1 ನಿಮಿಷಕ್ಕೆ ಒಂದು ಕೋಟಿ ಚಾರ್ಜ್, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ!

Urvashi Rautela : ವರದಿಗಳ ಪ್ರಕಾರ, ಈ ನಟಿ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ.  

Written by - Chetana Devarmani | Last Updated : Aug 11, 2023, 02:14 PM IST
  • ಬಾಲಿವುಡ್ ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುವುದು ಸಾಮಾನ್ಯ
  • ಈ ನಟಿ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ
  • ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ
1 ನಿಮಿಷಕ್ಕೆ ಒಂದು ಕೋಟಿ ಚಾರ್ಜ್, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ!  title=
Urvashi Rautela

Urvashi Rautela Remuneration : ಬಾಲಿವುಡ್ ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುವುದು ಸಾಮಾನ್ಯ ವಿಚಾರ. ನಟಿ ಊರ್ವಶಿ ರೌಟೇಲಾ ತಮ್ಮ ಮನಮೋಹಕ ಬೋಲ್ಡ್‌ ಲುಕ್‌ಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ. ಸದಾ ಯಾವುದಾದರೂ ವಿಚಾರಕ್ಕೆ ಊರ್ವಶಿ ಸುದ್ದಿಯಲ್ಲಿರುತ್ತಾರೆ. ಈ ಬಾರಿ ನಟಿ ಸೌಂದರ್ಯವಲ್ಲ ಮೂರು ನಿಮಿಷಕ್ಕೆ 3 ಕೋಟಿ ಶುಲ್ಕವನ್ನು ಕೇಳುವ ಮೂಲಕ ಸುದ್ದಿಯಾಗಿದ್ದಾರೆ. ವರದಿಗಳ ಪ್ರಕಾರ, ಊರ್ವಶಿ ರೌಟೇಲಾ ಮುಂಬರುವ ಸೌತ್ ಚಿತ್ರದಲ್ಲಿ ಆಫರ್‌ ಒಂದನ್ನು ಪಡೆದಿದ್ದಾರೆ. ಇದಕ್ಕೆ ಅವರಿಟ್ಟದ್ದು ಮೂರು ಕೋಟಿ ಸಂಭಾವನೆಯ ಬೇಡಿಕೆ. 

ಇದನ್ನೂ ಓದಿ: ಅನಿರುದ್ಧ್ ಅಭಿನಯದ 'chef ಚಿದಂಬರ' ಚಿತ್ರಕ್ಕೆ ಭಾರತಿ ವಿಷ್ಣುವರ್ಧನ್, ಉಪೇಂದ್ರ ಚಾಲನೆ

ವರದಿಗಳ ಪ್ರಕಾರ, ಬೋಯಪತಿ ಶ್ರೀನು-ರಾಮ್ ಪೋತಿನೇನಿ ಅವರ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲು ನಟಿ ಊರ್ವಶಿ ರೌಟೆಲಾ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಊರ್ವಶಿ ರೌಟೇಲಾ ಮೂರು ನಿಮಿಷದ ಹಾಡಿಗೆ ಹೆಜ್ಜೆ ಹಾಕಲು 3 ಕೋಟಿ ಸಂಭಾವನೆ ಕೇಳಿದ್ದಾರಂತೆ. ಈ ಸಂಭಾವನೆ ಅವರಿಗೆ ಸಿಕ್ಕರೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇಲ್ಲಿಯವರೆಗೆ 1 ನಿಮಿಷದ ಅಭಿನಯಕ್ಕೆ ಯಾವ ನಟಿಗೂ 1 ಕೋಟಿ ರೂಪಾಯಿ ಕೊಟ್ಟಿಲ್ಲ.

ನಟಿ ಊರ್ವಶಿ ರೌಟೇಲಾ 2013 ರಲ್ಲಿ ಸಿಂಗ್ ಸಾಹಬ್ ದಿ ಗ್ರೇಟ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆ ಊರ್ವಶಿ ತೆರೆ ಹಂಚಿಕೊಂಡಿದ್ದಾರೆ. ನಂತರ ನಟಿ 2014 ರಲ್ಲಿ ಮಿಸ್ಟರ್ ಐರಾವತ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಾಲಿವುಡ್‌ನಲ್ಲಿ ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4, ಪಾಗಲ್‌ಪಂತಿಯಂತಹ ಅನೇಕ ಚಿತ್ರಗಳಲ್ಲಿ ಊರ್ವಶಿ ರೌಟೇಲಾ ತಮ್ಮ ನಟನೆಯ ಮ್ಯಾಜಿಕ್ ತೋರಿಸಿದ್ದಾರೆ. ನಟಿ 2022 ರಲ್ಲಿ ದಿ ಲೆಜೆಂಡ್ ಚಿತ್ರದೊಂದಿಗೆ ತಮಿಳು ಉದ್ಯಮಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಜೈಲರ್‌ ನೋಡಿ ಹ್ಯಾಟ್ರಿಕ್‌ ಹೀರೋಗೆ ಬಹುಪರಾಕ್; ಶಿವಣ್ಣನ ಪಾತ್ರಕ್ಕೆ ತಮಿಳು ಮಂದಿ ರಿಯಾಕ್ಷನ್‌ ಹೇಗಿತ್ತು ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News