ಕೊಡಗಿನ ಉಡುಗೆಯಲ್ಲಿ ಮಿಂಚಿದ ರಾಧಾ ಮಿಸ್‌... ಈ ಬಗ್ಗೆ ಹೇಳಿದ್ದೇನು ಗೊತ್ತಾ..!?

ಈ ಧಾರಾವಾಹಿಯಾದ ಬಳಿಕ ರಮಣ ಅಲಿಯಾಸ್‌ ಸ್ಕಂದ ಅಶೋಕ್‌ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಹೆಣ್ಣುಮಕ್ಕಳು ಸಾಧನೆಯ ಹಾದಿಯಲ್ಲಿ ಸಾವಿರಾರು ಮೈಲಿಗಲ್ಲನ್ನು ಸಾಧಿಸಿದ್ದರೂ ಇಂದಿಗೂ ಸಮಾನತೆ, ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಪ್ರತಿನಿತ್ಯ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ. 

Written by - CHARITHA PATEL | Last Updated : May 4, 2022, 06:21 PM IST
  • ಕೊಡಗಿನ ಉಡುಗೆಯಲ್ಲಿ ಮಿಂಚಿದ ಶ್ವೇತಾ ಪ್ರಸಾದ್‌
  • ರಾಧಾ ರಮಣ ಸೀರಿಯಲ್‌ ಫೇಮ್‌ ಶ್ವೇತಾ
  • ಸದ್ಯ ಕಿರುತೆರೆಯಿಂದ ಬ್ರೇಕ್‌ ಪಡೆದುಕೊಂಡಿರುವ ನಟಿ
ಕೊಡಗಿನ ಉಡುಗೆಯಲ್ಲಿ ಮಿಂಚಿದ ರಾಧಾ ಮಿಸ್‌... ಈ ಬಗ್ಗೆ ಹೇಳಿದ್ದೇನು ಗೊತ್ತಾ..!?  title=
Shwetha R Prasad

ರಾಧಾ ರಮಣ ಧಾರಾವಾಹಿ ಅಂದಾಕ್ಷಣ ಮೊದಲು ನೆನಪಾಗೋದು ರಾಧಾ ಹಾಗೂ ರಮಣ. ಇವರಿಬ್ಬರ ವಿಭಿನ್ನ ಲವ್‌ ಸ್ಟೋರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ರಾಧಾ ಮಿಸ್‌ನ ನಮ್‌ ರಮಣ ಬಾಸ್‌ ಸಖತ್‌ ಇಷ್ಟಪಟ್ಟು ಮದುವೆಯಾದ್ರು. ಆ ಬಳಿಕ ಅವರಿಬ್ಬರ ನಡುವೆ ಎಷ್ಟೇ ಸಮಸ್ಯೆ ಬಂದ್ರೂ ಫೇಸ್‌ ಮಾಡಿ ಹೀಗೂ ಇರಬಹುದು ಎಂಬ ಒಂದು ಸಂದೇಶವನ್ನು ಸೀರಿಯಲ್‌ ಮೂಲಕ ಕೊಟ್ರು.

