Actress Meena : ಮಗಳಿದ್ರೂ ಎರಡನೇ ಮದುವೆಗೆ ರೆಡಿಯಾದ್ರಾ ಮೀನಾ..!? ಸ್ಪಷ್ಟನೆ ಕೊಟ್ಟ ನಟಿ

Actress Meena second marriage : ಬಹುಭಾಷಾ ನಟಿ ಮೀನಾ ಎರಡನೇ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೀಗ ಸ್ವತಃ ಮೀನಾ (Meena Clarifies About Her Second Marriage) ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

Written by - Krishna N K | Last Updated : Mar 27, 2024, 04:17 PM IST
  • ನಟಿ ಮೀನಾ ಎರಡನೇ ಮದುವೆ ವಿಚಾರ ಜೋರಾಗಿ ಕೇಳಿ ಬರುತ್ತಿದೆ.
    ಮೀನಾ ಧನುಷ್‌ ಅವರನ್ನು ಮದುವೆಯಾಗ್ತಾರೆ ಅಂತ ವಂದಂತಿ ಹಬ್ಬಿತ್ತು.
    2022 ರಲ್ಲಿ ಮೀನಾ ಪತಿ ವಿದ್ಯಾಸಾಗರ್ ಅವರು ಅನಾರೋಗ್ಯದಿಂದ ಮೃತಪಟ್ಟರು.
Actress Meena : ಮಗಳಿದ್ರೂ ಎರಡನೇ ಮದುವೆಗೆ ರೆಡಿಯಾದ್ರಾ ಮೀನಾ..!? ಸ್ಪಷ್ಟನೆ ಕೊಟ್ಟ ನಟಿ title=
Meena sagar

Actress Meena Sagar : 2009ರಲ್ಲಿ ವಿದ್ಯಾಸಾಗರ್ ಎಂಬ ಉದ್ಯಮಿಯನ್ನು ನಟಿ ಮೀನಾ ಮದುವೆಯಾಗಿದ್ದರು. ಈ ಜೋಡಿಗೆ ನೈನಿಕಾ ಎಂಬ ಮಗಳಿದ್ದಾಳೆ. 2022 ರಲ್ಲಿ ವಿದ್ಯಾಸಾಗರ್ ಅವರು ಅನಾರೋಗ್ಯದಿಂದ ಸಾವನ್ನಪ್ಪಿದರು. ಇದರಿಂದಾಗಿ ಮೀನಾ ತಮ್ಮ ಮಗಳೊಂದಿಗೆ ಒಂಟಿಯಾಗಿ ಜೀವನ ನಡೆಸಬೇಕಾಯಿತು.  

ಕನ್ನಡ, ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮೀನಾ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. 1982 ರಲ್ಲಿ ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು, 1990ರಲ್ಲಿ ನವಯುಗಂ ಎಂಬ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ಹೊರಹೊಮ್ಮಿದರು.

ಇದನ್ನೂ ಓದಿ:ಹುಕ್ಕಾ ಪಾರ್ಲರ್ ಮೇಲೆ ದಾಳಿ : ಬಿಗ್‌ಬಾಸ್‌ ವಿನ್ನರ್ ಸೇರಿ 14 ಮಂದಿ ಬಂಧನ

1994 ರಲ್ಲಿ ಪುಟ್ನಂಜ ಸಿನಿಮಾದ ಮೂಲಕ ಮೀನಾ ಚಂದನವನಕ್ಕೆ ಪ್ರವೇಶ ಮಾಡಿದರು. ತಮ್ಮ ಚೊಚ್ಚಲ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು. ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಮೈ ಆಟೋಗ್ರಾಫ್‌, ಸೇರಿದಂತೆ ಹಲವಾರು ಸೂಪರ್‌ ಹಿಟ್‌ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಧ್ಯ ತಮ್ಮ ಎರಡನೇ ಮದುವೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಅವರು, ಈ ರೀತಿಯ ಸುಳ್ಳು ಸುದ್ದಿಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ನೋವಾಗಿದೆ. ಮಾಧ್ಯಮಗಳು ಸಹ ಈ ರೀತಿಯ ಸುದ್ದಿಗಳನ್ನು ಪರಿಶೀಲಿಸಿ ಪ್ರಕಟಿಸುವುದು ಉತ್ತಮ ಅಂತ ತಾವು ಸದ್ಯಕ್ಕೆ ಮದುವೆಯಾಗುತ್ತಿಲ್ಲ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News