Sridevi : ಶ್ರೀದೇವಿಗೆ ಸ್ಟಾರ್ ಪಟ್ಟ ಬರಲು ಕಾರಣವೇ ಈ ನಟಿ.!

Sridevi Life Story: ರೇಖಾ ಅವರು ಬಿಟ್ಟು ಕೊಟ್ಟ ಆ ಒಂದು ಸಿನಿಮಾ ಶ್ರೀದೇವಿ ಅವರನ್ನು ಯಾವ ರೀತಿ ರಾತ್ರೋ ರಾತ್ರಿ ಸ್ಟಾರ್‌ ಮಾಡಿತು ಎಂದು ಹೇಳಿದ್ದಾರೆ. 

Written by - Chetana Devarmani | Last Updated : Mar 26, 2024, 04:39 PM IST
  • ಭಾರತೀಯ ಚಿತ್ರರಂಗದ ಐಕಾನ್ ತಾರೆ ಶ್ರೀದೇವಿ
  • ಶ್ರೀದೇವಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾ
  • ರೇಖಾ ಅವರು ಬಿಟ್ಟು ಕೊಟ್ಟ ಆ ಸಿನಿಮಾ
Sridevi : ಶ್ರೀದೇವಿಗೆ ಸ್ಟಾರ್ ಪಟ್ಟ ಬರಲು ಕಾರಣವೇ ಈ ನಟಿ.! title=

Sridevi Hit Movie: ಭಾರತೀಯ ಚಿತ್ರರಂಗದ ಐಕಾನ್ ತಾರೆ ಶ್ರೀದೇವಿ. ಭಾರತೀಯ ಸಿನಿರಂಗದಲ್ಲಿ ಮೊಟ್ಟ ಮೊದಲ ಬಾರಿಗೆ 1 ಕೋಟಿ ಸಂಭಾವನೆ ಪಡೆದ ನಟಿ ಶ್ರೀದೇವಿ. ಇತ್ತೀಚೆಗೆ, ಹಿರಿಯ ನಟ ಜೀತೇಂದ್ರ ಅವರ ಹಳೆಯ ಸಂದರ್ಶನದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರೇಖಾ ಅವರು ಬಿಟ್ಟು ಕೊಟ್ಟ ಆ ಒಂದು ಸಿನಿಮಾ ಶ್ರೀದೇವಿ ಅವರನ್ನು ಯಾವ ರೀತಿ ರಾತ್ರೋ ರಾತ್ರಿ ಸ್ಟಾರ್‌ ಮಾಡಿತು ಎಂದು ಹೇಳಿದ್ದಾರೆ. 

ಜೀತೇಂದ್ರ, ಸಿನಿಮಾದಲ್ಲಿನ ಪಾತ್ರಕ್ಕೆ ನಟಿ ರೇಖಾ ಅವರು ಶ್ರೀದೇವಿಯ ಹೆಸರನ್ನು ಹೇಗೆ ಸೂಚಿಸಿದರು ಎಂಬ ಕಥೆಯನ್ನು ಹಂಚಿಕೊಂಡರು. ಒಮ್ಮೆ ರೇಖಾ ಮತ್ತು ನಾನು ತೆಲುಗು ಚಿತ್ರ (ಚಿತ್ರದಲ್ಲಿ ಶ್ರೀದೇವಿ ಇದ್ದರು) ನೋಡುತ್ತಿದ್ದೆವು. ಆ ಸಮಯದಲ್ಲಿ ರೇಖಾ ಹಿಮ್ಮತ್‌ವಾಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದರು. ನಾವು ತೆಲುಗು ಚಿತ್ರ ನೋಡುತ್ತಿದ್ದಾಗ ರೇಖಾ ಅವರು ‘ನೀನು ಇವರ ಜೊತೆ ಕೆಲಸ ಮಾಡಬೇಕು’ ಎಂದು ಹೇಳುತ್ತಿದ್ದರು. ಖಂಡಿತಾ ಅವರ ಜೊತೆ ಕೆಲಸ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ನನ್ನ ಪ್ರಕಾರ ರೇಖಾ ಅವರು ಹಿಮ್ಮತ್‌ವಾಲಾ ಚಿತ್ರಕ್ಕೆ ಡೇಟ್ಸ್ ನೀಡಲು ಸಾಧ್ಯವಾಗಲಿಲ್ಲ. ಆಗ ಚಿತ್ರದ ನಿರ್ದೇಶಕ ಕೆ ರಾಘವೇಂದ್ರ ರಾವ್ ಶ್ರೀದೇವಿಯನ್ನು ತೆಗೆದುಕೊಳ್ಳೋಣ ಎಂದು ಹೇಳಿದರು.

ಇದನ್ನೂ ಓದಿ: ಧಾರಾವಾಹಿಯ ಅಣ್ಣ-ತಂಗಿ.. ನಿಜಜೀವನದ ಗಂಡ-ಹೆಂಡ್ತಿ! ‘ಶ್ರೀರಸ್ತು ಶುಭಮಸ್ತು’ ಪೂರ್ಣಿ ರಿಯಲ್‌ ಲೈಫ್ ಪತಿ ಈ ನಟ !! 

ಶ್ರೀದೇವಿಯವರ ನೃತ್ಯ ಕೌಶಲ್ಯದ ಬಗ್ಗೆ ಮಾತನಾಡಿದ ಜೀತೇಂದ್ರ, ಡ್ಯಾನ್ಸ್ ಮಾಸ್ಟರ್ ನಮಗೆ ಸ್ಟೆಪ್ಸ್ ಹೇಳಿಕೊಡುತ್ತಿದ್ದಾಗ ಅವರು ಅದನ್ನು ಎರಡು ರಿಹರ್ಸಲ್‌ಗಳಲ್ಲಿ ಬೇಗನೆ ಕಲಿಯುತ್ತಿದ್ದರು. ಆದರೆ ನನಗೆ ಹೆಚ್ಚು ಸಮಯ ಹಿಡಿಯಿತು. ನಾನು ನನ್ನ ಹೆಜ್ಜೆಗಳನ್ನು ಕರಗತ ಮಾಡಿಕೊಳ್ಳುವವರೆಗೂ ಶ್ರೀದೇವಿ ನನ್ನೊಂದಿಗೆ ಅಭ್ಯಾಸ ಮಾಡುತ್ತಿದ್ದರು ಎಂದಿದ್ದಾರೆ.

ಜೀತೇಂದ್ರ ಮತ್ತು ಶ್ರೀದೇವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಚಿತ್ರವು ದೊಡ್ಡ ಹಿಟ್‌ ಪಡೆಯಿತು. 5 ಕೋಟಿ ರೂಪಾಯಿಗಳನ್ನು ಗಳಿಸಿತು. 1980 ರ ದಶಕದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಹಿಮ್ಮತ್‌ವಾಲಾ ಬಾಲಿವುಡ್‌ನಲ್ಲಿ ಶ್ರೀದೇವಿಗೆ ಒಂದು ಅದ್ಭುತ ಹಿಟ್‌ ನೀಡಿತು.  

ಇದನ್ನೂ ಓದಿ: ನಟಿ ಕಾಜೋಲ್‌ʼಗೆ ಗರ್ಭಪಾತ.! ಶಾರುಖ್ ಸಿನಿಮಾ ಸೆಟ್ʼಗೆ ಹೋಗಿ ಕೆನ್ನೆಗೆ ಬಾರಿಸಿದ್ರು ಅಜಯ್ ದೇವಗನ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News