ಫುಲ್‌ ಟೈಟ್‌ ಆಗಿ ತೂಗಾಡುತ್ತ ಪಬ್‌ನಿಂದ ಹೊರ ಬಂದ ಬಿಗ್‌ಬಾಸ್‌ ಸ್ಪರ್ಧಿ..! ವಿಡಿಯೋ ವೈರಲ್‌

Urfi Javed viral video : ನಟಿ ಹಾಗೂ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್ ತನ್ನ ಸ್ನೇಹಿತರೊಂದಿಗೆ ಕುಡಿದು ಪಬ್ ನಿಂದ ಹೊರಗೆ ತೂಗಾಡುತ್ತ ಬಂದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..

Written by - Krishna N K | Last Updated : Jul 17, 2024, 04:50 PM IST
    • ನಟಿ ಹಾಗೂ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್
    • ಉರ್ಫಿ ಕುಡಿದು ಪಬ್ ನಿಂದ ಹೊರಗೆ ತೂಗಾಡುತ್ತ ಬಂದ ವಿಡಿಯೋ ವೈರಲ್‌
    • ಪ್ಯಾಸನ್‌ ಸೆನ್ಸ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌ ಈ ಸುಂದರಿ
ಫುಲ್‌ ಟೈಟ್‌ ಆಗಿ ತೂಗಾಡುತ್ತ ಪಬ್‌ನಿಂದ ಹೊರ ಬಂದ ಬಿಗ್‌ಬಾಸ್‌ ಸ್ಪರ್ಧಿ..! ವಿಡಿಯೋ ವೈರಲ್‌ title=
Urfi Javed

Urfi Javed : ನಟಿ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಶೋ ಮೂಲಕ ಫೇಮಸ್ ಆಗಿದ್ದಾರೆ. ಈ ಶೋನಲ್ಲಿ ಭಾಗವಹಿಸಿ ಮೊದಲ ವಾರದಲ್ಲೇ ಹೊರ ಬಂದಿದ್ದರು. ಅಷ್ಟೇ ಅಲ್ಲದೆ, ಉರ್ಫಿ ತನ್ನ ಚಿತ್ರ ವಿಚಿತ್ರ ಪ್ಯಾಸನ್‌ ಸೆನ್ಸ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌..

ತನ್ನ ಡ್ರೆಸ್ಸಿಂಗ್ ಶೈಲಿಯಿಂದ ಹಲವಾರು ಬಾರಿ ಟೀಕೆಗೆ ಒಳಗಾಗಿದ್ದಾರೆ. ಆದರೂ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಉರ್ಫಿ, ತನ್ನ ಹವ್ಯಾಸ ಮುಂದುವರೆಸಿದ್ದಾರೆ.. 2016 ರಲ್ಲಿ ಪ್ರಸಾರವಾದ ʼಬಡೇ ಭಯ್ಯಾ ಕಿ ದುಲ್ಹನಿಯಾʼ ಧಾರಾವಾಹಿಯಲ್ಲಿ ಅವ್ನಿ ಪಂತ್ ಪಾತ್ರವನ್ನು ನಿರ್ವಹಿಸಿದ್ದಾರೆ. 

ಇದನ್ನೂ ಓದಿ:ಅನಂತ್‌ ಮದುವೆಗೆ ವಿದೇಶದಿಂದ ಬಂದ ಕಾರ್ಡಶಿಯಾನ್ ಸಹೋದರಿಯರು: ದೇವಸ್ಥಾನದಲ್ಲಿ ಪೂಜೆ..ಬಡ ಮಕ್ಕಳಿಗೆ ಊಟ ನೀಡಿ ಮಾನವೀಯಾತೆ ಮೆರೆದ ಚೆಂದುಳ್ಳಿಯರು...

ಸಾದ್ ಫೆರೋ ಕಿ ಹೀರಾ ಫೇರಿ, ಪೇಪನ್ನಾ, ಗಿಗಿ ಮಾ, ಆಯಿ ಮೇರೆ ಹಮ್ಸಾಫರ್ ಮುಂತಾದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಇತ್ತೀಚಿಗೆ ತನ್ನ ಸ್ನೇಹಿತರೊಂದಿಗೆ ಕುಡಿದ ಮತ್ತಿನಲ್ಲಿ ತೂಗಾಡುತ್ತ ಪಬ್‌ನಿಂದ ಹೊರ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಉರ್ಫಿ ಕುಡಿದು ಸ್ವಂತ ನಡೆಯಲಾಗದೆ, ಸ್ನೇಹಿತರ ಸಹಾಯ ಪಡೆದು ನಡೆಯುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.. ಈ ವಿಡಿಯೋಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.. ಒಟ್ಟಾರೆಯಾಗಿ ತಮ್ಮ ವಿಭಿನ್ನ ಪ್ಯಾಶನ್‌ನಿಂದ ಇಷ್ಟು ದಿನ ಗಮನಸೆಳೆದಿದ್ದ ನಟಿ, ಇದೀಗ ಮತ್ತಿನಲ್ಲಿ ಮುಳುಗಿ ನೆಟ್ಟಿಜನ್ಸ್‌ ಟ್ರೋಲ್‌ಗೆ ಒಳಗಾಗಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News