12 ವರ್ಷಗಳ ಬಳಿಕ ತಾಯಿಯಾಗಲಿದ್ದಾರೆ ರಾಧಿಕಾ..! ಫ್ಯಾನ್ಸ್‌ ಖಷಿಗೆ ಪಾರವೇ ಇಲ್ಲ..

Radhika Apte pregnant : ಬಾಲಿವುಡ್‌ ಬೋಲ್ಡ್ ಅಂಡ್ ಡೇರಿಂಗ್ ಹೀರೋಯಿನ್ ಎಂದೇ ಗುರುತಿಸಿಕೊಂಡಿರುವ ರಾಧಿಕಾ ಆಪ್ಟೆ ಸೌತ್‌ ಸಿನಿ ಪ್ರೇಕ್ಷಕರಿಗೂ ಚಿರಪರಿಚಿತ. ರಕ್ತ ಚರಿತ್ರೆ, ಲೆಜೆಂಡ್, ಲಯನ್ ಮುಂತಾದ ಸೌತ್‌ ಸಿನಿಮಾಗಳಲ್ಲಿ ಈಕೆ ನಟಿಸಿದ್ದಾಳೆ. ಅಲ್ಲದೆ ಹಲವು ಹಿಂದಿ ಡಬ್ಬಿಂಗ್ ಸಿನಿಮಾಗಳಿಂದ ಇಲ್ಲಿನ ಪ್ರೇಕ್ಷಕರಿಗೆ ಈಕೆ ಚಿರಪರಿಚಿತೆ. 

Written by - Krishna N K | Last Updated : Oct 17, 2024, 08:54 PM IST
    • ನಟಿ ರಾಧಿಕಾ ಆಪ್ಟೆ ಫ್ಯಾನ್ಸ್‌ಗಳಿಗೆ ಶುಭ ಸುದ್ದಿ ನೀಡಿದ್ದಾರೆ.
    • ಸದ್ಯದಲ್ಲೇ ತಾಯಿಯಾಗಿ ಪ್ರಮೋಷನ್ ಪಡೆಯಲಿದ್ದಾರೆ.
    • ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು.
12 ವರ್ಷಗಳ ಬಳಿಕ ತಾಯಿಯಾಗಲಿದ್ದಾರೆ ರಾಧಿಕಾ..! ಫ್ಯಾನ್ಸ್‌ ಖಷಿಗೆ ಪಾರವೇ ಇಲ್ಲ.. title=

Radhika Apte Pregnancy : ನಟಿ ರಾಧಿಕಾ ಆಪ್ಟೆ ಫ್ಯಾನ್ಸ್‌ಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಈ ಸುಂದರಿ, ಸದ್ಯದಲ್ಲೇ ತಾಯಿಯಾಗಿ ಪ್ರಮೋಷನ್ ಪಡೆಯಲಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾ ಸಮಾರಂಭವೊಂದರಲ್ಲಿ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ರಾಧಿಕಾ ಅವರು 'BFI ಲಂಡನ್ ಫಿಲ್ಮ್ ಫೆಸ್ಟಿವಲ್ 2024' ನಿಂದ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಕೆ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡಿದ್ದರಿಂದ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು. ಇದನ್ನು ನೋಡಿದ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ನೆಟಿಜನ್‌ಗಳು ರಾಧಿಕಾಗೆ ಮುಂಚಿತವಾಗಿಯೇ ಶುಭಹಾರೈಸಿದ್ದಾರೆ. 

ಇದನ್ನೂ ಓದಿ: ಕಿರಾತಕ ಚಿತ್ರ ನಟಿಯ 17 ಸೆಕೆಂಡ್‌ನ ಅಶ್ಲೀಲ ಖಾಸಗಿ ವಿಡಿಯೋ ಔಟ್‌..! ಸಾಮಾಜಿಕ ಮಾಧ್ಯಮದಲ್ಲಿ ಲಿಂಕ್‌ ವೈರಲ್‌..

ರಾಧಿಕಾ ಅಭಿನಯದ 'ಸಿಸ್ಟರ್ ಮಿಡ್ನೈಟ್' ಯುಕೆಯಲ್ಲಿ ಪ್ರೀಮಿಯರ್ ಆಗಿತ್ತು. ಈವೆಂಟ್‌ನಲ್ಲಿ ಅವರು ಕಪ್ಪು ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ, ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡಿದ್ದರಿಂದ ನೆಟಿಜನ್‌ಗಳು ಆಕೆಗೆ ಶುಭಾಶಯಗಳ ಸುರಿಮಳೆಗೈದರು. 

 
 
 
 

 
 
 
 
 
 
 
 
 
 
 

A post shared by Radhika (@radhikaofficial)

ರಾಧಿಕಾ 2012 ರಲ್ಲಿ ಬ್ರಿಟಿಷ್ ಪಿಟೀಲು ವಾದಕ ಮತ್ತು ಸಂಗೀತ ಸಂಯೋಜಕ ಬೆನೆಡಿಕ್ಟ್ ಟೇಲರ್ ಅವರನ್ನು ವಿವಾಹವಾದರು. ಮದುವೆ ಸಮಾರಂಭವು ಇಂಗ್ಲೆಂಡ್‌ನಲ್ಲಿ ಕೆಲವೇ ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ನಡೆಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News