Sanjay Vijay : ಅಪ್ಪನ ರಾಜಕೀಯ ಎಂಟ್ರಿ ಬೆನ್ನಲ್ಲೇ ಸಿನಿರಂಗಕ್ಕೆ ಕಾಲಿಟ್ಟ ʼಸಂಜಯ್‌ ವಿಜಯ್‌ʼ..!

Jason Sanjay : ಸೂಪರ್‌ಸ್ಟಾರ್ ರಜನಿಕಾಂತ್ ನಂತರ ತಮಿಳು ಚಿತ್ರರಂಗ ಸೇರಿದಂತೆ ಸೌತ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ದಳಪತಿ ವಿಜಯ್. ಸದ್ಯದಲ್ಲೇ ಅವರ ಮಗ ಸಿನಿಮಾಗೆ ಎಂಟ್ರಿ ಕೊಡಲಿದ್ದು, ಯಾವ ಸಿನಿಮಾ, ಡೈರೆಕ್ಟರ್‌ ಯಾರು ಎಂಬ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ ನೋಡಿ..  

Written by - Krishna N K | Last Updated : Jul 15, 2023, 05:29 PM IST
  • ಹೀರೋಗಳ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಬರುವುದು ಸಾಮಾನ್ಯವಾಗಿದೆ.
  • ಸದ್ಯ ನಟ ದಳಪತಿ ವಿಜಯ್ ಅವರ ಮಗ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ.
  • ಹೀರೋಗಳ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಬರುವುದು ಸಾಮಾನ್ಯವಾಗಿದೆ.
Sanjay Vijay : ಅಪ್ಪನ ರಾಜಕೀಯ ಎಂಟ್ರಿ ಬೆನ್ನಲ್ಲೇ ಸಿನಿರಂಗಕ್ಕೆ ಕಾಲಿಟ್ಟ ʼಸಂಜಯ್‌ ವಿಜಯ್‌ʼ..! title=

Actor Vijay son Sanjay : ಹೀರೋಗಳ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಬರುವುದು ಸಾಮಾನ್ಯವಾಗಿದೆ. ಹೀಗೆ ಬಂದ ಅನೇಕರು ಯಶಸ್ವಿಯಾಗಿದ್ದಾರೆ. ಸದ್ಯ ಕಾಲಿವುಡ್ ಸ್ಟಾರ್ ಸೂಪರ್‌ ಸ್ಟಾರ್‌ ಇಳಯದಳಪತಿ ವಿಜಯ್ ಅವರ ಮಗ ಸಂಜಯ್ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ..

ಹೌದು.. ತಮಿಳಿನಲ್ಲಿ ದಳಪತಿಗೆ ಸಖತ್ ಕ್ರೇಜ್ ಇದೆ. ಕಾಲಿವುಡ್‌ ಸಿನಿ ಪ್ರೇಮಿಗಳು ಇವರ ಸಿನಿಮಾ ಬಿಡುಗಡೆ ವೇಳೆ ಹಬ್ಬದಂತೆ ಸಂಭ್ರಮಿಸಿ ವೆಲ್‌ಕಮ್‌ ಮಾಡ್ತಾರೆ. ಸೌಥ್‌ ಸಿನಿರಂಗದ ಸ್ಟಾರ್‌ ನಟರಲ್ಲಿ ಒಬ್ಬರಾಗಿರುವ ವಿಜಯ್‌ ಸಾಕಷ್ಟು ಅಭಿಮಾನ ಬಳಗವಿದೆ. ಸದ್ಯ ವಿಜಯ್ ರಾಜಯಕೀಯಕ್ಕೆ ಪ್ರವೇಶ ಮಾಡ್ತಾರೆ ಎನ್ನುವ ಸುದ್ದಿ ಕೇಳಿಬಂದ ಬೆನ್ನಲ್ಲೆ ಇದೀಗ ಅವರ ಮಗ ಸಂಜಯ್‌ ವಿಜಯ್‌ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹಾಟ್‌ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಲಕ್ಷ್ಮಿ ರೈ..ಪೋಟೋಸ್‌ ನೋಡಿ

ಅಲ್ಲದೆ, ವಿಜಯ್ ಪುತ್ರ ಸಂಜಯ್ ಹೀರೋ ಆಗಿ ನಟಿಸಲಿರುವ ಮೊದಲ ಸಿನಿಮಾದಲ್ಲಿ ಇವರ ಜೊತೆ ಮತ್ತೊಬ್ಬ ಸ್ಟಾರ್ ಹೀರೋಯಿನ್ ಮಗಳು ಸಹ ನಟಿಸಲಿದ್ದಾರೆ. ಆಕೆ ಬೇರೆ ಯಾರೂ ಅಲ್ಲ, ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದ ದೇವಯಾನಿಯ ಮಗಳು ಇನಿಯ ಕುಮಾರ.

ಯಸ್‌.. ಸಂಜಯ್ ಮತ್ತು ಇನಿಯಕುಮಾರ್ ಜೊತೆ ಸಿನಿಮಾ ಮಾಡಲು ನೋಡುತ್ತಿದ್ದೇವೆ ಎಂದು ದೇವಯಾನಿ ಪತಿ ರಾಜ್ ಕುಮಾರ್ ಹೇಳಿದ್ದಾರೆ. ನನ್ನ ಮಗಳು ಇನಿಯಕುಮಾರ್‌ಗೆ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಅದಕ್ಕಾಗಿಯೇ ನಾವು ವಿಜಯ್ ಅವರ ಮಗ ಸಂಜಯ್‌ಗೆ ನ್ಯಾಯಯುತವಾಗಿ ಅವರನ್ನು ಲಾಂಚ್ ಮಾಡಲು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಟರಿಗಿಂತ ಹೆಚ್ಚು ಸಂಭಾವನೆ ಹೊಂದಿದ್ದಾರೆ ಈ 5 ನಟಿಯರು.!

ಈ ಹಿಂದೆ ಅಜಿತ್ ಮತ್ತು ದೇವಯಾನಿ ನಾಯಕರಾಗಿ ನಟಿಸಿದ್ದ ನೀ ವರಿವೈ ಎನ್ ಚಿತ್ರದ ಮೂಲಕ ರಾಜಕುಮಾರ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಆ ಸಿನಿಮಾ ಆ ಕಾಲಕ್ಕೆ ದೊಡ್ಡ ಹಿಟ್ ಆಯಿತು. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ದೇವಯಾನಿ ಮತ್ತು ರಾಜಕುಮಾರ್ ಪ್ರೀತಿಸಿ ಮದುವೆಯಾದರು. ರಾಜ್ ಕುಮಾರ್ ಅವರು ಈ ಚಿತ್ರದ ಮುಂದುವರಿದ ಭಾಗವನ್ನು ನಿರ್ಮಿಸಲು ಬಯಸಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News