ಇದನ್ನು ಓದಿ: ಮೇ 7-8ಕ್ಕೆ YPL ಶುರು: ಇದು ವಿಷ್ಣುದಾದಾ ಅಭಿಮಾನಿಗಳ ಯಜಮಾನ ಪ್ರೀಮಿಯರ್ ಲೀಗ್

ಈ ಧಾರಾವಾಹಿಯಾದ ಬಳಿಕ ರಮಣ ಅಲಿಯಾಸ್‌ ಸ್ಕಂದ ಅಶೋಕ್‌ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಹೆಣ್ಣುಮಕ್ಕಳು ಸಾಧನೆಯ ಹಾದಿಯಲ್ಲಿ ಸಾವಿರಾರು ಮೈಲಿಗಲ್ಲನ್ನು ಸಾಧಿಸಿದ್ದರೂ ಇಂದಿಗೂ ಸಮಾನತೆ, ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಪ್ರತಿನಿತ್ಯ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ. ಇಂದಿನ ಕಾಲಮಾನಕ್ಕೆ ಅತ್ಯಗತ್ಯವಾಗಿರುವ, ಹೆಣ್ಣೊಬ್ಬಳ ಕನಸು, ಮಹಾತ್ವಾಕಾಂಕ್ಷೆ ಮತ್ತು ಸಾಧನೆಯ ಕಥೆಯನ್ನು ಪ್ರಸ್ತುತಪಡಿಸಿದ ಧಾರಾವಾಹಿ ಸರಸು. ಅಲ್ಲಿ ಲೀಡ್‌ ರೋಲ್‌ನಲ್ಲಿ ಮಿಂಚಿಂದ್ರು. ಬಳಿಕ ಕಾರಣಾಂತರದಿಂದ ಧಾರಾವಾಹಿ ವೈಂಡಪ್‌ ಆಯ್ತು. ಆದಾದ ಬಳಿಕ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್‌ ಫ್ರೆಂಡ್‌ ಅಂದ್ರೆ ರಾಹುಲ್‌ ಎಂಬ ಸೈಕಿಯಾರ್ಟಿಸ್ಟ್‌ ಪಾತ್ರದಲ್ಲಿ ಕಾಣಿಸಿಕೊಂಡ್ರು. ಈ ಪಾತ್ರದಲ್ಲಿ ಸ್ಕಂದನ ನಟನೆಗೆ ಪ್ರೇಕ್ಷಕರು ಶಹಬ್ಬಾಸ್‌ ಅಂದ್ರು. ಇದೀಗ ಸ್ಕಂದ ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಆದ್ರೆ ನಾವು ಇದೀಗ ಮುಖ್ಯವಾಗಿ ಹೇಳಲು ಹೊರಟಿರೋದು ನಮ್‌ ರಾಧಾ ಮಿಸ್‌, ಅಂದ್ರೆ ನಟಿ ಶ್ವೇತಾ ಬಗ್ಗೆ. ನಿಮಗೆಲ್ಲ ಗೊತ್ತಿರುವಂತೆ ಶ್ವೇತಾ ಅವರು ಸದ್ಯ ಸೀರಿಯಲ್‌ನಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದಾರೆ. ಶ್ವೇತಾ ಅವರ ಈ ನಿರ್ಧಾರ ಪ್ರೇಕ್ಷಕರಿಗೆ ಬೇಸರ ಮೂಡಿಸಿದ್ದು, ಮತ್ತೆ ಯಾವಾಗ ಶ್ವೇತಾ ಅವರನ್ನು ಕಿರುತೆರೆ ಮೇಲೆ ನೋಡೋದು ಅನ್ನೋ ಕಾತರದಲ್ಲಿದ್ದಾರೆ. ಸದ್ಯದಲ್ಲೇ ಜನರ ಈ ಕುತೂಹಲಕ್ಕೆ ಬ್ರೇಕ್‌ ಸಿಗಲಿದೆ.
 
ಶ್ವೇತಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ಮಾತ್ರವಲ್ಲದೆ ಆಗಾಗ ಫೋಟೋ ಶೂಟ್‌ಗಳನ್ನು ಕೂಡ ಮಾಡುತ್ತಾ ಇರ್ತಾರೆ. ಶ್ವೇತಾ ಅವರ ಲುಕ್‌ ಮತ್ತು ಆಟಿಟ್ಯೂಡ್‌ಗೆ ಫಿದಾ ಆಗದವರೇ ಇಲ್ಲ. ಶ್ವೇತಾ ಬೋಲ್ಡ್‌ ಲುಕ್‌ಗೂ ಸೈ, ಇಂಡೋ ವೆಸ್ಟರ್ನ್‌ ಲುಕ್‌ನಲ್ಲಿ ಕೂಲ್‌ ಆಗೋದ್ರಲ್ಲೂ ಜೈ. ಅದರಲ್ಲೂ ಟ್ರೆಡಿಷನಲ್‌ ಲುಕ್‌ನಲ್ಲಿ ನಮ್‌ ಕನ್ನಡದ ಬೆಡಗಿ ಸೂಪರೋ ಸೂಪರ್.‌

 

