Pooja Bhatt : ಒಂದಿಚ್ಚು ಬಟ್ಟೆಯಿಲ್ಲ, ಮೈತುಂಬಾ ಬರೀ ಪೇಂಟ್ ಹಚ್ಚಿ ಫೋಟೋಶೂಟ್!

Pooja Bhatt Photoshoot: ಇತ್ತೀಚಿನ ದಿನಗಳಲ್ಲಿ ಬಟ್ಟೆ ವಿಚಾರವಾಗಿ ಉರ್ಫಿ ಜಾವೇದ್ ಅವರ ಹೆಸರು ಸಾಕಷ್ಟು ಕೇಳಿಬರುತ್ತಿದೆ. ಆದರೆ ಉರ್ಫಿ ಇಂದು ಮಾಡುತ್ತಿರುವ ಕೆಲಸವು ಬಾಲಿವುಡ್‌ನ ಖ್ಯಾತ ನಟಿ ಪೂಜಾ ಭಟ್ ಸುಮಾರು 30 ವರ್ಷಗಳ ಹಿಂದೆ ಮಾಡಿ ಜನರ ಮನಸ್ಸನ್ನು ಕದಿದ್ದರು.  

Written by - Chetana Devarmani | Last Updated : Aug 10, 2023, 12:54 PM IST
  • ಮೈಮೇಲೆ ಬರೀ ಪೇಂಟ್ ಹಚ್ಚಿ ಫೋಟೋಶೂಟ್
  • ಬೋಲ್ಡ್ ಫೋಟೋಶೂಟ್‌ನಿಂದ ಸದ್ದು ಮಾಡಿದ್ದ ನಟಿ
  • ಬೋಲ್ಡ್ ಔಟ್‌ಫಿಟ್‌ ವಿಚಾರದಲ್ಲಿ ಸುದ್ದಿ ಮಾಡಿದ್ದ ಬೆಡಗಿ
Pooja Bhatt : ಒಂದಿಚ್ಚು ಬಟ್ಟೆಯಿಲ್ಲ, ಮೈತುಂಬಾ ಬರೀ ಪೇಂಟ್ ಹಚ್ಚಿ ಫೋಟೋಶೂಟ್!  title=
Pooja Bhatt

Pooja Bhatt Photoshoot: ಈ ದಿನಗಳಲ್ಲಿ ಬೋಲ್ಡ್ ಫೋಟೋಶೂಟ್ ಅಥವಾ ಬೋಲ್ಡ್ ಔಟ್‌ಫಿಟ್‌ ವಿಚಾರಕ್ಕೆ ಬಂದಾಗ, ಉರ್ಫಿ ಜಾವೇದ್ ಹೆಸರು ನೆನಪಿಗೆ ಬರುತ್ತದೆ. ಜನರು ನಾಚಿಕೆಯಿಂದ ಕಣ್ಣು ಮುಚ್ಚಬೇಕಾದಂತಹ ನೋಟದಲ್ಲಿ ಅನೇಕ ಬಾರಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಆದರೆ ವರ್ಷಗಳ ಹಿಂದೆ, 90 ರ ದಶಕದ ನಟಿಯೊಬ್ಬರು ಇಂಥದ್ದೊಂದು ಫೋಟೋಶೂಟ್‌ ಮಾಡಿಸಿದ್ದರು. ಇವರ ಮುಂದೆ ಉರ್ಫಿ ಕೂಡ ಹಿಂದೆ ಉಳಿದಿದ್ದಾರೆ. ನಾವು 90 ರ ದಶಕದ ಟಾಪ್ ನಟಿಯಾಗಿದ್ದ ಪೂಜಾ ಭಟ್ ಬಗ್ಗೆ ಮಾತನಾಡುತ್ತಿದ್ದೇವೆ. ಆ ಸಮಯದಲ್ಲಿ ಪೂಜಾ ಭಟ್ ತಮ್ಮ ನಟನೆ ಮಾತ್ರವಲ್ಲದೆ ಬೋಲ್ಡ್ ನೆಸ್ ನಿಂದ ಸುದ್ದಿಯಾಗಿದ್ದರು.

