ಜೈಲರ್‌ ನೋಡಿ ಹ್ಯಾಟ್ರಿಕ್‌ ಹೀರೋಗೆ ಬಹುಪರಾಕ್; ಶಿವಣ್ಣನ ಪಾತ್ರಕ್ಕೆ ತಮಿಳು ಮಂದಿ ರಿಯಾಕ್ಷನ್‌ ಹೇಗಿತ್ತು ಗೊತ್ತಾ..?

Shivarajkumar Role in Jailer Film : ಜೈಲರ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರ ಸಣ್ಣ ಪಾತ್ರಕ್ಕೆ ದೊಡ್ಡ ಮಟ್ಟದ ರೆಸ್ಪಾನ್ಸ್‌ ಸಿಕ್ಕಿದೆ. ತಮಿಳುನಾಡಿನಲ್ಲಿ ಸಿನಿಮಾ ವೀಕ್ಷಿಸಿದವರು ರಜನಿಕಾಂತ್‌ ಅವರನ್ನು ಮಾತ್ರವಲ್ಲದೇ ಸೀವಣ್ಣ ಅವರಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇನ್ಮೇಲೆ ಶಿವಣ್ಣ ಅವರ ಸಿನಿಮಾ ಮಿಸ್‌ ಮಾಡದೇ ನೋಡುತ್ತಿವಿ ಎಂದು ಹೇಳುತ್ತಿದ್ದಾರೆ.   

Written by - Savita M B | Last Updated : Aug 11, 2023, 12:47 PM IST
  • ಜೈಲರ್‌ ಆಗಸ್ಟ್‌ 10 ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ.
  • ರಜನಿಯ ಸ್ಟೈಲ್‌ ಹಾಗೂ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.
  • ಶಿವಣ್ಣ ಅವರ ಸಣ್ಣ ಪಾತ್ರದಲ್ಲಿ ಅವರ ಖದರ್‌ ಕಂಡು ತಮಿಳಿಗರು ನಿಬ್ಬೆರಗಾಗಿದ್ದಾರೆ.
ಜೈಲರ್‌ ನೋಡಿ ಹ್ಯಾಟ್ರಿಕ್‌ ಹೀರೋಗೆ ಬಹುಪರಾಕ್; ಶಿವಣ್ಣನ ಪಾತ್ರಕ್ಕೆ ತಮಿಳು ಮಂದಿ ರಿಯಾಕ್ಷನ್‌ ಹೇಗಿತ್ತು ಗೊತ್ತಾ..?  title=

Jailer : ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಬಹುನಿರೀಕ್ಷಿತ ಸಿನಿಮಾ ಜೈಲರ್‌ ಆಗಸ್ಟ್‌ 10 ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ರಜನಿಯ ಸ್ಟೈಲ್‌ ಹಾಗೂ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಸಖತ್‌ ಆಗಿ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಂಡ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರ ನಟನೆಗೂ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಶಿವಣ್ಣ ಅವರ ಸಣ್ಣ ಪಾತ್ರದಲ್ಲಿ ಅವರ ಖದರ್‌ ಕಂಡು ತಮಿಳಿಗರು ನಿಬ್ಬೆರಗಾಗಿದ್ದಾರೆ.

ಜೈಲರ್‌ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ತೆರೆಮೇಲೆ ಕ್ಷಣಹೊತ್ತು ಬಂದು ಹೋಗುವ ಶಿವಣ್ಣನಿಗೆ ತಮಿಳು ಪ್ರೇಕ್ಷಕರು ಬಹುಪರಾಕ್‌ ಹೇಳಿದ್ದಾರೆ. ಪಂಚೆಯಲ್ಲಿ ಅವರ ನಡಿಗೆ.. ಆ‌ ಸ್ಟೈಲ್..ಖದರ್‌ ಸಿಗಾರ್‌ ಸೇದುವ ರೀತಿ..ಕಣ್ಣಿನಲ್ಲೇ ಎದುರಾಳಿಗಳಿಗೆ ಗುಂಡಿಕ್ಕುವ ಆ ನೋಟ ಎಲ್ಲರಿಗೂ ಹುಚ್ಚೆಬ್ಬಿಸಿದೆ. 

ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಶಿವಣ್ಣಂದೇ ಹಾವಳಿ. ಚಿತ್ರದಲ್ಲಿನ ಆ ದೃಶ್ಯಗಳನ್ನು ಶೇರ್‌ ಮಾಡಿಕೊಂಡು ಶಿವಣ್ಣನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ತಮಿಳು ಮಂದಿ. 

ಇದನ್ನೂ ಓದಿ-Adipurush OTT: ಸದ್ದಿಲ್ಲದೇ ಓಟಿಟಿಗೆ ಬಂದ ಆದಿಪುರುಷ್‌..ತಡರಾತ್ರಿಯಿಂದಲೇ ಶುರುವಾಯ್ತು ಸ್ಟ್ರೀಮಿಂಗ್‌!

ಶಿವಣ್ಣನ ಪಾತ್ರ ನೋಡಿ ತಮಿಳು ಫ್ಯಾನ್ಸ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ..? 
ಶಿವಣ್ಣನ ಅಸಲಿ ಖದರ್‌ ಇದು..ಕೆಲವು ನಿರ್ದೇಶಕರನ್ನು ಹೊರತುಪಡಿಸಿ ಉಳಿದವರಿಗೆ ಈ ನಟನನ್ನು ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಿಲ್ಲ. 
ಶಿವಣ್ಣನ ಆ ಖದರ್‌..ಆ ವಾಕಿಂಗ್‌ ಸ್ಟೈಲ್..ಜಸ್ಟ್‌ ವಾವ್!‌
ವಿಕ್ರಮ್‌ ಸಿನಿಮಾದಲ್ಲಿ ರೂಲೆಕ್ಸ್‌ ಹೇಗೋ, ಜೈಲರ್‌ ಸಿನಿಮಾದಲ್ಲಿ ಶಿವಣ್ಣ; ಅವರು ತೆರೆಮೇಲೆ ಕಾಣುವ ರೀತಿಯೇ ಬೊಂಬಾಟ್‌
ಇನ್ನುಮುಂದೆ ತಮಿಳಿನಲ್ಲೂ ನಿಮ್ಮ ಸಿನಿಮಾಗಳದ್ದೇ ಅಬ್ಬರ 

ಹೀಗೆಲ್ಲಾ ಕಾಮೆಂಟ್‌ ಮಾಡುವ ಮೂಲಕ ತಮಿಳು ಅಭಿಮಾನಿಗಳು ಶಿವಣ್ಣ ಅವರ ಪಾತ್ರಕ್ಕೆ ಹಾಗೂ ನಟನೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಹುಟ್ಟಿದ್ದು ಚೆನ್ನೈನಲ್ಲೇ. ಅವರಿಗೆ ತಮಿಳು ಮಂದಿಯೂ ಹತ್ತಿರವರೇ. ತಮಿಳು ಭಾಷೆಯನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಕನ್ನಡದಲ್ಲಿ ಸ್ಟಾರ್‌ ನಟನಾಗಿರುವ ಹ್ಯಾಟ್ರಿಕ್‌ ಹಿರೋ ಶಿವರಾಜ್ ಕುಮಾರ್‌ ಇದೀಗ ಜೈಲರ್‌ ಸಿನಿಮಾ ಮೂಲಕ ತಮಿಳಿಗೂ ಮಾಸ್‌ ಎಂಟ್ರಿ ಕೊಟ್ಟು ಅಭಿಮಾನಿಗಳು ಫಿದಾ ಆಗುವಂಗತೆ ಮಾಡಿದ್ದಾರೆ. ಸದ್ಯ ತಮಿಳು ಪ್ಯಾನ್ಸ್‌ ಕನ್ನಡ ಸಿನಿಮಾ ಮಿಸ್‌ ಮಾಡುವುದಿಲ್ಲ ಎಂಬಂತಹ ಸಾವಿರಾರು ಟ್ವಿಟ್‌ಗಳು ಹರಿದಾಡುತ್ತಿವೆ.

ಇದನ್ನೂ ಓದಿ-ಜೈಲರ್ ನಲ್ಲಿ ಶಿವರಾಜ್ ಕುಮಾರ್ ಜಬರ್ದಸ್ತ್ ರೋಲ್ ! ರಜನಿಯನ್ನೇ ಮಂಕಾಗಿಸಿದರೆ ಹ್ಯಾಟ್ರಿಕ್ ಹಿರೋ ...

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News