ಮದುವೆಯಾಗದೇ ಗರ್ಭಿಣಿಯಾಗಿದ್ದ ಖ್ಯಾತ ನಟಿ... ಪೋಷಕರಿಗೆ ಗೊತ್ತಾಯ್ತು.. ಏನ್ ಮಾಡಿದ್ರು ಗೊತ್ತಾ?

Actress Neha Dhupia: ಸಿನಿರಂಗದಲ್ಲಿ ಸಾಕಷ್ಟು ನಟಿಯರು ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. ಇದೀಗ ಸೌತ್‌ ಸಿನಿರಂಗದ ಖ್ಯಾತ ನಟಿ ಮದುವೆಯಾಗದೇ ಗರ್ಭಿಣಿಯಾಗಿದ್ದರ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Dec 15, 2023, 10:44 AM IST
  • ನೇಹಾ ಧೂಪಿಯಾ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು.
  • ಈಕೆ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದ ಸುದ್ದಿಯಾಗುತ್ತಾರೆ.
  • ನೇಹಾ ಧೂಪಿಯಾ 2018 ರಲ್ಲಿ ಅಂಗದ್ ಬೇಡಿ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು.
ಮದುವೆಯಾಗದೇ ಗರ್ಭಿಣಿಯಾಗಿದ್ದ ಖ್ಯಾತ ನಟಿ... ಪೋಷಕರಿಗೆ ಗೊತ್ತಾಯ್ತು.. ಏನ್ ಮಾಡಿದ್ರು ಗೊತ್ತಾ?  title=

Neha Dhupia: ನೇಹಾ ಧೂಪಿಯಾ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. 'ಖಯಾಮತ್; ಸಿಟಿ ಅಂಡರ್ ಥ್ರೆಟ್', 'ದೇ ದನಾದನ್' 'ಚುಪ್ ಚುಪ್ ಕೆ' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಈಕೆ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದ ಸುದ್ದಿಯಾಗುತ್ತಾರೆ.

ನೇಹಾ ಧೂಪಿಯಾ 2018 ರಲ್ಲಿ ಅಂಗದ್ ಬೇಡಿ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು.. ಮತ್ತು ಅದೇ ವರ್ಷದಲ್ಲಿ ಮಗಳು ಮೆಹರ್ ಬೇಡಿ ಕೂಡ ಜನಿಸಿದಳು. ಮದುವೆಗೂ ಮೊದಲೇ ನೇಹಾ ಗರ್ಭಿಣಿಯಾಗಿದ್ದರಿಂದ ಅಂಗದ್ ಬೇಡಿ ಅವರನ್ನು ಗುಟ್ಟಾಗಿ  ಮದುವೆಯಾಗಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ-'ಭಾಗ್ಯಲಕ್ಷ್ಮೀ' ಧಾರಾವಾಹಿಯ ಸುಷ್ಮಾ ರಾವ್‌ ಅವರ ಪತಿ ಇವರೇ.. ಕನ್ನಡದ ಖ್ಯಾತ ನಿರ್ದೇಶಕ ಇವರು!

ಸಂದರ್ಶನವೊಂದರಲ್ಲಿ ನೇಹಾ ಮದುವೆಗೆ ಮುಂಚೆಯೇ ಗರ್ಭಿಣಿಯಾಗುವುದರ ಬಗ್ಗೆ ಮಾತನಾಡಿದ್ದಾರೆ ಮತ್ತು ಅದರ ಬಗ್ಗೆ ಅವರ ಪೋಷಕರ ಪ್ರತಿಕ್ರಿಯೆ ಏನು? ಎನ್ನುವುದರ ಕುರಿತು ಆಕೆ ಮಾತನಾಡಿದ್ದಾಳೆ.. 'ನಮ್ಮ ಮದುವೆ ಯಾವುದೇ ಸಿದ್ಧತೆಗಳಿಲ್ಲದೆ ನಡೆದಿದೆ.. ಏಕೆಂದರೆ ನಾನು ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದೆ ಮತ್ತು ಅದರ ಬಗ್ಗೆ ನನಗೆ ತಿಳಿದಾಗ, ನಾನು ನನ್ನ ಪೋಷಕರಿಗೆ ತಿಳಿಸಿದ್ದೇ... ಅವರು ನನಗೆ ಹೇಳಿದ್ದು ಇಷ್ಟೇ ಇದೆಲ್ಲಾ ಒಳ್ಳೆಯದು, ಆದರೆ ನೀವು ಮದುವೆಯಾಗಲು ಕೇವಲ ನಿಮಗೆ 72 ಗಂಟೆಗಳನ್ನು ನೀಡುತ್ತೇವೆ ಎಂದರು.. ಆಗ ಮದುವೆಯಾಗಲು ನನಗೆ ಕೇವಲ ಎರಡೂವರೆ ದಿನಗಳ ಸಮಯವಿತ್ತು. ತಂದೆ-ತಾಯಿಯ ಸಲಹೆ ಮೇರೆಗೆ ಮುಂಬೈ ತಲುಪಿದ ಕೂಡಲೇ ಅಂಗದ್ ಜೊತೆ ಮದುವೆಯಾದೆ. ನಿಮ್ಮ ನಿರ್ಧಾರವು ಯಾರಿಗೂ ಹಾನಿಯಾಗದಿದ್ದರೆ, ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಧಾರಾಳವಾಗಿ ಮಾಡಬಹುದುʼ ಎಂದು ತಮ್ಮ ಮನದಾಳದ ಮಾತುಗಳನ್ನು ಬಹಿರಂಗ ಪಡಿಸಿದ್ದಾರೆ.. 

ಇದನ್ನೂ ಓದಿ-ಶೂಟಿಂಗ್ ಸೆಟ್’ಗೆ ಬಂದು ಮದುವೆ ಆಗುವಂತೆ ಹಠ ಮಾಡಿದ ಖ್ಯಾತ ಸೀರಿಯಲ್ ನಟಿ: ದಿಕ್ಕುತೋಚದೆ 46ನೇ ವಯಸ್ಸಲ್ಲಿ ತಾಳಿ ಕಟ್ಟಿದ ಹಾಸ್ಯನಟ!

ನೇಹಾ ಧೂಪಿಯಾ 2018 ರಲ್ಲಿ ಅಂಗದ್ ಬೇಡಿ ಅವರನ್ನು ವಿವಾಹವಾದರು ಮತ್ತು ಮದುವೆಯ ನಂತರ ಕೆಲವೇ ದಿನಗಳಲ್ಲಿ ತನ್ನ ಗರ್ಭಧಾರಣೆಯನ್ನು ತಿಳಿಸಿದರು... ನೇಹಾ ಮೇ ತಿಂಗಳಲ್ಲಿ ವಿವಾಹವಾದರು ಮತ್ತು ನವೆಂಬರ್‌ನಲ್ಲಿ ಮಗಳು ಮೆಹರ್‌ಗೆ ಜನ್ಮ ನೀಡಿದರು, ಈ ಕಾರಣದಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಆದರೆ 'ನಾಲ್ವರು ಏನೇ ಮಾತಾಡಲಿ ಪರವಾಗಿಲ್ಲʼ ಎಂದು ನಟಿ ಹಲವು ಬಾರೀ ಹೇಳಿದ್ದಾರೆ.. 

ಮಗಳಲ್ಲದೆ, ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಅವರಿಗೆ ಒಬ್ಬ ಮಗನೂ ಇದ್ದಾನೆ. ನೇಹಾ ಆಗಾಗ್ಗೆ ತಮ್ಮ ಕುಟುಂಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News