ಪ್ರಭಾಸ್ ಮೊದಲು ಆ ಮೂವರೊಂದಿಗೆ ನಟಿ ಅನುಷ್ಕಾ ಅಫೇರ್ ಇತ್ತಾ?

Ansuhka Shetty: ಅನುಷ್ಕಾ ಚಿತ್ರರಂಗಕ್ಕೆ ಬಂದು ಸುಮಾರು 19 ವರ್ಷಗಳಾಗಿವೆ. ಅನುಷ್ಕಾ ಅವರ ಸುದೀರ್ಘ ವೃತ್ತಿ ಜೀವನದಲ್ಲಿ ಒಂದೇ ಒಂದು ವಿವಾದವಿಲ್ಲ. ಆದರೆ ಅನುಷ್ಕಾ ಹೆಸರು ಅಫೇರ್ ವದಂತಿಗಳಿಗೆ ತಳುಕುಹಾಕಿಕೊಂಡಿದೆ..  ಪ್ರಭಾಸ್ ಮತ್ತು ಇತರ ಕೆಲವು ಹೀರೋಗಳೊಂದಿಗೆ ಆಕೆಗೆ ಅಫೇರ್ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.   

Written by - Savita M B | Last Updated : Jul 5, 2024, 07:00 PM IST
  • ಅನುಷ್ಕಾ ಶೆಟ್ಟಿ ಆಫ್ ಸ್ಕ್ರೀನ್ ಮತ್ತು ಆನ್ ಸ್ಕ್ರೀನ್ ತುಂಬಾ ಶಿಸ್ತುಬದ್ಧ ನಟಿ.
  • ಒಂದು ಪದದಲ್ಲಿ ಹೇಳುವುದಾದರೇ ಅವಳು ಮಿಸ್ ಪರ್ಫೆಕ್ಟ್.
ಪ್ರಭಾಸ್ ಮೊದಲು ಆ ಮೂವರೊಂದಿಗೆ ನಟಿ ಅನುಷ್ಕಾ ಅಫೇರ್ ಇತ್ತಾ?  title=

South Actress Anushka Shetty: ಅನುಷ್ಕಾ ಶೆಟ್ಟಿ ಆಫ್ ಸ್ಕ್ರೀನ್ ಮತ್ತು ಆನ್ ಸ್ಕ್ರೀನ್ ತುಂಬಾ ಶಿಸ್ತುಬದ್ಧ ನಟಿ... ಕೆಲವೇ ಚಿತ್ರಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದಾರೆ. ಅಲ್ಲದೇ ಅನುಷ್ಕಾ ಸೋಷಿಯಲ್ ಮೀಡಿಯಾ ಬಳಸುವುದಿಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರೂ ಅವಳನ್ನು ಸ್ವೀಟಿ ಎಂದು ಕರೆಯುತ್ತಾರೆ. ಅವಳ ಸ್ವಭಾವ ಮತ್ತು ನಡವಳಿಕೆ ಕೂಡ ತುಂಬಾ ಸರಳ... ಒಂದು ಪದದಲ್ಲಿ ಹೇಳುವುದಾದರೇ ಅವಳು ಮಿಸ್ ಪರ್ಫೆಕ್ಟ್.  

ಪ್ರಭಾಸ್ ಮತ್ತು ಅನುಷ್ಕಾ ಮದುವೆ ಎವರ್ ಗ್ರೀನ್ ಹಾಟ್ ಟಾಪಿಕ್ ಆಗಿದೆ. ನಮ್ಮಿಬ್ಬರ ನಡುವೆ ಏನೂ ಇಲ್ಲ, ಒಳ್ಳೆ ಫ್ರೆಂಡ್ಸ್ ಅಷ್ಟೇ ಎಂದು ಇಬ್ಬರೂ ಎಷ್ಟು ಸಾರಿ ಹೇಳಿದರೂ ಅಭಿಮಾನಿಗಳು, ಮಾಧ್ಯಮಗಳು ನಂಬುತ್ತಿಲ್ಲ. ಬಾಹುಬಲಿ ಸಿನಿಮಾದ ವೇಳೆ ಶುರುವಾದ ಅನುಷ್ಕಾ ಮತ್ತು ಪ್ರಭಾಸ್ ಮದುವೆಯ ವದಂತಿ ಹಲವು ವರ್ಷಗಳಿಂದ ಹರಿದಾಡುತ್ತಿದೆ.