ಇದನ್ನೂ ಓದಿ: ʼಜೈಲರ್‌ʼ ಸಿನಿಮಾದಲ್ಲಿ ಶಿವಣ್ಣ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ : ಹೇಗಿದೆ ಗೊತ್ತಾ ರಜನಿ ಚಿತ್ರ

ಮೂರು ದಶಕಗಳ ಹಿಂದೆ ಮ್ಯಾಗಜಿನ್ ಕವರ್ ಶೂಟ್ ಗಾಗಿ ಪೂಜಾ ಭಟ್ ಮಾಡಿದ್ದ ಫೋಟೋಶೂಟ್ ಇದಕ್ಕೆ ಸಾಕ್ಷಿ. ಪೂಜಾ ಆ ಹೆಜ್ಜೆ ಇಟ್ಟಿದ್ದರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆ ಅವಧಿಯಲ್ಲಿ ಪೂಜಾ ತನ್ನ ದೇಹವನ್ನು ಪೇಂಟ್‌ನಿಂದ ಚಿತ್ರಿಸಿದ ಫೋಟೋವನ್ನು ತೆಗೆದರು. ಅದೇ ಚಿತ್ರಗಳನ್ನು ಫೇಮಸ್ ಮ್ಯಾಗಜೀನ್‌ನ ಮುಖಪುಟದಲ್ಲಿ ಪ್ರಕಟಿಸಲಾಯಿತು. ಆಗ ಈ ಚಿತ್ರವನ್ನು ನೋಡಿದವರಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೆ, ಪೂಜಾ ಬಟ್ಟೆ ತೊಟ್ಟಿದ್ದರೇನೋ ಎಂಬಂತೆ ವಿವಿಧ ಬಣ್ಣಗಳನ್ನು ಬಳಸಿ ಬಾಡಿ ಪೇಂಟ್ ಮಾಡಲಾಗಿತ್ತು. ಅದು ಮೂವತ್ತು ವರ್ಷಗಳ ಹಿಂದೆ ಅಂದರೆ ಸುಮಾರು 1993 ರಲ್ಲಿ ಮಾಡಿದ್ದ ಫೋಟೋಶೂಟ್. ಆ ಸಮಯದಲ್ಲಿ ಈ ಜನಪ್ರಿಯ ಫೋಟೋಶೂಟ್‌ನಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿದ್ದವು.

ಈ ದಿನಗಳಲ್ಲಿ ಪೂಜಾ ಬಿಗ್ ಬಾಸ್ OTT 2 ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಪೂಜಾ ಭಟ್ ಅವರು ಸಲ್ಮಾನ್ ಖಾನ್ ಅವರ ಬಿಗ್ ಬಾಸ್ OTT ಸೀಸನ್ 2 ನಲ್ಲಿದ್ದಾರೆ ಮತ್ತು ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಪೂಜಾ ಭಟ್ ಇದು ತಮ್ಮ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್‌ನ ಆರಂಭ ಎಂದು ಪರಿಗಣಿಸಿದ್ದಾರೆ. ಶೋನಲ್ಲಿ ಕಾಣಿಸಿಕೊಂಡ ನಂತರ‌ ಪೂಜಾ ಭಟ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ತಮ್ಮ ಮುರಿದುಬಿದ್ದ ದಾಂಪತ್ಯಕ್ಕೆ ಸಂಬಂಧಿಸಿದಂತೆ, ಇದು ಸಾವಿನ ಭಾವನೆಗಿಂತ ಕಡಿಮೆಯಿಲ್ಲದ ಅವರ ಜೀವನದ ಅತ್ಯಂತ ಕೆಟ್ಟ ಹಂತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಣ್ಮನ ಸೆಳೆಯುತಿದೆ ಕೋಟಿಗೊಬ್ಬ-2 ಚೆಲುವೆಯ ಸೌಂದರ್ಯ..ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News