂದ್ರ ಪ್ರಸಾದ್ ಅಸೋಸಿಯೇಟ್ ಆಗಿದ್ದ ಪ್ರಶಾಂತ್ ಸಾಗರ್ 'ಆನ್‌ ಏರ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ರಘುವೀರ್ ಗೋರಿಪತಿ ಮತ್ತು ಸೃಜನ್ ಯರಬೋಲು ಬಂಡವಾಳ ಹೂಡಿದ್ದು, ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News