ಇದನ್ನೂ ಓದಿ-ರೇವ್ ಪಾರ್ಟಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಖ್ಯಾತ ಆ್ಯಂಕರ್..! ವಿಡಿಯೋ ವೈರಲ್

ಸಾಹೋ ಚಿತ್ರದ ಪ್ರಚಾರಕ್ಕಾಗಿ ಪ್ರಭಾಸ್ ಇಡೀ ದೇಶವನ್ನು ಸುತ್ತಿದರು. ಹೋದಲ್ಲೆಲ್ಲಾ ಕಾಡುತ್ತಿದ್ದ ಪ್ರಶ್ನೆ.. ಅನುಷ್ಕಾ ಜೊತೆ ಮದುವೆ ಯಾವಾಗ?. ಆದರೆ ಪ್ರಭಾಸ್‌ಗೂ ಮೊದಲು ಅನುಷ್ಕಾ ಬಗ್ಗೆ ಕೆಲವು ಅಫೇರ್ ವದಂತಿಗಳು ಹಬ್ಬಿದ್ದವು.

ನಾಯಕ ಗೋಪಿಚಂದ್-ಅನುಷ್ಕಾ ಪ್ರೀತಿಸುತ್ತಿದ್ದರು ಎಂಬ ಮಾತು ಕೇಳಿ ಬಂದಿದ್ದವು.. ಯಜ್ಞಂ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಗೋಪಿಚಂದ್ ಭರ್ಜರಿ ಹಿಟ್ ಗಳಿಸಿದರು. ಈ ಚಿತ್ರದಲ್ಲಿ ಗೋಪಿ ಚಂದ್‌ಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ಅದಾದ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಶೌರ್ಯಂ ಸಿನಿಮಾ ತೆರೆಕಂಡು ಯಶಸ್ವಿಯೂ ಆಗಿತ್ತು. ಈ ಸಮಯದಲ್ಲಿ, ಅನುಷ್ಕಾ ಮತ್ತು ಗೋಪಿಚಂದ್ ಪ್ರೀತಿಸುತ್ತಿದ್ದಾರೆ ಮತ್ತು ಮದುವೆಯಾಗಲು ಬಯಸುತ್ತಾರೆ ಎಂದು ಹೇಳಲಾಗಿತ್ತು... ಆದರೆ 2013 ರಲ್ಲಿ ಗೋಪಿಚಂದ್ ಬೇರೆಯವರನ್ನು ವಿವಾಹವಾದರು.

ಇದನ್ನೂ ಓದಿ-Rashmika Mandanna: ಮೆಗಾ ಫ್ಯಾಮಿಲಿಗೆ ರಶ್ಮಿಕಾ ಎಂಟ್ರಿ..? ಏನಿದು ಹೊಸ ವಿಷಯ?!

ಅನುಷ್ಕಾ ಚೊಚ್ಚಲ ಸಿನಿಮಾ ಸೂಪರ್. ಈ ಸಿನಿಮಾದಲ್ಲಿ ನಾಗಾರ್ಜುನ ಜೊತೆ ಅನುಷ್ಕಾ ತೆರೆ ಹಂಚಿಕೊಂಡಿದ್ದಾರೆ. ಸೂಪರ್ ನಂತರ ಅನುಷ್ಕಾ ಮತ್ತು ನಾಗಾರ್ಜುನ ಡಾನ್ ಮತ್ತು ಕೆಡಿ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದರು.. ಈ ಹಿನ್ನಲೆಯಲ್ಲಿ ನಾಗಾರ್ಜುನ ಮತ್ತು ಅನುಷ್ಕಾ ನಡುವೆ ಅನೈತಿಕ ಸಂಬಂಧವಿದೆ ಎಂಬ ವರದಿಗಳು ಬಂದಿದ್ದವು.  

ಹತ್ತು ವರ್ಷಗಳ ಹಿಂದೆ ರಾಜಮೌಳಿ ಅವರ ಆಸ್ಥಾನದ ಸಿನಿಮಾಟೋಗ್ರಾಫರ್ ಕೆಕೆ ಸೆಂಥಿಲ್ ಕುಮಾರ್ ಮತ್ತು ಅನುಷ್ಕಾ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಸುದ್ದಿ ಇತ್ತು. ಸೆಂಥಿಲ್ ಅವರು ಅನುಷ್ಕಾಳನ್ನು ಮದುವೆಯಾಗಲು ಬಯಸುತ್ತಾರೆ ಎಂದು ಹೇಳಲಾಗಿತ್ತು. ಸೆಂಥಿಲ್ ಕುಮಾರ್ ಮತ್ತು ಅನುಷ್ಕಾ ಮದುವೆಯ ಸುದ್ದಿ ಅಂದು ಸಂಚಲನ ಮೂಡಿಸಿತ್ತು. ಮದುವೆಯಾಗಲು ಬಯಸಿದ್ದ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ ಎಂಬ ಹೊಸ ವಾದವೂ ಹೊರಬಿದ್ದಿತ್ತು.. ಆದರೆ ಪ್ರಭಾಸ್, ನಾಗಾರ್ಜುನ, ಗೋಪಿಚಂದ್ ಮತ್ತು ಸೆಂಥಿಲ್ ಕುಮಾರ್ ಜೊತೆ ಅನುಷ್ಕಾ ಅಫೇರ್ ಹೊಂದಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News