ಇದೀಗ ಶ್ವೇತಾ ಹೋಸ ಟೀಮ್‌ ಆಂಡ್‌ ಟ್ರಡಿಷನಲ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಹೌದು, ಆ ಲುಕ್‌ ಮತ್ತಾವುದೂ ಅಲ್ಲ, ಕೊಡವ ಗೆಟಪ್‌ನಲ್ಲಿ ಶ್ವೇತಾ ಭರ್ಜರಿಯಾಗಿ ಕಾಣಿಸ್ತಿದ್ದಾರೆ. ಕೆಂಪು ಬಣ್ಣದ ಸೀರೆಯನ್ನು ಕೊಡವ ಸ್ಟೈಲ್‌ನಲ್ಲಿ ತೊಟ್ಟು, ಅದಕ್ಕೆ ಬೇಕಾದಂತ ಅಂದ್ರೆ ಕೊಡವ ಸಂಪ್ರದಾಯದಲ್ಲಿ ಬಳಸುವ ಒಡವೆಗಳನ್ನು ಧರಿಸಿ ಮೇಕಪ್‌ ಕೂಡ ಹಾಗೇ ಮಾಡಿಸಿ ಮುದ್ದಾಗಿ ಕಾಣಿಸ್ತಿದ್ದಾರೆ. 

ಸದ್ಯ ಆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಕೊಡವ ಟ್ರಡಿಷನ್‌ ನನಗೆ ತುಂಬಾ ಇಷ್ಟ. ಅದರಲ್ಲೂ ಕೊಡವ ಸ್ಟೈಲ್‌ನಲ್ಲಿ ಸೀರೆ ಉಟ್ಟಿದ್ದು ನಿಜಕ್ಕೂ ಖುಷಿ ನೀಡಿದೆ. ಎಲ್ಲ ಸಂಪ್ರದಾಯಗಳು ತುಂಬಾ ವಿಭಿನ್ನವಾಗಿರುತ್ತವೆ. ಅಲ್ಲಿಯ ಹಬ್ಬಗಳು, ಊಟ ಎಲ್ಲವೂ ಕೂಡ ಡಿಫ್ರೆಂಟ್‌. ಅದೇ ರೀತಿ ಕೊಡಗು ಕಲ್ಚರ್‌ ಕೂಡ ವಿಭಿನ್ನ ಹಾಗೂ ಸುಂದರವಾಗಿರತ್ತೆ. ಯಾವಗ ಬೇಕಾದ್ರೂ ನಾವು ಅಲ್ಲಿಗೆ ಹೋಗಬಹುದು ಎಂಬ ಮನದಾಳದ ಮಾತನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: ಹಿಂದಿ ವಿವಾದ: ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ ಸೋನು ನಿಗಮ್

ಇನ್ನು ಶ್ವೇತಾ ಅವರ ಈ ಲುಕ್‌ ಹಾಗೂ ಅರದಲ್ಲೂ ಅವರು ಬರೆದಿರುವ ಲೈನ್ಸ್‌ ನೋಡಿ ಕೊಡವ ಮಂದಿ ಫುಲ್‌ ಖುಷ್‌ ಆಗಿದ್ದಾರೆ. ಶ್ವೇತಾ ಅವರ ಫೋಟೋಗೆ ಅಭಿಮಾನಿಗಳ ಲೈಕ್ಸ್‌ ಹಾಗೂ ಕಾಮೆಂಟ್‌ಗಳ ಸುರಿಮಳೆಯೇ ಹರಿದು ಬಂದಿದೆ. ಇನ್ನು ನಟನೆಗೆ ಬ್ರೇಕ್‌ ಕೊಟ್ಟಿರುವ ಬಗ್ಗೆ ಫ್ಯಾನ್ಸ್‌ ಕೊಂಚ ಬೇಸರಗೊಂಡಿದ್ದಾರೆ. ಹಾಗಾಗಿ ಶ್ವೇತಾ ಅವರು ಬೇಗ ಆಕ್ಟಿಂಗ್‌ಗೆ ರೀ ಎಂಟ್ರಿ ಕೊಡ್ಲಿ ಎಂಬುದೇ ನಮ್ಮ ಆಶಯ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News